ಚಾಮರಾಜನಗರ:ಆಮ್ಲಜನಕ ಕೊರತೆಯಿಂದ, ವೈದ್ಯಕೀಯ ಸೌಲಭ್ಯದ ಅವ್ಯವಸ್ಥೆಯಿಂದ ಸಾಲುಸಾಲು ಮರಣ ಸಂಭವಿಸಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಇಲ್ಲಿಂದ ಸೋಂಕಿತನೊಬ್ಬ ನಾಪತ್ತೆಯಾಗಿದ್ದು, ಬಳಿಕ ಆಸ್ಪತ್ರೆಯ ಶವಾಗಾರದಲ್ಲೇ ಆತನ ಶವ ಪತ್ತೆಯಾಗಿದೆ!
ಚಾಮರಾಜನಗರ ತಾಲೂಕು ಆಲ್ದೂರು ಗ್ರಾಮದ ಸುರೇಶ್ ಮೃತಪಟ್ಟಿರುವ ಸೋಂಕಿತ. ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್ ನಾಪತ್ತೆಯಾಗಿದ್ದರೂ, ಆಸ್ಪತ್ರೆಯವರು ಆತನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ತನ್ನ ಪತಿ ಕಾಣಿಸುತ್ತಿಲ್ಲ ಎಂದು ಸುರೇಶ್ ಪತ್ನಿ ಎಲ್ಲೆಡೆ ಹುಡುಕಾಡಿದ್ದಾರೆ. ಪತಿಯ ಬಗ್ಗೆ ಆಸ್ಪತ್ರೆಯಲ್ಲೂ ವಿಚಾರಿಸಿದ್ದಾರೆ. ಆದರೂ ಎಲ್ಲಿಯೂ ಸರಿಯಾದ ಮಾಹಿತಿ ಸಿಗದೆ ಬೇಸತ್ತ ಆಕೆ ಕೊನೆಗೆ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಕರೋನಾ ಸೋಂಕಿತ ತಮ್ಮ ಪತಿ ಕಾಣಿಸುತ್ತಿಲ್ಲ, ಆಸ್ಪತ್ರೆಯಲ್ಲಿ ಕೇಳಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅವರು ಪತ್ರಕರ್ತರ ಬಳಿ ಅಲವತ್ತುಕೊಂಡಿದ್ದಾರೆ. ಬಳಿಕ ಆಕೆಯ ಪತಿಯ ಶವ ಆಸ್ಪತ್ರೆಯ ಶವಾಗಾರದಲ್ಲಿರುವುದು ಮಾಧ್ಯಮದವರ ಮಧ್ಯಪ್ರವೇಶದಿಂದಾಗಿ ತಿಳಿದುಬಂತು.
ಇದನ್ನೂ ಓದಿ:ನಮ್ಮ ಜಿಲ್ಲೆಯಲ್ಲೂ ಆಕ್ಸಿಜನ್ ಇನ್ನೇನು ಮುಗಿಯುತ್ತಿದೆ, ಇವತ್ತು ರಾತ್ರಿಗೆ ಏನಾಗುತ್ತೋ?!: ಆತಂಕ ವ್ಯಕ್ತಪಡಿಸಿದ ಸಚಿವ..
ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಇಂದು ಬೆಳಗ್ಗೆ ಇದೇ ಜಿಲ್ಲಾಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಸುರೇಶ್ ಶವವಾಗಿ ಪತ್ತೆಯಾಗಿದ್ದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅದನ್ನು ಅನಾಥ ಶವ ಎಂದು ಭಾವಿಸಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದರು. ಇಷ್ಟೆಲ್ಲ ನಡೆದಿರುವುದು ತಿಳಿಯದ ಸುರೇಶ್ ಪತ್ನಿ, ಪತಿಗಾಗಿ ಎಲ್ಲೆಡೆ ಹುಡುಕಾಡುವಂತೆ ಆಗಿತ್ತು.
ಸುರೇಶ್ ಮೃತದೇಹ ಶವಾಗಾರದಲ್ಲಿ ಕಂಡುಬಂದಿದ್ದನ್ನು ತಿಳಿದ ಬಳಿಕ ಅವರ ಕುಟುಂಬಸ್ಥರು ಗೋಳಾಡಿದ್ದು, ಕರೊನಾ ರೋಗಿಯನ್ನು ಹೊರಹೋಗಲು ಬಿಟ್ಟು ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕರೊನಾ ಸೋಂಕಿತ ಎಂದು ಗೊತ್ತಾಗದೆ ಯಾವುದೇ ನಿಯಮ ಪಾಲಿಸದೆ ಪೊಲೀಸರು ಸುರೇಶ್ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಇರಿಸಿದ್ದಾರೆ ಎಂದು ಪೊಲೀಸರನ್ನೂ ಸಾರ್ವಜನಿಕರು ಟೀಕಿಸಿದ್ದಾರೆ.
ದುರಂತದ ನಡುವೆ ಒಂದು ವಿಚಿತ್ರ ಘಟನೆ : ತಾಯಿಯ ಶವ ತರಲು ಒಳಹೋದವಗೆ ಕಾದಿತ್ತು ಆಶ್ಚರ್ಯ !

ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ! ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ…

ಚಾಮರಾಜನಗರ ದುರಂತಕ್ಕೆ ಕ್ಷಮೆಯೇ ಇಲ್ಲ… ಆಕ್ಸಿಜನ್ ಕೊರತೆಯಿಂದಾಗಿದ್ದರೆ ಸರ್ಕಾರವೇ‌ ಹೊಣೆ: ಸಿ.ಟಿ.ರವಿ

ಚಾಮರಾಜನಗರ ಆಸ್ಪತ್ರೆಯಲ್ಲಿ ತಡರಾತ್ರಿ 20ಕ್ಕೂ ಹೆಚ್ಚು ಮಂದಿ ಸಾವು: ವರದಿ ಸಲ್ಲಿಸಲು ಡಿಜಿಪಿಗೆ ಸೂಚನೆ

ಚಾಮರಾಜನಗರದಲ್ಲಿ 24 ಮಂದಿ ಸಾವು: ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪ ಗರಂ

ಆಸ್ಪತ್ರೆ ಒಳಗೂ ಹೆಣಗಳ ರಾಶಿ, ಹೊರಗೂ ಹೆಣ… ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುತ್ತೆ ಚಾಮರಾಜನಗರದ ಘಟನೆ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್​ ಕೊರತೆ: 20ಕ್ಕೂ ಹೆಚ್ಚು ಕರೊನಾ ರೋಗಿಗಳ ಸಾವು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
