ಬೆಂಗಳೂರು:ಮೊನ್ನೆಮೊನ್ನೆಯಷ್ಟೇ ಕನ್ನಡದಲ್ಲಿ ತಪ್ಪು ತಪ್ಪಾಗಿ ಆದೇಶ ಹೊರಡಿಸಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಮತ್ತೆ ಸಾರ್ವಜನಿಕ ಟೀಕೆಗೆ ಒಳಗಾಗುವ ಲಕ್ಷಣಗಳು ಗೋಚರಿಸಿವೆ.
ಈ ಕುರಿತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಗಮನ ಸೆಳೆದಿದ್ದಲ್ಲದೆ, ಇದೇ ಅವಕಾಶ ಬಳಸಿಕೊಂಡು ಸರ್ಕಾರದ ವಿರುದ್ಧ ಟೀಕೆಯನ್ನೂ ಮಾಡಿದ್ದಾರೆ. “ರಾಜ್ಯದ ಬಿಜೆಪಿ ಸರ್ಕಾರ 2021ರಲ್ಲಿಯೇ ಉಳಿದುಬಿಟ್ಟಿದೆ, ‘ಟೇಕ್ ಆಪ್’ ಆಗಿಯೇ ಇಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಆಗಿದ್ದೇನು?: 2022ನೇ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆದಿದೆ. ಈ ಕುರಿತು ಕಾರ್ಯಸೂಚಿಯ ಕಿರುಪುಸ್ತಕದ ಮುಖಪುಟದಲ್ಲಿ ಇಸವಿಯನ್ನು ತಪ್ಪಾಗಿ ಬರೆಯಲಾಗಿದೆ. ಅಂದರೆ 2022ರ ಬದಲು 2021 ಎಂದು ನಮೂದಿಸಲಾಗಿದೆ. ಈ ಮೂಲಕ ಸರ್ಕಾರ ಹಳೆಯ ಕಾರ್ಯಸೂಚಿಯನ್ನೇ ಹೊಸದಾಗಿ ಮುದ್ರಿಸಿ ಎಡವಟ್ಟು ಮಾಡಿಕೊಂಡಿತೇ? ಎಂಬ ಅನುಮಾನ ಮೂಡುವಂತಿದೆ.
.@BJP4Karnatakaಸರ್ಕಾರ2021ರಲ್ಲಿಯೇ ಉಳಿದುಬಿಟ್ಟಿದೆ'ಟೇಕ್ ಆಪ್'ಆಗಿಯೇ ಇಲ್ಲ ಎನ್ನುವುದಕ್ಕೆಬೇರೆ ಸಾಕ್ಷಿ ಬೇಕೇ?pic.twitter.com/vfPbl79iim
— Siddaramaiah (@siddaramaiah)July 19, 2022

ಕನ್ನಡ ತಪ್ಪಾಗಿ ಬರೆದು ಸರ್ಕಾರಿ ಆದೇಶ; ಸಂಬಂಧಿತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ..

ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
