ಬೆಂಗಳೂರು:ಸದ್ಯ ಭಾರಿ ಸುದ್ದಿಯಲ್ಲಿರುವ 545 ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಬೆನ್ನಿಗೇ ಮತ್ತೊಂದು ಪಿಎಸ್​ಐ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಕುರಿತ ಮಾಹಿತಿ ಬೆಳಕಿಗೆ ಬಂದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗೆ ಪತ್ರಮುಖೇನ ದೂರು ಸಲ್ಲಿಸಿದ್ದಾರೆ.
ವಿಶೇಷವೆಂದರೆ ಈಗಾಗಲೇ ಒಂದು ಪ್ರಕರಣದಲ್ಲಿ ಆರೋಪಿ ಆಗಿರುವ ದಿವ್ಯಾ ಹಾಗರಗಿ ಹೆಸರೇ ಈ ನೇಮಕಾತಿ ಅಕ್ರಮದಲ್ಲೂ ಕೇಳಿ ಬಂದಿದೆ. ಯಾದಗಿರಿಯ ಶ್ರೀನಿವಾಸ ಕಟ್ಟಿ ಎನ್ನುವವರು ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.
2016-17ರ ಬ್ಯಾಚ್​ನ 59 ಪಿಎಸ್​ಐ ನೇಮಕಾತಿಯಲ್ಲೂ ಅಕ್ರಮದ ನಡೆದಿದೆ. ಅದರಲ್ಲಿ ದಿವ್ಯಾ ಹಾಗರಗಿ ಹಾಗೂ ಆರ್.ಡಿ.ಪಾಟೀಲ್ ಶಾಮೀಲಾಗಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಬ್ಲೂಟೂಥ್ ಡಿವೈಸ್​ ಮೂಲಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿರುವ ಕಟ್ಟಿ, ಈ ಅಕ್ರಮದಲ್ಲಿ ಲಕ್ಷಾಂತರ ರೂ. ನೀಡಿ 16 ಮಂದಿ ಪಿಎಸ್​ಐ ಆಗಿ ಕರ್ತವ್ಯದಲ್ಲಿರುವವರ ಹೆಸರು, ಮೊಬೈಲ್​ಫೋನ್ ನಂಬರ್ ಕೂಡ ದೂರಿನಲ್ಲಿ ಲಗತ್ತಿಸಿದ್ದಾರೆ. 59 ಮಂದಿ ಪಿಎಸ್​ಐ ಅಭ್ಯರ್ಥಿಗಳ ಪಟ್ಟಿ ತೆಗೆಸಿ ಸಿಐಡಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಿವ್ಯಾ ಹಾಗರಗಿ ಸೇರಿ 6 ಆರೋಪಿಗಳಿಗೆ ಅರೆಸ್ಟ್ ವಾರಂಟ್ ಜಾರಿ; ಪಿಎಸ್​​ಐ ನೇಮಕ ಅಕ್ರಮ ಪ್ರಕರಣ

ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್​-2’ ‘ವಯಲೆನ್ಸ್​’!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve + 18 =
Remember me
