ಕಾರ್ಕಳ:ಕಂಬಳ ಕ್ರೀಡೆಯಲ್ಲಿ ಉಸೇನ್​ ಬೋಲ್ಟ್​ಗಿಂತ ವೇಗವಾಗಿ ಶ್ರೀನಿವಾಸ್​ ಗೌಡ ಓಡಿ ಸುದ್ದಿಯಲ್ಲಿದ್ದರು. ಆದರೆ ಶ್ರೀನಿವಾಸ್​ ಗೌಡಗಿಂತ ವೇಗವಾಗಿ ಓಡುವ ಮತ್ತೊಬ್ಬ ಉಸೇನ್​ ಬೋಲ್ಟ್​ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಜಗೋಳಿಯ ನಿಶಾಂತ್​ ಶೆಟ್ಟಿ ಕಂಬಳ ಕ್ರೀಡೆಯಲ್ಲಿ 143 ಮೀಟರ್​ ಓಡಲು ತೆಗೆದುಕೊಂಡಿದ್ದು ಕೇವಲ 13.61 ಸೆಕೆಂಡ್​. ವೇಣೂರಿನಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 143 ಮೀಟರ್​ ದೂರವನ್ನು ಕೇವಲ 13.61 ಸೆಕೆಂಡ್​ನಲ್ಲಿ ನಿಶಾಂತ್​ ಓಡಿದ್ದಾರೆ. ಇದೇ ದೂರವನ್ನು ಓಡಲು ಶ್ರೀನಿವಾಸ್​ ಶೆಟ್ಟಿ 13.62 ಸೆಕೆಂಡ್​ನಲ್ಲಿ ಓಡಿದ್ದರು. ಆದರೆ ಇದೀಗ ನಿಶಾಂತ್​ ಶ್ರೀನಿವಾಸ್​ಗಿಂತ 0.01 ಸೆಕೆಂಡ್​ ವೇಗವಾಗಿ ಓಡಿದ್ದಾರೆ.
ಶ್ರೀನಿವಾಸ್​ ಗೌಡರ ವೇಗವನ್ನು ನೋಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅವರನ್ನು ಗುರುತಿಸಿತ್ತು. ನಿನ್ನೆ (ಫೆ.17) ಬೆಂಗಳೂರಿನಲ್ಲಿ ಶ್ರೀನಿವಾಸ್​ ಗೌಡ ಅವರಿಗೆ ರಾಜ್ಯದ ಮುಖ್ಯಮಂತ್ರಿ ಸನ್ಮಾನ ಮಾಡಿದ್ದರು. ಇದೀಗ ಶ್ರೀನಿವಾಸ್​ ಗೌಡನ ದಾಖಲೆಯನ್ನು ನಿಶಾಂತ್​ ಶೆಟ್ಟಿ ಮುರಿದಿದ್ದು ಅವರಿಗೆ ಯಾವ ರೀತಿಯಲ್ಲಿ ಸ್ಪಂದನೆ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
