ಬೆಂಗಳೂರು:ವಿಧಾನ ಮಂಡಲ ಅಧಿವೇಶನಕ್ಕೆ ಇನ್ನು ಏಳು ದಿನ ಬಾಕಿ ಇದ್ದು, ವಿಪಕ್ಷವನ್ನು ಎದುರಿಸಲು ಮತ್ತು ಸುಗಮ ಕಲಾಪಕ್ಕೆ ಸರ್ಕಾರ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.
ರಾಜ್ಯಪಾಲರ ಭಾಷಣ, ಅದರ ಮೇಲಿನ ಚರ್ಚೆಗೆ ಇರುವ ವಿಷಯಗಳಿಗೆ ಕೊಡಬೇಕಾದ ಪ್ರತ್ಯುತ್ತರ, ಬಳಿಕ ಬಜೆಟ್ ಮಂಡನೆ, ಬಜೆಟ್ ಮೇಲಿನ ಚರ್ಚೆ, ಪ್ರತಿಪಕ್ಷದ ಕಡೆಯಿಂದ ಬರಬಹುದಾದ ನಿರ್ದಿಷ್ಟ ದಾಳಿಯನ್ನು ಹಿಮ್ಮೆಟ್ಟಿಸಲು ತನ್ನದೇ ಆದ ಅಸ್ತ್ರವನ್ನು ಆಡಳಿತ ಪಕ್ಷ ಸಿದ್ಧಪಡಿಸಿಕೊಳ್ಳುತ್ತಿದೆ. ಈ ಹಿಂದೆ ನಡೆದ ಅಧಿವೇಶನ ಶಾಸಕರ ಪ್ರಮಾಣ ವಚನ, ಸ್ಪೀಕರ್ ಚುನಾವಣೆಗೆ ಸೀಮಿತವಾಗಿತ್ತು. ಜುಲೈ 3ರಿಂದ 14ರವರೆಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ನೈಜ ಕಾಳಗಕ್ಕೆ ಅಖಾಡ ಹರಳುಕಟ್ಟುತ್ತಿದೆ.
ಅಧಿವೇಶನವು ನಿರಂತರವಾಗಿ 12 ದಿನ ನಡೆದರೂ ಎರಡು ಭಾಗಗಳಾಗಿ ವಿಭಜನೆಯಾಗಿರುತ್ತದೆ. ಪೂರ್ವಾರ್ಧದಲ್ಲಿ ರಾಜ್ಯಪಾಲರ ಭಾಷಣ ಮತ್ತು ಭಾಷಣದ ಮೇಲಿನ ಚರ್ಚೆ, 10 ವಿಧೇಯಕಗಳ ಮಂಡನೆ, ಪರ್ಯಾಲೋಚನೆ, ಎರಡನೇ ಅವಧಿಯಲ್ಲಿ ಬಜೆಟ್ ಮಂಡನೆ, ಬಜೆಟ್ ಮೇಲಿನ ಚರ್ಚೆ ಹಾಗೂ ಅನುಮೋದನೆ ಪ್ರಕ್ರಿಯೆ ನಡೆಯುವುದು.
ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಲು ಸಂಪುಟ ಸಭೆ ಅನುಮೋದನೆ ನೀಡಿದ್ದು, ಈ ಅಧಿವೇಶನದಲ್ಲಿ ವಿಧೇಯಕ ಹಿಂಪಡೆಯುವ ಪ್ರಕ್ರಿಯೆ ವಿಧಾನ ಮಂಡಲದಲ್ಲಿ ನಡೆಯುವುದು. ಸಹಜವಾಗಿ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಿರುವ ಕಾರಣ ಜಟಾಪಟಿ ಜೋರಾಗಿಯೇ ಇರಲಿದೆ. ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿನ ಗೊಂದಲ ಮತ್ತು ಸಚಿವರು ನೀಡಿದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಗಳು ಸರ್ಕಾರದ ಮೇಲೆ ಮುಗಿ ಬೀಳುವುದನ್ನು ನಿರೀಕ್ಷಿಸಿರುವ ಆಡಳಿತ ಪಕ್ಷ ಕಾಂಗ್ರೆಸ್ ಅಕ್ಕಿ ನೀಡಲು ಹಿಂದೇಟು ಹಾಕಿದ ಕೇಂದ್ರ ಸರ್ಕಾರದ ನಿಲುವು ಮತ್ತು ಆಹಾರ ನಿಗಮದ ಪತ್ರಗಳನ್ನು ದಾಖಲೆಯಾಗಿ ಬಳಸಿಕೊಂಡು ಬಿಜೆಪಿಯನ್ನು ಕಟ್ಟಿಹಾಕಲು ಮಾನಸಿಕವಾಗಿ ಸಜ್ಜಾಗಿದೆ.
ಮತ್ತೊಂದು ಪ್ರಮುಖ ಚರ್ಚಾ ಸಂಗತಿ ಎಂದರೆ ಗ್ಯಾರೆಂಟಿ ಯೋಜನೆಯ ಅಡ್ಡ ಪರಿಣಾಮ ಹಾಗೂ ರಾಜ್ಯದ ಬೊಕ್ಕಸದ ಮೇಲಿನ ದೂರಗಾಮಿ ಪರಿಣಾಮ ಕುರಿತು ರಾಜ್ಯದ ಗಮನ ಸೆಳೆಯಲು ಪ್ರತಿಪಕ್ಷಕ್ಕೆ ಅಸ್ತ್ರಗಳುಂಟು. ಅಧಿವೇಶನದ ಒಳ ಹೊರಗೆ ಶಕ್ತಿ ಯೋಜನೆ ಸಂತ್ರಸ್ತರ ಪರ ದನಿ ಎತ್ತುವುದು ಮತ್ತು ಹೋರಾಟಕ್ಕೆ ಅವಕಾಶವೂ ಇದೆ.
ಹತ್ತು ವಿಧೇಯಕ:ಮತಾಂತರ ನಿಷೇಧ ಕಾಯ್ದೆ ವಾಪಸ್, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಹತ್ತು ವಿಧೇಯಕ ಕುರಿತು ವಿಧಾನ ಮಂಡಲದಲ್ಲಿ ಪರ್ಯಾಲೋಚನೆ ನಡೆಯುವುದು. ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್ ಮುಗಿಸಿದವರ ವೈದ್ಯರ ಗ್ರಾಮೀಣ ಸೇವೆಯನ್ನು ನಗರ ಪ್ರದೇಶಕ್ಕೂ ಬಳಸಿಕೊಳ್ಳಲೂ ಸಹ ಒಂದು ಕಾಯ್ದೆ ಪ್ರಸ್ತುತಪಡಿಸಲಾಗುತ್ತಿದೆ. ಈಗಾಗಲೆ ಕಾನೂನು ಇಲಾಖೆ ವಿಧಾನ ಮಂಡಲದಲ್ಲಿ ಮಂಡನೆಯಾಗುವ ಕಾಯ್ದೆಯಾಗುವ ಕಾನೂನುಗಳ ಹಿಂದುಮುಂದು ವಿಚಾರವಾಗಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದೆ.
ಬೆಂಗಳೂರು:ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ತರಬೇತಿ ಶಿಬಿರ ಸೋಮವಾರದಿಂದ ಮೂರು ದಿನ ನೆಲಮಂಗದಲ್ಲಿರುವ ಕ್ಷೇಮವನದಲ್ಲಿ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಬಿರ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಫರೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇತರರು ಭಾಗಹಿಸುವರು.
ಮೊದಲ ದಿನ ಮಧ್ಯಾಹ್ನ ಸಚಿವ ಎಚ್.ಕೆ. ಪಾಟೀಲ್ ಸದಸ್ಯರು ಸದನದಲ್ಲಿ ಭಾಗವಹಿಸುವಿಕೆ, ಅಧಿವೇಶನದ ವಿವರ, ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ಕುರಿತು ಉಪನ್ಯಾಸ ನೀಡುವರು. ಸಚಿವ ಕೃಷ್ಣ ಬೈರೇಗೌಡ ನಿಲುವಳಿ ಸೂಚನೆ, ನಿಯಮ 69, ವಿಶ್ವಾಸ ಮತ್ತು ಅವಿಶ್ವಾಸ ನಿರ್ಣಯಗಳ ಬಗ್ಗೆ ಮಾತನಾಡುವರು. ಮಾಜಿ ಸಭಾಪತಿ ಬಿ.ಎಲ್. ಶಂಕರ್, ರಾಜ್ಯಪಾಲರ ಭಾಷಣ, ಆಯವ್ಯಯ, ಪ್ರಕ್ರಿಯೆ, ಅಂಗೀಕಾರ ಕುರಿತು ಮಾತನಾಡುವರು. ಬ್ರಹ್ಮಕುಮಾರೀಸ್ ಸಂಸ್ಥೆಯ ಬಿ.ಕೆ. ವೀಣಾ ಮತ್ತು ಬಿ.ಕೆ. ಭುವನೇಶ್ವರಿ ಉಪನ್ಯಾಸ ನೀಡುವರು. ರಾತ್ರಿ 7ಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಜತೆಗೆ ಸಂವಾದ ನಡೆಯಲಿದೆ.
ಎರಡನೇ ದಿನವಾದ ಮಂಗಳವಾರ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸನ ಪ್ರಕ್ರಿಯೆ, ಉಭಯ ಸದನಗಳ ಸಂಬಂಧದ ಬಗ್ಗೆ ಮಾತನಾಡುವರು. ಮಾಜಿ ಸಚಿವ ಟಿ.ಬಿ. ಜಯಚಂದ್ರ ಶಾಸಕರ ಕರ್ತವ್ಯ, ಜವಾಬ್ದಾರಿ, ಹಕ್ಕು ಬಾದ್ಯತೆಗಳ ಬಗ್ಗೆ ಮಾತನಾಡುವರು. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಶಾಸಕರ ನೀತಿ ನಿಯಮ, ಸದನದಲ್ಲಿ ಪಾಲಿಸಬೇಕಾದ ನಿಯಮ, ಸಂಸದೀಯ ಭಾಷೆ, ಜನಮೆಚ್ಚಿದ ಶಾಸಕನಾಗುವುದು ಹೇಗೆ ಎಂಬ ವಿಚಾರದಲ್ಲಿ ಉಪನ್ಯಾಸ ನೀಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಾಮರಸ್ಯ, ಅಭಿವೃದ್ಧಿ ಕರ್ನಾಟಕ, ಬಲಿಷ್ಠ ಭಾರತ ವಿಷಯದಲ್ಲಿ ಮಾತನಾಡುವರು. ಸಂಜೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂವಾದ ನಡೆಯಲಿದೆ.
ಕೊನೆಯ ದಿನವಾದ ಬುಧವಾರ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು, ವಿಧಾನಮಂಡಲ ಸಮಿತಿಗಳು, ಅವುಗಳನ್ನು ಬಲಪಡಿಸುವ ಬಗ್ಗೆ ಮಾತನಾಡುವರು. ಮಹಮ್ಮದ್ ಕುಂಞ ಅವರು ಜನರು ಮತ್ತು ಜನಪ್ರತಿನಿಧಿಗಳ ನಡುವಿನ ಸಂಬಂಧದ ಬಗ್ಗೆ, ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಅವರು ಶಾಸನಸಭೆಯಲ್ಲಿ ಹಾಸ್ಯಭರಿತ ನಿರ್ವಹಣೆ ಹಾಗೂ ಪಿಆರ್​ಎಸ್ ಸಂಸ್ಥೆಯ ಪ್ರತಿನಿಧಿ ಶಾಸಕಾಂಗ-ಪತ್ರಿಕಾರಂಗದ ಸಂಬಂಧದ ಬಗ್ಗೆ ಮಾತನಾಡುವರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಂವಾದ ನಡೆಯಲಿದೆ. ಸಮಾರೋಪದಲ್ಲಿ ಸ್ಪೀಕರ್ ಖಾದರ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸುವರು. ಪ್ರತಿನಿತ್ಯ ಬೆಳಗ್ಗೆ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು

ಗೃಹಜ್ಯೋತಿಗೆ ಒಂದು ವಾರದಲ್ಲೇ 51 ಲಕ್ಷಕ್ಕೂ ಅಧಿಕ ಜನರಿಂದ ನೋಂದಣಿ: ಕಡೇ ದಿನಾಂಕ ಯಾವತ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 4 =
Remember me
