ಕೊಪ್ಪಳ:ಹನುಮ ಜನ ಸ್ಥಳ ಖ್ಯಾತಿಯ ಅಂಜನಾದ್ರಿಯ ಸುತ್ತ ಸದಾ ರಾಜಕಿಯ ಸುತ್ತಿಕೊಳ್ಳತ್ತೆ, ಇಂದು ಮತ್ತು ನಾಳೆ ಹನುಮ ಮಾಲಾ ವಿಸರ್ಜನೆಗೆ ಬರುವ ಹನುಮ ಭಕ್ತರಿಗೆ ಸ್ವಾಗತ ಕೋರಿರುವ ಬ್ಯಾನರ್ ಮೂಲಕ ಚುನಾವಣಾ ಕಾವು ಜೋರಾಗುತ್ತಿದೆ. ಕಾಂಗ್ರೆಸ್ ನಾಯಕನ ಸ್ವಾಗತಕ್ಕೆ ಹಿಂದು ಸಂಘಟನೆಯ ಮುಖಂಡ ಕಿಡಿಕಾರಿದ್ದಾರೆ. ಚುನಾಣೆಯ ಹೊತ್ತಲ್ಲಿ ಹಿಂದುಗಳಿಗೆ ಬಕೇಟ್ ಹಿಡಯುವ ತಂತ್ರ ಎಂದು ಆರೋಪಿಸಿದ್ದಾರೆ.
ಶ್ರೀ ರಾಮ ಭಕ್ತ ಹನುಮ ಹುಟ್ಟಿದ್ದು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಆನೆಗುಂದಿಯ ಪಕ್ಕದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿಯೆ ಎನ್ನುವುದು ಅನೇಕರ ನಂಬಿಕೆ. ಈ ಅಂಜನಾದ್ರಿಗೆ ಸದ್ಯ ಹನುಮ ಮಾಲಾದಾರಿಗಳು ಮಾಲಾ ವಿಸರ್ಜನೆಗೆ ಇಂದು ಮತ್ತು ನಾಳೆ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಹೋಮ ಹವನಾದಿಗಳಲ್ಲಿ ಭಾಗವಹಿಸಿ ಪುನೀತರಾಗುತ್ತಾರರೆ.
ಆದರೆ ಹನುಮ ಜನ್ಮ ಭೂಮಿಗೆ ಬರುವ ಲಕ್ಷಾಂತರ ಭಕ್ತರಿಗೆ ಕಾಂಗ್ರೆಸ್ ನಾಯಕ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ವಾಗತ ಕೋರಿ ಬ್ಯಾನರ್ ಹಾಕಿರೋದು ಶ್ರೀ ರಾಮಸೇನೆಯ ಕಾರ್ಯಕರ್ತರನ್ನ ಕೆರಳಿಸಿದೆ.
‘ಚುನಾವಣೆಯ ಹೊತ್ತಲ್ಲಿ ವೋಟಿಗಾಗಿ ಹಿಂದುಗಳ ಕಾಲು ಹಿಡಿಯುವ, ಹಿಂದುಗಳಿಗೆ ಬಕೇಟ್ ಹಿಡಿಯುವ ಕೆಲಸ ಇಕ್ಬಾಲ್ ಅನ್ಸಾರಿ ಮಾಡುತ್ತಿದ್ದೆ. 2017 ರಲ್ಲಿ ಜೈ ಶ್ರೀ ರಾಮ ಘೋಷಣೆ ಕೂಗುವವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅನ್ಸಾರಿ ಅಧಿಕಾರದಲ್ಲಿದ್ದಾಗ ಗಲಾಟೆ ಮಾಡಿಸಿ ಅದಕ್ಕೆ ಬಣ್ಣ ಹಚ್ಚಿದ್ರು ಈಗ ಬ್ಯಾನರ್ ಹಾಕಿ ಸ್ವಾಗತ ಮಾಡುವ ಕೆಲಸ ಮಾಡಿ ಓಟ್ ಪಡೆಯಲು ಮುಂದಾಗಿದ್ದಾರೆ. ಹನುಮನ ಶಾಪ ತಟ್ಟುತ್ತೆ’ ಎಂದು ಶ್ರೀರಾಮ ಸೇನೆಯ ಹೊಸಪೇಟೆ ಕೊಪ್ಪಳ ವಿಭಾಗಿಯ ಅದ್ಯಕ್ಷ ಸಂಜೀವ ಮರಡಿ ಕಿಡಿಕಾರಿದ್ದಾರೆ.
ಚುನಾವಣೆಗೆ ಇನ್ನು ಮೂರ್ನಾಲ್ಕು ತಿಂಗಳು ಬಾಕಿ ಇದೆ. ಈಗಾಗಲೆ ಗಂಗಾವತಿ ಕ್ಷೇತ್ರದಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ತಯಾರಿ ನಡೆಸಿದ್ದಾರೆ. ಈ ಬೆನ್ನಲ್ಲೆ ಹಿಂದುಗಳ ಮತ ಓಲೈಕೆಗೆ ಇಕ್ಬಾಲ್ ಅನ್ಸಾರಿ ಈ ರೀತಿ ಪ್ರಚಾರ ನಡೆಸಿದ್ದಾರೆ ಎನ್ನುವುದು ಹಿಂದು ಸಂಘಟನೆಯ ಮುಖಂಡರ ಆರೋಪ. ಕಾಂಗ್ರೆಸ್​ನವರಿಗೆ ಹಿಂದುಗಳು ಚುನಾವಣೆಗೆ ಮಾತ್ರ ಬೇಕು, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಇಕ್ಬಾಲ್ ಅನ್ಸಾರಿ ಚುನಾವಣೆಯ ಹೊಸ್ತಿಲಲ್ಲೆ ಈ ರೀತಿ ಬ್ಯಾನರ್ ಹಾಕಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸದ್ಯ ಇಕ್ಬಾಲ್ ಅನ್ಸಾರಿಯವರ ಹಳೆಯ ಹೇಳಿಕೆಗಳನ್ನ ಇಟ್ಟುಕೊಂಡು ಹಿಂದು ಸಂಘಟನೆಯ ಕಾರ್ಯಕರ್ತರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ತಿರುಗಿ ಬಿದ್ದಿದ್ದಾರೆ. ಹಿಂದು ಸಂಘಟನೆಗಳ ವಿರೋದಿ ಹೇಳಿಕೆಗಳಿಂದಲೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಮುಂದಿನ ಚುನಾವಣೆಯಲ್ಲೂ ಸಹ ತಕ್ಕ ಪಾಠ ಕಲಿಸ್ತಿವಿ ಎಂದು ಹಿಂದು ಕಾರ್ಯಕರ್ತರು ಕಿಡಿ ಕಾರುತ್ತಿದ್ದಾರೆ..
ಎರಡು ದಿನಗಳ ಕಾಲ ಅಂಜನಾದ್ರಿಯಲ್ಲಿ ನಡೆಯುವ ಈ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ ಸದ್ಯ ರಾಜಕಿಯ ತಿಕ್ಕಾಟಕ್ಕೂ ಕಾರಣವಾಗಿದೆ. ಹೇಗಾದ್ರು ಮಾಡಿ ಹಿಂದುಗಳ ಮತ ಸೆಳೆಯೊದಕ್ಕೆ ಕಾಂಗ್ರೆಸ್ ನಾಯಕರ ಈ ಸರ್ಕಸ್ ವರ್ಕೌಟ್ ಆಗತ್ತಾ ಕಾದು ನೋಡಬೇಕಿದೆ.
Sign in to your account
Please enter an answer in digits:10 − 3 =
Remember me
