ಉಡುಪಿ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಭೂಮಿಗೆ ಮಾರಕವಾಗಿ ಪರಿಣಮಿಸಿದ ‘ಅಂತರಗಂಗೆ’  ಜಲಕಳೆಯನ್ನು ಭೌತಿಕ ವಿಧಾನದ ಮೂಲಕ ನಿಯಂತ್ರಿಸುವ ಮಾರ್ಗವನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಡೆಸಿರುವ ಎರೆಹುಳ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಪ್ರಯೋಗ ಯಶಸ್ವಿಯಾಗಿದೆ. ಆವೆ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಈ ಜಲಕಳೆ ಮಳೆಗಾಲದಲ್ಲಿ ಹೆಚ್ಚು ವಿಸ್ತರಣೆಯಾಗಿ ಬೆಳೆಯುತ್ತದೆ. ಮಳೆಯ ಶುದ್ಧ ನೀರಿನಲ್ಲಿ ಆಮ್ಲಜನಕ ಹೆಚ್ಚು ಇರುವುದರಿಂದ ಅದರಲ್ಲಿನ ಸಾರಜನಕ ಅಂಶ ಬಳಸಿಕೊಂಡು ಇವು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತವೆ. ಮಳೆಗಾಲದ ನೆರೆ ನೀರಿನೊಂದಿಗೆ ಸಂಪರ್ಕಗೊಳ್ಳುತ್ತ ಕೃಷಿಭೂಮಿ ಸೇರುತ್ತದೆ. ಭತ್ತ ನೇಜಿ ಬೆಳವಣಿಗೆ ಕುಂಠಿತವಾಗುತ್ತದೆ. ಜಲಮೂಲ ಕಲ್ಮಶ ಮಾಡಿ, ರೋಗ ಹರಡುವ ಕೀಟಗಳಿಗೆ ಆಶ್ರಯ ಕೊಡುತ್ತದೆ ಎನ್ನುತ್ತಾರೆ ಕೇಂದ್ರದ ವಿಜ್ಞಾನಿಗಳು.
ಸಗಣಿ ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶ:ಡಾ.ನವೀನ್ ನೇತೃತ್ವದ ತಂಡ, ಅಂತರಗಂಗೆ ನಿಯಂತ್ರಣಕ್ಕೆ ಎರೆಹುಳ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ನೀರಿನಿಂದ ಅಂತರಗಂಗೆ ತೆಗೆದು, ಅಂತರಗಂಗೆ ಮತ್ತು ಸಗಣಿ ಗೊಬ್ಬರವನ್ನು ಮಿಶ್ರಣ ಮಾಡಿ ವೇಸ್ಟ್ ಡಿಕಂಪೋಸರ್ ದ್ರಾವಣವನ್ನು ಬೆರೆಸಲಾಗುತ್ತದೆ. ಇದನ್ನು 30 ದಿನಗಳವರೆಗೆ ಇಟ್ಟು ಕೊಳೆಯುವಂತೆ ಮಾಡಿ, ನಂತರ ಅದರಲ್ಲಿ ಎರೆಹುಳ ಬಿಡಲಾಗುತ್ತದೆ. ಅಂತರಗಂಗೆ ಎರೆಕಾಂಪೋಸ್ಟ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಈ ಕಂಪೋಸ್ಟ್ ಸಾರಜನಕ, ರಂಜಕ, ಪೋಟ್ಯಾಷ್ ಅಂಶಗಳು ಸಗಣಿ ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶದಿಂದ ಕೂಡಿದ್ದು, ಬೆಳೆಗಳಿಗೆ ಉತ್ತಮ ಸಾರ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಎರಡು ಪ್ರಯೋಗಗಳು ವಿಫಲ:ಕೃಷಿ ಮಾತ್ರವಲ್ಲದೆ ಜಲಸಸ್ಯ ಹಾಗೂ ಜಲಚರ ಕಂಟಕವಾಗಿ ಪರಿಣಮಿಸಿರುವ ಅಂತರಗಂಗೆ ಜಲಕಳೆ ನಿಯಂತ್ರಿಸುವಂತೆ ಸ್ಥಳೀಯ ರೈತರು ಹೋರಾಟ ನಡೆಸಿದ್ದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ರಾಸಾಯನಿಕ ಹಾಗೂ ಜೈವಿಕ ವಿಧಾನಗಳಲ್ಲಿ ನಡೆಸಿದ ಹಲವು ಸಂಶೋಧನೆಗಳು ಕೈಗೂಡದೆ ವಿಫಲವಾಗಿದ್ದವು. ಎರಡು ವರ್ಷ ಹಿಂದೆ ವಿಜ್ಞಾನಿ ಡಾ.ಎನ್.ನವೀನ್, ಜೈವಿಕ ವಿಧಾನದಲ್ಲಿ ಸರ‌್ಟೋ ಬೇಗಸ್ ಸಾಲ್ವಿನಿಯಾ ಎಂಬ ದುಂಬಿ ಬಳಸಿ ಪ್ರಯೋಗ ನಡೆಸಿದ್ದರು. ನಂತರ ರಾಸಾಯನಿಕ ವಿಧಾನದಲ್ಲಿ ಸಸ್ಯನಾಶಕಗಳನ್ನು ಬಳಸಿ ಪ್ರಯೋಗ ಮಾಡಿದ್ದರು. ಈ ಎರಡು ಪ್ರಯೋಗಗಳೂ ಯಶಸ್ವಿಯಾಗಿರಲಿಲ್ಲ.ಸರ್ಕಾರಕ್ಕೆ ವರದಿ ಸಲ್ಲಿಕೆ:ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ ಅಂತರಗಂಗೆ ಸಮಸ್ಯೆ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದ್ದರು. ಈ ವಿಚಾರ ಪರಿಷತ್ತಿನ ಅರ್ಜಿ ಸಲಹಾ ಸಮಿತಿಯ ಚರ್ಚೆಗೆ ಒಳಪಟ್ಟಿತ್ತು. ಸಮಿತಿಯಲ್ಲಿರುವ ಕೃಷಿ ಆಯುಕ್ತರು ಅಂತರಗಂಗೆ ನಿಯಂತ್ರಣಕ್ಕೆ ಸಂಶೋಧನೆ ನಡೆಸುವಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ನಿರ್ದೇಶನ ನೀಡಿದ್ದರು. ಡಾ.ನವೀನ್ ನೇತೃತ್ವದ ತಂಡ ಎರಡು ವರ್ಷ ಸಂಶೋಧನೆ ನಡೆಸಿ, ಅರ್ಜಿ ಸಮಿತಿ ಹಾಗೂ ಕೃಷಿ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿದೆ.ಅಂತರಗಂಗೆ ನಿಯಂತ್ರಣಕ್ಕೆ ಕೈಗೊಂಡಿದ್ದ ಸಂಶೋಧನೆ ಯಶಸ್ವಿಯಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸಂಶೋಧನೆ ಮುಂದುವರಿಸಲು ಸೂಚನೆ ನೀಡಿದೆ. ಈ ಪ್ರಯೋಗ ಬೇರೆ ಬೇರೆ ಕಡೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನೂ ಪರಿಶೀಲನೆ ನಡೆಸಬೇಕಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಕಾರ್ಯಗಾರ ಏರ್ಪಡಿಸಿ ಅಂತರಗಂಗೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡುತ್ತೇವೆ.-ಡಾ.ಎನ್.ನವೀನ್, ವಿಜ್ಞಾನಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ
– ಅವಿನ್ ಶೆಟ್ಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
