ಬೆಂಗಳೂರು: ಪಾಕ್​ಪರ ಘೊಷಣೆ ಮತ್ತು ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಪ್ರಕರಣಗಳು ನಡೆದ ಬೆನ್ನಲೇ, ಗೋಡೆ ಮೇಲೆ ಫ್ರೀಕಾಶ್ಮೀರ ಬರೆದಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಭಾನುವಾರ ತಡರಾತ್ರಿ ಡಿಕನ್​ಸನ್ ರಸ್ತೆಯಲ್ಲಿರುವ ಸಂದೀಪ್ ಉನ್ನಿಕೃಷ್ಣನ್ ಎನ್​ಕ್ಲೇವ್ ವಸತಿ ಸಮುಚ್ಚಯದ ಗೋಡೆಯ ಮೇಲೆ ಕಿಡಿಗೇಡಿಗಳು ‘ಫ್ರೀ ಕಾಶ್ಮೀರ’ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಬರೆದಿದ್ದಾರೆ.
ಸಂದೀಪ್ ಉನ್ನಿಕೃಷ್ಣನ್ ಎನ್​ಕ್ಲೇವ್ ವಸತಿ ಸಮುಚ್ಚಯದಲ್ಲಿ ಸೇನೆಯ ಅಧಿಕಾರಿಗಳು ಮತ್ತು ಕುಟುಂಬಸ್ಥರು ವಾಸವಾಗಿದ್ದಾರೆ. ಕಾಂಪೌಂಡ್​ಗೆ ಹೊಂದಿಕೊಂಡಂತೆ ಕಾಲೇಜು ಕೂಡ ಇದೆ. ಇದೇ ಗೋಡೆಯ ಮೇಲೆ ಕಿಡಿಗೇಡಿಗಳು ಅಕ್ಷೇಪಾರ್ಹ ಘೋಷಣೆ ಬರೆದಿದ್ದಾರೆ. ಸೋಮವಾರ ಬೆಳಗ್ಗೆ ಸ್ಥಳೀಯರು ಗಮನಕ್ಕೆ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಹಲಸೂರು ಠಾಣೆ ಪೊಲೀಸರು, ಆಕ್ಷೇಪಾರ್ಹ ಬರಹದ ಮೇಲೆ ಬಣ್ಣ ಬಳಿದು ಅಳಿಸಿದ್ದಾರೆ.
ಕೃತ್ಯ ಇದೇ ಮೊದಲಲ್ಲ!: ಕೆಲ ತಿಂಗಳ ಹಿಂದಷ್ಟೇ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳ ಬಾಗಿಲ ಮೇಲೆ ಫ್ರೀಕಾಶ್ಮೀರ, ನೋ ಎನ್​ಆರ್​ಸಿ ಎಂದು ಬರೆದಿದ್ದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸಿದ್ದರು. ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ.
ಆಕ್ಷೇಪಾರ್ಹ ಬರಹಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯ್ದೆ (ಕೆಒಪಿಡಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಕಿಡಿಗೇಡಿಗಳ ಪತ್ತೆಗೆ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ತನಿಖೆ ಕೈಗೊಳ್ಳಲಾಗುವುದು.| ಡಾ. ಎಸ್.ಡಿ. ಶರಣಪ್ಪ ಪೂರ್ವ ವಿಭಾಗದ ಡಿಸಿಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
