ಬೆಂಗಳೂರು:ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ ನಟಿ ಅನು ಪೂವಮ್ಮಗೆ ಅವರ ಪತಿಯ ನಕಲಿ ಇನ್‌ಸ್ಟ್ಟಾಗ್ರಾಂ ಖಾತೆಯಿಂದ ಕಿರಿಕಿರಿಯಾಗುತ್ತಿದೆ. ಈ ವಿಷಯವನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಪೂವಮ್ಮ ಅವರ ಪತಿ ಎನ್.ಸಿ. ಅಯ್ಯಪ್ಪ ಅವರು ಕ್ರಿಕೆಟ್‌ಪಟು. ಜತೆಗೆ ಕನ್ನಡ ಬಿಗ್‌ಬಾಸ್ -3ರ ಸೀಸನ್‌ನಲ್ಲಿ ಭಾಗವಹಿಸಿದ್ದವರು. ಅವರು ಕೂಡ ಅನು ಅವರಷ್ಟೇ ಫ್ಯಾನ್ ಫಾಲೋಯಿಂಗ್ ಹೊಂದಿರುವವರು. ಆದರೆ ಇತ್ತೀಚೆಗೆ ಅನು ಅವರಿಗೆ ಫೋನ್ ಮಾಡುತ್ತಿದ್ದ ಕೆಲವು ಪರಿಚಿತರು ‘‘ನಿಮ್ಮ ಪತಿ ಇನ್‌ಸ್ಟಾಗ್ರಾಂನಿಂದ ಏನೇನೋ ಮೆಸೇಜ್ ಕಳಿಸುತ್ತಿದ್ದಾರೆ’’ ಎಂದು ದೂರು ಹೇಳಿದ್ದರು.
ಇದನ್ನೂ ಓದಿರಿಬೆಂಗಳೂರಿನಲ್ಲಿ ಕೋವಿಡ್​ ಸೋಂಕನ್ನೇ ಮಣಿಸಿದ 100 ವರ್ಷದ ಅಜ್ಜಿ!
ಅದರಿಂದ ಬೇಸರಗೊಂಡ ಅನು ಪೂವಮ್ಮ ಚೆಕ್ ಮಾಡಿದರೆ, ಅದು ಅವರ ಪತಿಯ ಇನ್‌ಸ್ಟಾ ಖಾತೆಯಾಗಿರಲಿಲ್ಲ. ಬದಲಿಗೆ ಬೇರೆ ಯಾರೋ ಅಪರಿಚಿತರು ಅಯ್ಯಪ್ಪ ಅವರ ಹೆಸರಿನಲ್ಲಿ ತೆರೆದ ಖಾತೆ ಅದಾಗಿತ್ತು. ಕೂಡಲೇ ಆ ನಕಲಿ ಖಾತೆಯ ಸ್ಕ್ರೀನ್‌ಶಾಟ್ ತೆಗೆದ ಅನು ಪೂವಮ್ಮ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಾಕಿದ್ದಾರೆ. ‘‘ನನ್ನ ಪತಿಯ ಹೆಸರಿನಲ್ಲಿ ಯಾರೋ ಇನ್‌ಸ್ಟಾ ಖಾತೆ ತೆರೆದು ನನ್ನ ಸ್ನೇಹಿತೆಯರಿಗೆ, ಪರಿಚಿತರಿಗೆ ಏನೇನೋ ಮೆಸೇಜ್ ಕಳಿಸುತ್ತಿದ್ದಾರೆ. ಈ ಖಾತೆಯಿಂದ ಯಾರಿಗಾದರೂ ಮೆಸೇಜ್ ಬಂದರೆ ನಿಜವೆಂದು ಪರಿಗಣಿಸಬೇಡಿ. ಆ ಖಾತೆಯನ್ನು ಬ್ಲಾಕ್ ಮಾಡಿ’’ ಎಂದು ಮನವಿ ಮಾಡಿದ್ದಾರೆ.
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅನು ಪೂವಮ್ಮ ಮತ್ತು ಎನ್.ಸಿ. ಅಯ್ಯಪ್ಪ 2018ರಲ್ಲಿ ಮದುವೆಯಾಗಿದ್ದಾರೆ. ಹಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ಅನು, ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಗಾಗಿ ಆ ಧಾರಾವಾಹಿಯಿಂದ ಹಿಂದೆ ಸರಿದರು. ‘ಅಗ್ನಿಸಾಕ್ಷಿ’ಯಲ್ಲಿ ಒಂದು ಪಾತ್ರ ಮಾಡಿದ್ದ ಅವರು ಈಗ ‘ನಂದಿನಿ-2’ರಲ್ಲಿ ದೇವಸೇನಾ ಪಾತ್ರ ನಿರ್ವಹಿಸುತ್ತಿದ್ದಾರೆ.
https://www.vijayavani.net/cheating-by-husband-to-wife-the-womans-struggle-for-justice/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
