ಬೆಂಗಳೂರು: ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ 1 ಲಕ್ಷ ಜನರಿಗೆ ಕರೊನಾ ಸೋಂಕು ತಗಲುವ ಭೀತಿಯಿದ್ದು, ಜನರು ಈಗಲಾದರೂ ತಮ್ಮ ಮನೆಗಳಿಂದ ಹೊರಬರದೆ ಲಾಕ್​ಡೌನ್ ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿಧಾನಪರಿಷತ್​ನಲ್ಲಿ ವಿವರಿಸಿದ ಅವರು, ಸದ್ಯದ ಸ್ಥಿತಿಯಲ್ಲಿ 1 ಲಕ್ಷ ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅದನ್ನು ತಡೆಯಲು ಜನರು ಎಚ್ಚೆತ್ತುಕೊಳ್ಳಬೇಕು ಎಂದರು. ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಈವರೆಗೆ 37 ಜನರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದ್ದು, 1.3 ಲಕ್ಷ ಜನರನ್ನು ಥರ್ಮಲ್ ಸ್ಕಾ್ಯನಿಂಗ್​ಗೆ ಒಳಪಡಿಸಲಾಗಿದೆ. 12,500 ಜನರನ್ನು ನಿಗಾದಲ್ಲಿರಿಸಲಾಗಿದೆ. ಉಳಿದಂತೆ 173 ಜನರನ್ನು ಐಸೋಲೇಷನ್ ವಾರ್ಡ್​ನಲ್ಲಿಡಲಾಗಿದೆ. 1,477 ಜನರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿ ಸಲಾಗಿದೆ. ಅದರಲ್ಲಿ 1,153 ಜನರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, 324 ಜನರ ರಕ್ತ ಮಾದರಿ ಪರೀಕ್ಷೆ ವರದಿ ಬರಬೇಕಿದೆ ಎಂದರು.
20 ಸಾವಿರ ರೂಂ ಬುಕ್:ಕ್ವಾರಂಟೈನ್​ಗೆ ಒಳಗಾಗಬೇಕಾದವರು ಹೊರಗಡೆ ತಿರುಗದಂತೆ ತಿಳಿಸಲಾಗಿದ್ದರೂ ಕೆಲವರು ಹೊರ ಬರುತ್ತಿ ದ್ದಾರೆ. ಅಂಥವರ ಮೇಲೆ ನಿಗಾವಹಿಸಲು ಖಾಸಗಿ ಹೋಟೆಲ್​ಗಳಲ್ಲಿ 20 ಸಾವಿರ ಕೊಠಡಿಗಳನ್ನು ಪಡೆಯಲಾಗುತ್ತಿದೆ. ಜತೆಗೆ ಕ್ವಾರಂಟೈನ್​ನಲ್ಲಿ ಇರಬೇಕಾದವರು ಎಷ್ಟು ದಿನ ನಿಗಾದಲ್ಲಿರಬೇಕು, ಮನೆಯಿಂದ ಯಾವಾಗ ಹೊರಬರಬೇಕು ಎಂಬಿತರ ಮಾಹಿತಿಯ ನೋಟಿಸ್ ಅವರ ಮನೆಗಳಿಗೆ ಅಂಟಿಸಲಾಗುವುದು. ಪೊಲೀಸ್ ಅಥವಾ ಗೃಹರಕ್ಷಕ ದಳದ ಸಿಬ್ಬಂದಿ ನೇಮಿಸಲಾಗುವುದು ಎಂದು ಶ್ರೀರಾಮುಲು ವಿವರಿಸಿದರು.
ಚಿತ್ರದುರ್ಗದ ಮಹಿಳೆಯಲ್ಲಿ ಕರೊನಾ ವೈರಸ್​ ದೃಢ; ಇವರೊಂದಿಗೆ ವಿದೇಶದಿಂದ ಬಂದವರು 6ಮಂದಿ, ಮಕ್ಕಳೂ ಇದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
