ಬೆಂಗಳೂರು:ಯಾವ ಧರ್ಮ ಮನುಷ್ಯರಿಗೆ ಸಮಾನ ಹಕ್ಕುಗಳನ್ನು ನೀಡುವುದಿಲ್ಲವೋ ಅದು ರೋಗಕ್ಕೆ ಸಮ. ಅದು ನನ್ನ ಪ್ರಕಾರ ಅದು ಧರ್ಮವೇ ಅಲ್ಲ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.
ಸನಾತನ ಧರ್ಮದ ಕುರಿತು ಮಾತನಾಡಿ ವಿಚಾದಕ್ಕೆ ಗುರಿಯಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್​ ಅವರ ಪುತ್ರ ಉದಯನಿಧಿ ಅವರ ಹೇಳಿಕೆಯನ್ನು ಸಚಿವ ಪ್ರಿಯಾಂಕ್​​ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಸಮಾನ ಹಕ್ಕುಗಳನ್ನು ನೀಡದೆ ನಿಮ್ಮನ್ನು ಮನುಷ್ಯರಾಗಿ ನಡೆಸಿಕೊಳ್ಳದ ಯಾವುದೇ ಧರ್ಮವಾಗಲಿ ಅದು ರೋಗಕ್ಕೆ ಸಮಾನ. ನನ್ನ ಪ್ರಕಾರ ಸಮಾನತೆಯನ್ನು ಉತ್ತೇಜಿಸದೆ ನಿಮಗೆ ಯಾವುದೇ ಮರ್ಯಾದೆ ನೀಡದ ಧರ್ಮ ಧರ್ಮವಲ್ಲ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಉದಯನಿಧಿ ಸ್ಟಾಲಿನ್​ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
#WATCH| Bengaluru, Karnataka: On  Tamil Nadu Minister Udhayanidhi Stalin's 'Sanatana Dharma should be eradicated' remark, Karnataka Minister Priyank Kharge says, "Any religion that does not promote equality or does not ensure you have the dignity of being human is not religion,…pic.twitter.com/lQcpB5s6aY
ಇದನ್ನೂ ಓದಿ:ವೈಯಕ್ತಿಕ ಕಾರಣಗಳಿಂದ ತವರಿಗೆ ವಾಪಸ್ಸಾದ ವೇಗಿ ಬುಮ್ರಾ; ನೇಪಾಳ ಪಂದ್ಯದಿಂದ ಔಟ್​
ಪ್ರಗತಿಪರ ಲೇಖಕರು ಹಾಗೂ ಕಲಾವಿದರು ಆಯೋಜನೆ ಮಾಡಿದ್ದ ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವ ಉದಯ​ನಿಧಿ ಸ್ಟಾಲಿನ್​ ಕೆಲವು ವಿಚಾರಗಳನ್ನು ನಾವು ವಿರೋಧಿಸುವುದರ ಬದಲು ಅದನ್ನು ನಿರ್ಮೂಲನೆ ಮಾಡುವುದು ಒಳ್ಳೆಯದು. ಮಲೇರಿಯಾ, ಡೆಂಘೆ, ಕೋವಿಡ್​ನಂತಹ ಸೋಂಕನ್ನು ವಿರೋದಿಸಬಾರದು ಬದಲಿಗೆ ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಸಚಿವ ಉದಯನಿಧಿ ಸ್ಟಾಲಿನ್​ ಹೊಸ ವಿವಾದವನ್ನು ಹುಟ್ಟುಹಾಕಿದ್ದರು.
ಉದಯನಿಧಿ ಸ್ಟಾಲಿನ್​ ಹೇಳಿಕೆ ವೈರಲ್​ ಆಗುತ್ತಿದ್ದಂತೆ ವಿಪಕ್ಷಗಳ ಒಕ್ಕೂಟ I.N.D.I.A ವಿರುದ್ಧ ಹರಿಹಾಯ್ದಿದ ಬಿಜೆಪಿ ನಾಯಕರು ವೋಟ್​ ಬ್ಯಾಂಕ್​ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಇಳಿದಿರುವುದು ಶೋಚನೀಯ ಎಂದು ಕಿಡಿಕಾರಿತ್ತು. ಉದಯ್​ನಿಧಿ ಹೇಳಿಕೆ ಸಂಬಂಧ ದೆಹಲಿಯಲ್ಲಿ ವಕೀಲರೊಬ್ಬರು ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × four =
Remember me
