ಬೆಂಗಳೂರು:ಯಾವುದೇ ಸಾಂಸ್ಕೃತಿಕ ಕಾರ್ಯಕಮ ಇರಲಿ, ಸರ್ಕಾರಿ ಕಾರ್ಯಕ್ರಮಗಳೇ ಆಗಿರಲಿ ಅಲ್ಲಿ ನಟಿ, ನಿರೂಪಕಿ ಅಪರ್ಣ ಅವರ ಉಪಸ್ಥಿತಿ ಇರಬೇಕಿತ್ತು. ತಮ್ಮ ಸ್ವಚ್ಛ ಕನ್ನಡದಲ್ಲಿ ಅತಿಥಿಗಳನ್ನು ಆಗಮಿಸುತ್ತಿದ್ದ ಪರಿ, ವೇದಿಕೆಗೆ ಅವರು ತರುತ್ತಿದ್ದ ಕಳೆ ನೆರೆದಿದ್ದವರನ್ನು ಖುಷಿಪಡಿಸುತ್ತಿತ್ತು. ಕೇವಲ ತಮ್ಮ ಧ್ವನಿ ಹಾಗೂ ಸ್ಪಷ್ಟ ಕನ್ನಡ ಪದಗಳ ಬಳಕೆಯಿಂದಲೇ ಎಲ್ಲರ ಗಮನಸೆಳೆದಿದ್ದ ಅಪರ್ಣಾ ಅವರು, ಕನ್ನಡ ಭಾಷೆಗೆ ಕೊಡುತ್ತಿದ್ದ ಗೌರವ, ಪ್ರಾಶಸ್ತ್ಯ ಅಪಾರ, ಅಗಾಧ. ಇವರ ಮಾತುಗಳನ್ನು ಕೇಳುತ್ತಿದ್ದವರಿಗೆ ಕನ್ನಡ ಕಲಿಯುವ ಆಸಕ್ತಿ, ಮತ್ತಷ್ಟು ಹೆಚ್ಚುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದ್ರೆ, ಇಂದು ಅವರು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ಅತೀವ ದುಃಖವನ್ನು ತಂದೊಡ್ಡಿದೆ.
ಇದನ್ನೂ ಓದಿ:ವಿರಾಟ್​ ಕೊಹ್ಲಿ ಏನಾದ್ರೂ ಪಾಕಿಸ್ತಾನಕ್ಕೆ ಬಂದ್ರೆ… ಶಾಕಿಂಗ್​ ಹೇಳಿಕೆ ನೀಡಿದ ಶಾಹಿದ್​ ಅಫ್ರಿದಿ
ನಟಿ, ನಿರೂಪಕಿಯಾಗಿ ಕನ್ನಡಿಗರ ಮನದಲ್ಲಿ ಬೇರೂರಿರುವ ಅಪರ್ಣ ವಸ್ತಾರೆ (58) ಇಂದು ತಮ್ಮ ಕುಟುಂಬಸ್ಥರು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ​ಅಚ್ಚ ಕನ್ನಡದ ಸ್ವಚ್ಛ ಧ್ವನಿಯಾಗಿದ್ದ ಅಪರ್ಣಾ ನಿನ್ನೆ (ಜುಲೈ 11) ತಡರಾತ್ರಿ ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ. ಕ್ಯಾನ್ಸರ್​ ವಿರುದ್ಧ ಹೋರಾಟ ನಡೆಸುತ್ತಿದ್ದ ಅವರು, ಅಂತಿಮವಾಗಿ ತಮ್ಮ ಪ್ರೀತಿ ಪಾತ್ರರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ನಟಿಯಾಗಿ ಗಂಭೀರ ಪಾತ್ರಗಳನ್ನು ನಿರ್ವಹಿಸಿದ್ದ ಅಪರ್ಣಾ ಅವರು, ಜನರನ್ನು ನಕ್ಕು ನಲಿಸುವ ದಿನವೂ ಮುಂದೊಂದು ದಿನ ಬರುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಯಾಕಂದರೆ, ‘ಮಸಣದ ಹೂವು’ ಸಿನಿಮಾದಿಂದ ಧಾರವಾಹಿಗಳಲ್ಲಿ ಅಭಿನಯಿಸಿದ ಅಪರ್ಣಾ, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದವರು. ತೂಕದ ವ್ಯಕ್ತಿತ್ವ, ಸ್ಪಷ್ಟ ಉಚ್ಚಾರಣೆ, ಸ್ವಚ್ಛ ಕನ್ನಡದಿಂದಲೇ ಎಲ್ಲರ ಮನಸೂರೆಗೊಳಿಸುತ್ತಿದ್ದ ನಟಿ, ‘ಮಜಾ ಟಾಕೀಸ್’​ನಂತಹ ಕಾಮಿಡಿ ಕಾರ್ಯಕ್ರಮದ ಮೂಲಕ ಜನರ ಮುಖದಲ್ಲಿ ಮಂದಹಾಸ ತಂದಿದ್ದು, ನಿಜಕ್ಕೂ ಮರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ:ಹೋರಾಟಕ್ಕೆ ಮೈಸೂರಿಗೆ ಹೊರಟಿದ್ದ ಬಿಜೆಪಿ ಮುಖಂಡರು: ಮಾರ್ಗ ಮಧ್ಯೆ ಪೊಲೀಸರು ತಡೆದು ವಶಕ್ಕೆ
ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿಬಂದ ‘ಮಜಾ ಟಾಕೀಸ್’​ ಕಾರ್ಯಕ್ರಮದಲ್ಲಿ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಪಾತ್ರದಲ್ಲಿ ಮಿಂಚಿದ್ದ ಅಪರ್ಣಾ ಅವರು, ನನ್ನಿಂದ ಹಾಸ್ಯ ಕೂಡ ನಿರೀಕ್ಷಿಸಬಹುದು ಎಂಬುದನ್ನು ವೀಕ್ಷಕರಿಗೆ ಸಾಬೀತುಪಡಿಸಿದರು. ಅಮಿರ್​, ಸಲ್ಲು, ಒಬಾಮಾ, ಟ್ರಂಪ್​ಗೆ ಕಾಲ್​ ಮಾಡಿ, ಇನ್​ಫ್ಲ್ಯುಯೆನ್ಸ್ ಮಾಡಿಸ್ತೀನಿ ಎಂದೆಲ್ಲಾ ಅವರು ಕಾರ್ಯಕ್ರಮದ ಸಂಚಿಕೆಗಳಲ್ಲಿ ಹೊಡೆಯುತ್ತಿದ್ದ ಡೈಲಾಗ್​ಗಳು ನೋಡುಗರಲ್ಲಿ ನಗೆಯ ಚಟಾಕಿ ಸಿಡಿಸುತ್ತಿತ್ತು. ಅಂದು ಇದೆಲ್ಲಾ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಯಾರೂ ಊಹಿಸದ ವರು ಪಾತ್ರದಲ್ಲಿ ಕಾಣಿಸಿಕೊಂಡ ಅಪರ್ಣಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಕೆಟ್ಟ ಕಮೆಂಟ್​ಗಳು ಬರಲು ಪ್ರಾರಂಭವಾಗುತ್ತವೆ. ಈ ನೆಗೆಟಿವ್ ಅಭಿಪ್ರಾಯಗಳನ್ನು ನೋಡಿ ತೀವ್ರ ಬೇಸರಕ್ಕೊಳಗಾದ ಅವರು, ನಾನು ಇನ್ಮುಂದೆ ಶೋ ಮಾಡಲು ಇಚ್ಛಿಸುವುದಿಲ್ಲ. ಕಾರ್ಯಕ್ರಮಕ್ಕೆ ಬರಲು ನನಗೆ ಮನಸ್ಸಿಲ್ಲ ಎಂದು ಸುಮ್ಮನಾಗುತ್ತಾರೆ. ಆಗ ಸೃಜನ್, ನಿಮಗೆ ಒಂದಷ್ಟು ನೆಗೆಟಿವ್ ಕಮೆಂಟ್​ಗಳು ಮುಖ್ಯವೋ? ಅಥವಾ ವರು ಪಾತ್ರ ಮೆಚ್ಚಿಕೊಂಡವರ ಅಭಿಪ್ರಾಯಗಳು ಮುಖ್ಯನಾ? ಯಾವುದು ಬೇಕು ನೀವೇ ಯೋಚಿಸಿ ಎಂದು ಅಪರ್ಣಾ ಅವರಿಗೆ ತಿಳಿ ಹೇಳುತ್ತಾರೆ.
ಇದನ್ನೂ ಓದಿ:ಟಾಲಿವುಡ್​ ಸ್ಟಾರ್​​ ನಟನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಎಂಟ್ರಿ! ಅಧಿಕೃತ ಮಾಹಿತಿ ಹಂಚಿಕೊಂಡ ಚಿತ್ರತಂಡ
ಇದರ ಮೇಲೆ ನಿಮಗೆ ಇಷ್ಟವಿದ್ದರೆ ಪಾತ್ರವನ್ನು ಮುಂದುವರೆಸಿ ಇಲ್ಲವಾದರೆ ಬಿಟ್ಟುಬಿಡಿ ಎಂದು ಸೃಜನ್​ ಅಪರ್ಣಾರ ಮನವೋಲಿಸುತ್ತಾರೆ. ತದನಂತರ ಅವರು, ವರು ಪಾತ್ರವನ್ನು ಮುಂದುವರಿಸಲು ನಿರ್ಧರಿಸಿ, ಇಂದು ಅಪಾರ ಕನ್ನಡಿಗರ ಮನದಲ್ಲಿ ಹಸಿರಾಗಿದ್ದಾರೆ.
ಕಡೆಗೂ ಹೋರಾಟ ಫಲಿಸಲಿಲ್ಲ! ನಿರೂಪಕಿ ಅಪರ್ಣಾ ಬಾಳಿನಲ್ಲಿ ಕರಾಳವಾಗಿದ್ದೇ ಜುಲೈ ತಿಂಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + ten =
Remember me
