ದೇವರಾಜ್ ಎಲ್.ಬೆಂಗಳೂರು
ಸರ್ಕಾರಿ ಶಾಲೆಗಳಿಗೆ ದಾನಿಗಳು ನೀಡುವ ದೇಣಿಗೆಯ ನಿರ್ವಹಣೆಗೆ ಶಿಕ್ಷಣ ಇಲಾಖೆ ಹಲವು ಷರತ್ತುಗಳನ್ನು ವಿಧಿಸಿದ್ದು, ಇದಕ್ಕಾಗಿಯೇ ‘ನಮ್ಮ ಶಾಲೆ, ನನ್ನ ಕೊಡುಗೆ ಮೊಬೈಲ್ ಆಪ್’ ರೂಪಿಸುತ್ತಿದೆ. ಶೀಘ್ರದಲ್ಲೇ ಆಪ್ ಸಿದ್ಧವಾಗಲಿದ್ದು, ದಾನಿಗಳು ನೆರವು ನೀಡಬಹುದಾಗಿದೆ. ಆಪ್ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ 1.46 ಕೋಟಿ ರೂ. ವಿನಿಯೋಗಿಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ.
ಪ್ರತಿ ವರ್ಷ ಈ ರೀತಿ ದಾನ ಪಡೆದು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತದೆ. ಆದರೆ, ಅದಕ್ಕೆ ಸೂಕ್ತ ಉತ್ತರದಾಯಿತ್ವ ಇರಲಿಲ್ಲ. ಇದನ್ನು ಮನಗಂಡ ಸರ್ಕಾರ ದಾನಿಗಳು ನೀಡುವ ದೇಣಿಗೆಯ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳುಲು ಈ ಆಪ್ ರೂಪಿಸುತ್ತಿದೆ. ಆಪ್ ಸಂಪೂರ್ಣ ಸಿದ್ಧಗೊಂಡ ಬಳಿಕ ದಾನಿಗಳು, ಹಳೇ ವಿದ್ಯಾರ್ಥಿಗಳು, ಖಾಸಗಿ ಸಂಘ- ಸಂಸ್ಥೆಗಳು, ಉದ್ಯಮ ಮತ್ತು ಸಮುದಾಯದಿಂದ ದೇಣಿಗೆ ಪಡೆಯುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಜಂಟಿ ಖಾತೆ ತೆರೆಯಬೇಕು:ದೇಣಿಗೆ ನಿರ್ವಹಣೆಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಮುಖ್ಯ ಶಿಕ್ಷಕಕರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್​ಡಿಎಂಸಿ) ಹೆಸರಿನಲ್ಲಿ ಜಂಟಿ ಖಾತೆ ತೆರೆಯಬೇಕಿದೆ. ದಾನಿಗಳಿಂದ ಹಾಗೂ ಇತರೆ ಮೂಲಗಳಿಂದ ಬರುವ ದೇಣಿಗೆ ಸ್ವೀಕರಿಸಿ ಅವರಿಗೆ ‘80ಜಿ’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡಲು ಕ್ರಮವಹಿಸಬೇಕೆಂದು ತಿಳಿಸಲಾಗಿದೆ.
ಪಾರದರ್ಶಕತೆ: ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವ ಬಗ್ಗೆ ಖಚಿತ ಪಡಿಸಲು ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆ ಸೆಕ್ಷನ್ 4ರಅಡಿಯಲ್ಲಿ 5 ಲಕ್ಷ ರೂ.ಗಳವರೆಗಿನ ಸರಕು, ಸೇವೆ ಸಂಗ್ರಹಣೆಗೆ ವಿನಾಯಿತಿ ನೀಡಿ ತಿದ್ದುಪಡಿ ಮಾಡಲಾಗಿದ್ದು, ಆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದಾನಿಗಳು ನೀಡಿರುವ ದೇಣಿಯ ನಿರ್ವಹಣೆ ಮತ್ತು ಬಳಕೆ ಕುರಿತು ಆಪ್​ನಲ್ಲಿ ಎಲ್ಲ ಸಾರ್ವಜನಿಕರಿಗೂ ಲಭ್ಯವಾಗುವಂತೆ ಅಪ್​ಲೋಡ್ ಮಾಡಬೇಕು. ಗಣಕಯಂತ್ರ, ಪ್ರಿಂಟರ್, ಸ್ಕಾ್ಯನರ್ ಮುಂತಾದವುಗಳ ಬಗ್ಗೆ ನಿರ್ದಿಷ್ಟತೆ ಮತ್ತು ಫೆಸಿಫಿಕೇಷನ್​ಗಳಿಗೆ ಅನುಗುಣವಾಗಿ ನಿಗದಿಪಡಿಸಿ ಮಾನದಂಡಗಳ ಅನ್ವಯ ವ್ಯವಹರಿಸಬೇಕು. ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಅಭಿಯಂತರರ ಮೂಲಕ ನಿರ್ದಿಷ್ಟತೆ ಹಾಗೂ ಕಟ್ಟಡ ವಿನ್ಯಾಸದ ಪ್ರಕಾರ ಮುಂದಿನ ಹೆಜ್ಜೆ ಇಡಬೇಕು. ಬಹಳ ಮುಖ್ಯವಾಗಿ ಈ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಪ್ರಗತಿಯ ತ್ರೖೆಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಬಹಳ ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಅಧಿಕಾರಿ ವರ್ಗಕ್ಕೆ ತಿಳಿಸಿದೆ.
ಸರ್ಕಾರದ ವೆಚ್ಚ:ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಸೇರಿ 57,396 ಶಾಲೆಗಳಿಗೆ ಇದರಲ್ಲಿ 2.71 ಲಕ್ಷ ಶಿಕ್ಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. 2019ರಲ್ಲಿ 3 ಸಾವಿರ ಪ್ರಾಥಮಿಕ ಮತ್ತು 2ಸಾವಿರ ಪ್ರೌಢಶಾಲಾ ಕೊಠಡಿಗಳ ನಿರ್ವಹಣೆಗಾಗಿಯೇ 35.81 ಕೋಟಿ ರೂ.ವೆಚ್ಚ ಮಾಡಿತ್ತು. ಇನ್ನೂ ಕುಡಿಯುವ ನೀರು, ಶೌಚಾಗೃಹ ನಿರ್ವಹಣೆಗಾಗಿ 25 ಕೋಟಿ ರೂ.ಖರ್ಚು ಮಾಡಿತ್ತು. ಇದೇ ರೀತಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇರುವುದರಿಂದ ದಾನಿಗಳಿಂದ ಸಹಾಯ ಬಯಸುತ್ತಿದೆ.
ವೆಚ್ಚ ಕಡಿತಕ್ಕೆ ಮುಂದಾದ ಎಸ್​ಬಿಐ; ಸ್ವಯಂ ನಿವೃತ್ತಿ ಯೋಜನೆಗೆ ಚಿಂತನೆ; 30 ಸಾವಿರ ಸಿಬ್ಬಂದಿ ಲಿಸ್ಟ್​ ರೆಡಿ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + eighteen =
Remember me
