ಬೆಂಗಳೂರು: ರಾಜ್ಯದ 23 ಜಿಲ್ಲೆಗಳಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿರುವ ಕಾರಣ, ಎನ್​ಡಿಆರ್​ಎಫ್ ನಿಯಮಗಳ ಪ್ರಕಾರ ಇನ್ನೂ 1200 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ 669.85 ಕೋಟಿ ರೂ. ಬಿಡುಗಡೆ ಮಾಡಿದೆ. ಮೊದಲು ಕಂತಿನಲ್ಲಿ 1200 ಕೋಟಿ ರೂ. ಬಿಡುಗಡೆ ಮಾಡಿತ್ತು. ಎರಡು ಕಂತು ಸೇರಿ ಒಟ್ಟಾರೆ 1869.85 ಕೋಟಿ ರೂ. ನೀಡಿದಂತಾಗಿದೆ. ಪ್ರವಾಹಕ್ಕೆ ರಾಜ್ಯದಲ್ಲಿ 35,000 ಕೋಟಿ ರೂ. ಹಾನಿ ಆಗಿದ್ದು, ಎನ್​ಡಿಆರ್​ಎಫ್ ನಿಯಮಗಳ ಪ್ರಕಾರ 3100 ಕೋಟಿ ರೂ. ಸಿಗಬೇಕಾಗಿದೆ.
ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ 2 ಕಂತುಗಳಲ್ಲಿ 1869.85 ಕೋಟಿ ರೂ. ನೀಡಿದೆ. 3100 ಕೋಟಿ ರೂ.ಗಳಲ್ಲಿ ಉಳಿದ 1200 ಕೋಟಿ ರೂ. ಬಿಡುಗಡೆ ಮಾಡವಂತೆ ಮತ್ತೊಮ್ಮೆ ಮನವಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ‘ವಿಜಯವಾಣಿ’ಗೆ ತಿಳಿಸಿದರು. ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾನಿ ಬಗ್ಗೆ ಮತ್ತೊಂದು ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ ಎಂದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಆಗಸ್ಟ್​ನಲ್ಲಿ ಬಂದಿದ್ದ ಪ್ರವಾಹದ ಹಾನಿಗೆ ಹಣ ಬಿಡುಗಡೆ ಮಾಡಿದೆ. ಅಕ್ಟೋಬರ್ ನಷ್ಟದ ಅಧ್ಯಯನ ಇನ್ನೂ ಪೂರ್ಣ ಆಗಿಲ್ಲ. ಕೂಡಲೇ ಅಧ್ಯಯನ ಪೂರ್ಣ ಮಾಡಿ ವರದಿ ಸಲ್ಲಿಸಿ ಹೆಚ್ಚಿನ ಪರಿಹಾರ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಹಣ ಬಂದಿಲ್ಲ: ಕೇಂದ್ರ ಸರ್ಕಾರದಿಂದ 669.85 ಕೋಟಿ ರೂ. ಬಿಡುಗಡೆಗೆ ಸಂಬಂಧಿಸಿ ದಂತೆ ಇನ್ನೂ ಹಣ ಬಂದಿಲ್ಲ. ಯಾವುದೇ ಕ್ಷಣದಲ್ಲಿ ಬರಬಹುದೆಂದು ಹೇಳಲಾಗುತ್ತಿದೆ.
ಅತಿ ಹೆಚ್ಚು: ಎಸ್​ಡಿಆರ್​ಎಫ್ ನಿಯಮಗಳಲ್ಲಿ ಇದುವರೆವಿಗೂ ರಾಜ್ಯಕ್ಕೆ ಬಂದಿರುವ ಹೆಚ್ಚಿನ ಮೊತ್ತ ಇದಾಗಿದೆ. 2009ರ ಪ್ರವಾಹಕ್ಕೆ 1400 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. 2016ರಲ್ಲಿ ಬರ ನಿರ್ವಹಣೆಗೆ 1540 ಕೋಟಿ ರೂ. ನೀಡಿತ್ತು. ಈಗ 1869.85 ಕೋಟಿ ರೂ. ನೀಡಿದೆ. ರಾಜ್ಯದ 45 ತಾಲೂಕುಗಳಲ್ಲಿ ಬರವೂ ಇದ್ದುದರಿಂದ ಬರ ಪರಿಹಾರಕ್ಕೂ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + two =
Remember me
