
ಬೆಂಗಳೂರು:ಮತಾಂಧರನ್ನು ಒಲೈಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ಸರ್ಕಾರ, ತಾಲಿಬಾನ್ ಸರ್ಕಾರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇರಳ, ಕಾಶ್ಮೀರ ಇಸ್ಲಾಮಿಕ್ ರಾಜ್ಯವಾದ ಮಾದರಿಯಲ್ಲೇ ಕರ್ನಾಟಕವನ್ನು ಮಾಡಲು ಮುಸ್ಲಿಮರನ್ನು ಪ್ರಚೋದನೆ ಮಾಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅರೆಹುಚ್ಚನನ್ನು ಪ್ರಧಾನಿ ಮಾಡಬೇಕೆಂದು ಈ ಹುಚ್ಚರು ಕೂಡಿ ದೇಶ ಹಾಳು ಮಾಡಲು ಮುಂದಾಗಿದ್ದಾರೆ. ಹಿಂದೂ, ಸನಾತನ ಧರ್ಮದ ಕುರಿತು ಡೆಂಗ್ಯೂ, ಮಲೇರಿಯಾ ಎನ್ನುವ ಕ್ರಾಸ್ ಬ್ರೀಡ್‌ಗಳು ಮಾತನಾಡುತ್ತಿವೆ ಎಂದು ಟೀಕಿಸಿದರು.ನಾನು ಭಾಗವಹಿಸಿದ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಹಿಂದೂಗಳಿಂದ ಕಲ್ಲೆಸೆತ, ಚಾಕು, ಚೂರಿ ಪ್ರದರ್ಶನ ನಡೆದಿಲ್ಲ. ಪ್ರಚೋದನೆಯ ಘೋಷಣೆ ಕೇಳಿಲ್ಲ ಎಂದರು.ಹಿಂದೂಗಳ, ಸನಾತನದ ಬಗ್ಗೆ ಬಂದರೆ ಇವರು ಅಪ್ಪ- ಮಗ ಕೂಡಿ ಹೇಳಿಕೆ ಕೊಡುತ್ತಾರೆ. ಈ ಸರಕಾರ ಸಂವಿಧಾನದಂತೆ ನಡೆಯುತ್ತಿದೆ. ಎಲ್ಲರ ರಕ್ಷಣೆ ಮಾಡುತ್ತಿದೆ ಎಂದು ಹೇಳುವ ಸಚಿವ ಪ್ರಿಯಾಂಕ ಖರ್ಗೆ ಶಿವಮೊಗ್ಗ ಘಟನೆ ಬಳಿಕ ನಾಪತ್ತೆಯಾಗಿದ್ದಾರೆ ಎಂದರು.ಕೋಲಾರದಲ್ಲಿ ತಮ್ಮ ಸಮುದಾಯದ ಸಂಸದರ ವಿರುದ್ಧ ಎಸ್ಪಿ ಉದ್ಧಟತನದಿಂದ ವರ್ತಿಸಿದರೆ, ಕುತ್ತಿಗೆ ಪಟ್ಟಿ ಹಿಡಿದು ಹೊರಹಾಕಿದರೆ ಖರ್ಗೆ ಮಾತನಾಡಿಲ್ಲ ಎಂದು ಟೀಕಿಸಿದರು.ಮತಾಂಧ ಮುಸ್ಲಿಂ ಯುವಕರು ಪಾಕಿಸ್ತಾನದ ಪರ ಘೋಷಣೆ ಕೂಗುವುದು, ನಮ್ಮ ದೇವಸ್ಥಾನಗಳ ಮುಂದೆ ಗೋವಿನ ತಲೆ ತಂದಿಡುವುದು ಹೆಚ್ಚಾಗಿದೆ. ಇನ್ನು ಮೇಲೆ ನಮ್ಮ ಸರಕಾರ ಇದೆ. ಮುಸ್ಲಿಂ ಸರಕಾರ ಇದೆ. ನಮಗೆ ಯಾರೂ ಏನೂ ಮಾಡುವುದಿಲ್ಲ ಎಂಬ ಸ್ಥಿತಿ ಬಂದಿದೆ ಎಂದರು.ಶಿವಮೊಗ್ಗದಲ್ಲಿ ಅನುಮತಿ ಇಲ್ಲದೆ ಬೃಹತ್ ಖಡ್ಗ ಪ್ರತಿಷ್ಠಾಪಿಸಿದ್ದಾರೆ. ಅಖಂಡ ಭಾರತದ ನಕ್ಷೆಯಲ್ಲಿ ಹಸಿರು ಬಣ್ಣ ಬಳಿದು ಔರಂಗಜೇಬನನ್ನು ವೈಭವೀಕರಿಸಿದ್ದಾರೆ. ಇಷ್ಟೆಲ್ಲ ಆಗಲು ಪೊಲೀಸ್ ಇಲಾಖೆ ಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದರು.ಗೃಹ ಸಚಿವ ಪರಮೇಶ್ವರ್ ನೀಡುತ್ತಿರುವ ಹೇಳಿಕೆಗಳು ಅವರ ವೈಫಲ್ಯವನ್ನು ತೋರಿಸುತ್ತವೆ. ಇದನ್ನು ಕ್ಷುಲ್ಲಕ ಘಟನೆ ಎನ್ನುತ್ತಾರೆ. ಒಬ್ಬ ಎಸ್ಪಿಯನ್ನೇ ಹೊಡೆಯಲು ಬರುವ ಪರಿಸ್ಥಿತಿ ನಿರ್ಮಾಣವಾದರೆ ಪೊಲೀಸರಲ್ಲಿ ನೈತಿಕ ಬಲ ಉಳಿಯಲು ಸಾಧ್ಯವೇ? ಎಂದರು.ಹಿಂದೆ ಕುಕ್ಕರ್ ಬ್ಲಾಸ್ಟ್ ಆದಾಗ ಬಂಧಿತರನ್ನು ಇನ್ನೊಸೆಂಟ್ ಬ್ರದರ್ಸ್ ಎಂದಿದ್ದ ಡಿಕೆಶಿಗೆ ಎಂಬ ಪುಣ್ಯಾತ್ಮನಿಗೆ ನಾಚಿಕೆ ಆಗುವುದಿಲ್ಲವೇ? ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನೂ ವಾಪಸ್ ಪಡೆಯಲು ಮುಂದಾಗಿದ್ದಾರೆ. ನೀವು ಕೇವಲ ಮುಸ್ಲಿಮರ ಮತದಿಂದಲೇ ಅಧಿಕಾರಕ್ಕೆ ಬಂದಿದ್ದೀರಾ? ಎಂದು ಕೇಳಿದರು.
ಯೋಗಿ ಮಧ್ಯಸ್ಥಿಕೆ ಬೇಕಾ?:ಮಾತೆತ್ತಿದರೆ ಪ್ರಧಾನಿ ಮಧ್ಯಸ್ಥಿಕೆ ಕೇಳುತ್ತಿದ್ದೀರಿ. ಶಿವಮೊಗ್ಗದಂತ ಘಟನೆಗಳನ್ನು ತಡೆಯಲು ಆಗದ ನಿಮಗೆ ಉತ್ತರ ಪ್ರದೇಶ ಸಿಎಂ ಯೋಗಿ ಮಧ್ಯಸ್ಥಿಕೆ ಬೇಕಾ? ಎಂದು ಛೇಡಿಸಿದರು.ಪೇಟ ಹಾಕಿಕೊಳ್ಳಲಿಲ್ಲ ಯಾಕೆ?: ನಿಮ್ಮದೇ ಸಮುದಾಯದ ಜನರು ಬೆಳಗಾವಿಯಲ್ಲಿ ನಿಮ್ಮನ್ನು ಸನ್ಮಾನಿಸುವಾಗ ಪೇಟ ಹಾಕಿಸಿಕೊಳ್ಳಲಿಲ್ಲ ಯಾಕೆ ಸಿದ್ದರಾಮಯ್ಯ ಅವರೇ? ನಿಮಗೆ ಟಿಪ್ಪು ಪೇಟ ಮಾತ್ರ ಇಷ್ಟನಾ? ಎಂದು ಕೇಳಿದರು.
ನಮಗೂ ಇದ್ದಾರೆ!:ನೀವು ಟಿಪ್ಪು, ಔರಂಗಜೇಬ ಎಂದು ಹೇಳಿಕೊಂಡು ಚಾಕು ಚೂರಿ ತೋರಿಸಿದರೆ, ನಮ್ಮಲ್ಲಿಯೂ ಶಿವಾಜಿ, ಸಂಗೋಳ್ಳಿ ರಾಯಣ್ಣರಂತವರು ಇದ್ದಾರೆ. ಮನೆ ಮನೆಗೆ ಹುಟ್ಟುತ್ತಾರೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
