ಬೆಂಗಳೂರು:ಕರ್ನಾಟಕದ11ಅರಣ್ಯ ವೃತ್ತಗಳಲ್ಲಿ339ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್​15ರವರೆಗೆ ಅವಕಾಶ ಕಲ್ಪಿಸಲಾಗಿತ್ತು.ಆದರೆ,ದೇಶಾದ್ಯಂತ ಲಾಕ್​ಡೌನ್​ಹಿನ್ನೆಲೆ ಆಸಕ್ತರಿಗೆಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸುವಲ್ಲಿ ಉಂಟಾಗುತ್ತಿರುವ ತೊಂದರೆಯನ್ನು ಪರಿಗಣಿಸಿ ಇನ್ನಷ್ಟು ಅವಧಿಯನ್ನು ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.ಅದರಂತೆ,ಮೇ15ರವರೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ.ಜತೆಗೆ,ಶುಲ್ಕ ಪಾವತಿಸಲು ಮೇ18ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?ಅರಣ್ಯ ರಕ್ಷಕ ಹುದ್ದೆಗಳಿಗೆಕಳೆದ ಮಾರ್ಚ್​16ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿತ್ತು.ದ್ವಿತೀಯಪಿಯುಸಿ,12ನೇ ತರಗತಿ ಅಥವಾತತ್ಸಮಾನ ವಿದ್ಯಾರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳಿಗೆಕನಿಷ್ಠ18ವರ್ಷ ವಯಸ್ಸಾಗಿರಬೇಕು.ಎಸ್‌ಸಿ,ಎಸ್‌ಟಿ,ಪ್ರವರ್ಗ1ರ ಅಭ್ಯರ್ಥಿಗಳಿಗೆ32ವರ್ಷ,ಪ್ರವರ್ಗ2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ30ವರ್ಷ,ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ27ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಏಲ್ಲೆಲ್ಲಿವೆ ಉದ್ಯೋಗಾವಕಾಶ?ಬೆಂಗಳೂರು,ಬೆಳಗಾವಿ,ಬಳ್ಳಾರಿ,ಚಾಮರಾಜನಗರ,ಚಿಕ್ಕಮಗಳೂರು,ಧಾರವಾಡ,ಹಾಸನ,ಕೆನರಾ,ಮಂಗಳೂರು,ಮೈಸೂರು ಹಾಗೂ ಶಿವಮೊಗ್ಗ ಅರಣ್ಯ ವೃತ್ತಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅಭ್ಯರ್ಥಿಯು ಈ11ವೃತ್ತಗಳಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಮಾತ್ರ ಆಯ್ಕೆ ಬಯಸಿ ಅರ್ಜಿ ಸಲ್ಲಿಸಬಹುದು.ಒಟ್ಟು339ಹುದ್ದೆಗಳಲ್ಲಿ12ಬ್ಯಾಕ್‌ಲಾಗ್ ಹುದ್ದೆಗಳಾಗಿವೆ.
ವೇತನಶ್ರೇಣಿ:21,400ರೂ.ದಿಂದ42,000ಇರುತ್ತದೆ.
ಆಯ್ಕೆ ವಿಧಾನ:ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಮೆರಿಟ್ ಆಧಾರದ ಮೇಲೆ ಮೀಸಲಾತಿ ಪ್ರವರ್ಗವಾರು,ವೃತ್ತವಾರು ಅಧಿಸೂಚಿಸಿರುವ ಹುದ್ದೆಗಳಿಗೆ1:20 (ಹುದ್ದೆ:ಅಭ್ಯರ್ಥಿ),ಅನುಪಾತದಲ್ಲಿ ದೇಹದಾರ್ಢ್ಯತೆ,ದೈಹಿಕ ಸಹಿಷ್ಣುತೆ,ದೈಹಿಕ ಕಾರ್ಯಕ್ಷಮತೆ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಇದರಲ್ಲಿಅರ್ಹರಾದ ಅಭ್ಯರ್ಥಿಗಳು ಮುಂದಿನ ಹಂತದ ಲಿಖಿತ ಅಪ್ಟಿಟ್ಯೂಡ್ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.
ಅರಣ್ಯ ರಕ್ಷಕ ಹುದ್ದೆಗೆ ಲಿಖಿತ ಅಪ್ಟಿಟ್ಯೂಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಈ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಮಟ್ಟದಲ್ಲಿದ್ದು,ಬಹು ಆಯ್ಕೆ ಮಾದರಿಯ ಹಾಗೂ100ಪ್ರಶ್ನೆಗಳು ಹಾಗೂ100ಅಂಕಗಳದ್ದಾಗಿರುತ್ತದೆ.ಪರೀಕ್ಷಾ ಅವಧಿ2ಗಂಟೆ ಆಗಿರುತ್ತದೆ.
ಲಿಖಿತ ಪರೀಕ್ಷಾ ಕೇಂದ್ರ:ಲಿಖಿತ ಅಪ್ಟಿಟ್ಯೂಡ್ ಪರೀಕ್ಷೆಗಳನ್ನು ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಅಧಿಸೂಚಿಸಲ್ಪಟ್ಟ ವೃತ್ತಗಳ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.ಬೆಳಗಾವಿ,ಬೆಂಗಳೂರು,ಬಳ್ಳಾರಿ,ಚಾಮರಾಜನಗರ,ಚಿಕ್ಕಮಗಳೂರು,ಧಾರವಾಡ,ಹಾಸನ,ಕೆನರಾ(ಶಿರಸಿ),ಮಂಗಳೂರು,ಮೈಸೂರು,ಶಿವಮೊಗ್ಗ.ಲಿಖಿತ ಪರೀಕ್ಷೆಯ ವಿಷಯಗಳು:ಗಣಿತ(40ಅಂಕಗಳು),ಸಾಮಾನ್ಯ ಜ್ಞಾನ(60ಅಂಕಗಳು).
ಅರ್ಜಿ ಸಲ್ಲಿಕೆ ವಿಧಾನ:ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳುhttp://www.forestapp-kar.com/fg2020/new_registration.phpಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
7, 8ನೇ ಕ್ಲಾಸ್​ಗೆ ಪರೀಕ್ಷೆ ಇರಲ್ಲ, ಏಪ್ರಿಲ್​ 14ರ ನಂತರ ಎಸ್​ಎಸ್ಎಲ್ಸಿ ವೇಳಾಪಟ್ಟಿ ನಿಗದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
