ಬೆಂಗಳೂರು:ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸೆಪ್ಟೆಂಬರ್ 15ರಿಂದ ಜಾರಿಗೊಳಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿರುತ್ತದೆ. ಈ ಯೋಜನೆಗೆ ಒಳಪಡುವ ಎಲ್ಲ ಸರ್ಕಾರಿ ಅಧಿಕಾರಿ/ನೌಕರರು ಮತ್ತು ತಮ್ಮ ಅವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು ನೊಂದಣಿ ಮಾಡಿಕೊಳ್ಳಲು ಎಚ್.ಆರ್.ಎಂ.ಎಸ್. ತಂತ್ರಾಂಶ ಹಾಗೂ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.ಎಲ್ಲ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು ತಮ್ಮ ಇಲಾಖೆಯ ಡಿಡಿಓ ಮೂಲಕ ತಮ್ಮ ಹಾಗೂಅವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು ನೊಂದಣಿ ಮಾಡಿಸಿಕೊಳ್ಳಲು ಈ ಹಿಂದೆ ತಿಳಿಸಿದಾಗ್ಯೂ ಸರ್ಕಾರಿ ನೌಕರರು ನಿರೀಕ್ಷಿತ ಮಟ್ಟದಲ್ಲಿ ನೊಂದಣಿ ಮಾಡಿಕೊಳ್ಳದೆ ಇರುವುದರಿಂದ ಯೋಜನೆ ಜಾರಿಗೊಳಿಸಲು ಅಡ್ಡಿಯುಂಟಾಗಿರುತ್ತದೆ.ಆದ್ದರಿಂದ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಹೊರಡಿಸಲಾಗಿರುವ ಆ.10,2023ರ ಸುತ್ತೋಲೆಯ ನಿರ್ದೇಶನದಂತೆ ಎಲ್ಲ ಸರ್ಕಾರಿ ಅಧಿಕಾರಿ/ನೌಕರರು ತಾವುಗಳು ಕರ್ತವ್ಯ ನಿರ್ವಹಿಸುವ ಇಲಾಖೆಗಳ ಡಿ.ಡಿ.ಓ. ಗಳನ್ನು ಸಂಪರ್ಕಿಸಿ ಎಚ್.ಆರ್.ಎಂ.ಎಸ್. ತಂತ್ರಾಂಶ https://hrms.karnataka.gov.in/ ಹಾಗೂ ಮೊಬೈಲ್ ಅಪ್ಲಿಕೇಶನ್ https://hrmsenroll.karnataka.gov.in/ ಮೂಲಕ ತಮ್ಮ ಹಾಗೂ ಅವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು 2023ನೇ ಸೆಪ್ಟೆಂಬರ್ 15ರ ಒಳಗಾಗಿ ನೊಂದಾಯಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಡಾ.ನೆಲ್ಕುದ್ರಿ ಸದಾನಂದಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
