ಬೆಂಗಳೂರು:ಪ್ರಾತಃಸ್ಮರಣೀಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ತಪೋತಾಣ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿರುವ ‘ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಮಠ’ದಲ್ಲಿ ಆರಂಭಿಸಲಾಗಿರುವ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷ (2024-25 )ಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಪ್ರಾಥಮಿಕ 5ನೇ, 6ನೇ ಹಾಗೂ 7ನೇ ತರಗತಿ ಪಾಸಾಗಿ ಮುಂದಿನ ತರಗತಿಯ ಶಿಕ್ಷಣ(ವ್ಯಾಸಂಗ) ಮುಂದುವರೆಸಲು ಇಚ್ಚಿಸುವ ವೀರಶೈವ ಬಡ ಜಂಗಮ (ವೀರಮಹೇಶ್ವರ) ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಬಹುದಾಗಿದೆ. ಶ್ರೀಮಠದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯವಿದ್ದು, ಉಚಿತ ಪ್ರಸಾದದ ವ್ಯವಸ್ಥೆಯಿದೆ. ಜೊತೆಗೆ ಅನುಭವಿಗಳಿಂದ ವೇದ, ಆಗಮ, ಉಪನಿಷತ್ತುಗಳನ್ನು ಆಧರಿಸಿ ಧಾರ್ಮಿಕ, ವೈದಿಕ ಮತ್ತು ಆಧ್ಯಾತ್ಮಿಕ ಶಿಕ್ಷಣದೊಂದಿಗೆ ಸಾಂಪ್ರದಾಯಿಕ ಭೌತಿಕ ಶಿಕ್ಷಣವನ್ನು ನೀಡಲಾಗುವುದು.
ಇದನ್ನೂ ಓದಿ:ಮತ್ತೊಮ್ಮೆ ಅಬ್ಬರಿಸಲು ಸಜ್ಜಾದ ಸ್ಕ್ಯಾಮ್​ ಸರಣಿ; ಶೂಟಿಂಗ್​ಗೂ ಮುನ್ನವೇ ನೋಟಿಸ್​ ಜಾರಿ
ವಿದ್ಯಾರ್ಥಿಗಳಿಗೆ ಜ್ಯೋತಿಷ್ಯ ಶಾಸ್ತ್ರ, ಯೋಗ ಮುಂತಾದ ವಿಶೇಷ ಕಲಿಕಾವರ್ಗಗಳನ್ನು ನಡೆಸಲಾಗುವುದು. ರಾಜ್ಯದಲ್ಲಿರುವ ವೀರಶೈವ ಬಡ ಜಂಗಮ(ವೀರಮಹೇಶ್ವರ) ವಿದ್ಯಾರ್ಥಿಗಳು ತಮ್ಮ ಪೂರ್ಣಹೆಸರು, ಜನ್ಮದಿನಾಂಕ, ಜನ್ಮಸ್ಥಳ, ಕಲಿಯುತ್ತಿರುವ ವರ್ಗ, ಕುಟುಂಬದ ವಾರ್ಷಿಕ ಆದಾಯ, ತಂದೆಯ ಹೆಸರು, ತಾಯಿಯ ಹೆಸರು, ಪೂರ್ಣ ಅಂಚೆ ವಿಳಾಸ ಸೇರಿದಂತೆ ವಿವಿಧ ಪೂರಕ ಮಾಹಿತಿಯೊಂದಿಗೆ ಧರ್ಮದರ್ಶಿಗಳು, ಶ್ರೀಗುರು ಶಿವಪ್ಪಯ್ಯ ಶಿವಯೋಗಿ ಏಜ್ಯುಕೇಷನಲ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ ಉಗರಗೋಳ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಮೇ-24ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಜೊತೆಗೆ ಮೇ-26 ರವಿವಾರ ಮುಂಜಾನೆ 11 ಗಂಟೆಗೆ ಅರ್ಜಿ ಸಲ್ಲಿಸಿದ ಪಾಲಕರು ಇಲ್ಲವೇ ಪೋಷಕರು ತಮ್ಮ ಮಕ್ಕಳೊಂದಿಗೆ ಸವದತ್ತಿ ತಾಲ್ಲೂಕು ಉಗರಗೋಳ ಗ್ರಾಮದ ಶ್ರೀಮಠದಲ್ಲಿ ಜರುಗುವ ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗೆ8660693154, 9845480675ಅಥವಾ9663511022ಮೂಲಕ ಸಂಪರ್ಕಿಸುವ೦ತೆ ನಗರದ ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಂ.ಆರ್ . ಹಿರೇಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + ten =
Remember me
