ಬೆಂಗಳೂರು:ನ್ಯಾಯವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್​) ಹಾಗೂ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ 84 ವೈಜ್ಞಾನಿಕ ಅಧಿಕಾರಿಗಳ ನೇಮಕಾತಿಗೆ ಪೊಲೀಸ್​ ಇಲಾಖೆ ಅರ್ಜಿ ಆಹ್ವಾನಿಸಿದೆ.
ಜೀವಶಾಸ್ತ್ರ ವಿಭಾಗದ 12 ಹುದ್ದೆಗಳು, ರಸಾಯನಶಾಸ್ತ್ರ ವಿಭಾಗದ 8, ನಾರ್ಕೋಟಿಕ್ಸ್​ ವಿಭಾಗದ 2 ಮತ್ತು ಭೌತಶಾಸ್ತ್ರ ವಿಭಾಗದ 5, ಡಿಎನ್​ಎ ವಿಭಾಗದ 2, ಪ್ರಶ್ನಿತ ದಸ್ತಾವೇಜು ವಿಭಾಗದ10, ಅಗ್ನಿ ಅಸ್ತ್ರ ವಿಭಾಗದ 6, ಫೊರೆನ್ಸಿಕ್​​ ಮನೋವಿಜ್ಞಾನದ 1, ಕಂಪ್ಯೂಟರ್​ ಫೊರೆನ್ಸಿಕ್​ ವಿಭಾಗದ 5, ಮೊಬೈಲ್​ ಪೊರೆನ್ಸಿಕ್​ ವಿಭಾಗದ 5, ಆಡಿಯೋ ವಿಡಿಯೋ ವಿಭಾಗದ 5, ವಿಷ ವಿಜ್ಞಾನ ವಿಭಾಗದ 21, ಪೋಟೋಗ್ರಫಿ ವಿಭಾಗದ 2 ಸೇರಿ 84 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಆಸಕ್ತರು ಜೂನ್​ 7ರ ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಸಬಹುದು. ಜುಲೈ 7ರ ಸಂಜೆ 6 ಗಂಟೆಗೆ ಅರ್ಜಿ ಸಲ್ಲಿಕೆಯ ಅವಧಿ ಮುಗಿಯಲಿದೆ. ಶುಲ್ಕ ಪಾವತಿಗೆ ಅಧಿಕೃತ ಬ್ಯಾಂಕ್​ ಅಥವಾ ಅಂಚೆ ಕಚೇರಿಗಳಲ್ಲಿ ಜುಲೈ 9ರ ಕಚೇರಿ ಸಮಯದವರೆಗೂ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸ್​ ನೇಮಕಾತಿ ವಿಭಾಗದ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ.
ಸತ್ಯ ತಿಳಿಯುವುದು ಹೇಗೆ?; ಫ್ಯಾಕ್ಟ್​ಚೆಕ್​ಗೆ ಇಲ್ಲಿವೆ ಸುಲಭದ ಮಾರ್ಗಗಳು…

ಸಿನಿಮಾ ತಂತ್ರಜ್ಞರ ಸಹಾಯಕ್ಕೆ ನಟಿ ಶರ್ಮಿಳಾ ಮಾಂಡ್ರೆ; ಊಟ-ತಿಂಡಿ, ದಿನಸಿ ಕಿಟ್ ವಿತರಣೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
