ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿಗಳ ವಿಲೇ ಪ್ರಕ್ರಿಯೆಯನ್ನು ಆಹಾರ ಇಲಾಖೆಯು ಡಿಸೆಂಬರ್ ಮೊದಲ ವಾರದಲ್ಲಿ ಆರಂಭಿಸುವ ಸಾಧ್ಯತೆಯಿದೆ. ಜತೆಗೆ, ಆನ್‌ಲೈನ್‌ನಲ್ಲಿಯೂ ಹೊಸದಾಗಿ ಅರ್ಜಿ ಸಲ್ಲಿಸುವ ಸಂಬಂಧ ಅವಕಾಶ ಸಿಗುವ ನಿರೀಕ್ಷೆಯಿದೆ.
9 ತಿಂಗಳು ಬಳಿಕ ಅನುಮತಿ:ಮಹಾಮಾರಿ ಕರೊನಾ ನಿಯಂತ್ರಿಸುವ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿಗಳ ವಿಲೇ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ, ಹೊಸ ಕಾರ್ಡ್‌ಗಾಗಿ ಅರ್ಜಿದಾರರು ಮತ್ತಷ್ಟು ತಿಂಗಳು ಕಾಯಬೇಕಾಗಿತ್ತು. ಕರೊನಾ ಸೋಂಕಿತರ ಸಂಖ್ಯೆ ಇಳಿಕೆ ಹಾಗೂ ಆನ್‌ಲಾಕ್ ತೆರವು ಹಿನ್ನೆಲೆಯಲ್ಲಿ ಹಿಂದಿನ ವ್ಯವಸ್ಥೆಯಂತೆ ಎಲ್ಲ ವಹಿವಾಟುಗಳು ನಡೆಯುತ್ತಿರುವುದರಿಂದ ಬಾಕಿ ಅರ್ಜಿಗಳ ವಿಲೇ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ ಮೊದಲ ವಾರದಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಮೂರು ಲಕ್ಷ ಅರ್ಜಿ ಬಾಕಿ:ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 35,56 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿತ್ತು. ಇದರಲ್ಲಿ 31,77 ಲಕ್ಷ ಅರ್ಜಿಗಳು ವಿಲೇವಾಗಿದ್ದು, 3,78 ಲಕ್ಷ ಅರ್ಜಿಗಳು ವಿಲೇವಾಗದೆ ಬಾಕಿ ಉಳಿದಿವೆ. 2017ರಲ್ಲಿ ಸಲ್ಲಿಕೆಯಾಗಿರುವ ಅತಿ ಹೆಚ್ಚು 25,28,736 ಅರ್ಜಿಗಳ ಪೈಕಿ 25,00,736 ಅರ್ಜಿಗಳು ವಿಲೇಯಾಗಿದ್ದು, 28 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. 2018ರಲ್ಲಿ ಸಲ್ಲಿಕೆಯಾಗಿರುವ 6,38,154 ಅರ್ಜಿಗಳ ಪೈಕಿ 3,77,199 ಅರ್ಜಿಗಳು ವಿಲೇವಾದರೆ ಬರೋಬ್ಬರಿ 2,60,955 ಅರ್ಜಿಗಳು ವಿಲೇವಾಗಿಲ್ಲ ಹಾಗೂ 2019ರಲ್ಲಿ 89,847 ಈಗಾಗಲೇ ಅರ್ಜಿಗಳು ಸಲ್ಲಿಕೆಯಾಗಿವೆ.
ಏನೇನು ದಾಖಲೆಗಳು ಬೇಕು:ರೇಷನ್ ಕಾರ್ಡ್‌ಗಾಗಿ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರ ಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + four =
Remember me
