ಬೆಂಗಳೂರು:ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಮಸ್ಯೆಯಲ್ಲಿ ನರಳುತ್ತಿರುವ ಬಗ್ಗೆ ‘ಶೋಕಗಾಥೆ’ಯೊಂದನ್ನು ಮಾಜಿ ಸಚಿವ, ಶಾಸಕ ಎಸ್.ಸುರೇಶ್‌ಕುಮಾರ್ ಸಿದ್ಧಪಡಿಸಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ರವಾನಿಸಿದ್ದಾರೆ.
ಯುವ ನಿಯೋಗವೊಂದು ಗೃಹ ಕಚೇರಿಗೆ ಬಂದು ಭೇಟಿಯಾಗಿ ಈ ‘ಶೋಕಗಾಥೆ’ಯನ್ನು ವಿವರಿಸಿದೆ ಎಂದು ರಾಜ್ಯ ಸರ್ಕಾರದ ವಿಳಂಬ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ ಕೊಡಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಬದಲಿಗೆ ಕೆಲಸ ಕೊಟ್ಟ ಬದ್ಧತೆ ತೋರಿಸಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದು ನ್ಯಾಯಸಮ್ಮತ ಕ್ರಮವಾಗಿದ್ದು, ಕೂಡಲೇ ಗಮನಹರಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯಿಸಿದ್ದಾರೆ.
ಸರ್ಕಾರಿ ಪದವಿ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರ ನೇಮಕ 2021ರ ಸೆಪ್ಟೆಂಬರ್‌ನಿಂದ ನನೆಗುದಿ. ಕಾನೂನು ತೊಡಕು ಇತ್ಯರ್ಥ ನಂತರ ಆಯ್ಕೆಯಾದವರ ಪೈಕಿ 1,100ಅಭ್ಯರ್ಥಿಗಳ ದಾಖಲಾತಿ ನೈಜತೆ ಪರಿಶೀಲನೆ ಮುಗಿದಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ತಡೆಬಿತ್ತು. ಇದಾದ ನಂತರ 2024ರ ೆಬ್ರವರಿಯಲ್ಲಿ ಹೊಸದಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೆ ವೇಳಾಪಟ್ಟಿ ಪ್ರಕಟಿಸಿ ಮರುದಿನವೇ ತಡೆದಿದ್ದು, ಈವರೆಗೂ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ.
ಕಲ್ಯಾಣ ಕರ್ನಾಟಕ ಕೋಟಾ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಬೇರೆ ಇಲಾಖೆಗಳಲ್ಲಿ ಹೈಕೋರ್ಟ್ ಅಂತಿಮ ತೀರ್ಪು ಷರತ್ತಿಗೆ ಒಳಪಟ್ಟು ನೇಮಕಾತಿ ಆದೇಶ ನೀಡಿದ್ದು, ಇದೇ ಮಾದರಿಯನ್ನು ಉನ್ನತ ಶಿಕ್ಷಣ ಅನುಸರಿಸುವ ಬದಲು ವಿವಿಧ ಕಾರಣಗಳನ್ನೊಡ್ಡಿ ಕಾಲಹರಣ ಮಾಡಲಾಗುತ್ತಿದೆ ಎಂದು ಎಸ್.ಸುರೇಶ್ ಕುಮಾರ್ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + nine =
Remember me
