ಚಿಕ್ಕಬಳ್ಳಾಪುರ:ಶನಿವಾರ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಉಡುಗೊರೆ ನೀಡಲು ಅಪ್ಪು ಅಭಿಮಾನಿಗಳು ವಿಶೇಷವಾದ ರೇಷ್ಮೆ ಸೀರೆಯೊಂದನ್ನು ತಯಾರಿಸಿ ತಂದಿದ್ದಾರೆ. ಅಪ್ಪು ಭಾವಚಿತ್ರವಿರುವ ರೇಷ್ಮೆ ಸೀರೆ ಇದಾಗಿದ್ದು, ಚಿಕ್ಕಬಳ್ಳಾಪುರದ ರೇಷ್ಮೆ ಡಿಸೈನರ್ಸ್​​​​ ಕಡೆಯಿಂದ ಅಶ್ವಿನಿ ಪುನೀತ್​ ರಾಜ್​ಕುಮಾರ್​ರಿಗಾಗಿಯೇ ವಿಭಿನ್ನವಾಗಿ ತಯಾರಿಸಲಾಗಿದೆ.
ಪುನೀತ್​ರಾಜ್​​ಕುಮಾರ್​​ ಸಮಾಧಿಯ ಬಳಿ ಆಗಮಿಸಿದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಈ ವಿಶೇಷ ಸೀರೆಯನ್ನು ಅಶ್ವಿನಿ ಪುನೀತ್​ರಿಗೆ ನೀಡಬೇಕೆಂದಿದ್ದರು. ಆದರೆ ಜನಸಂದಣಿಯ ಕಾರಣ ಈ ಸೀರೆಯನ್ನು ಅವರಿಗೆ ನೀಡಲಾಗದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಶನಿವಾರ ರಾಘಣ್ಣ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ವೇಳೆ ಈ ಸೀರೆಯನ್ನು ಅವರ ಬಳಿ ನೀಡಿದ್ದಾರೆ.
ಗೋಲ್ಡನ್​ ಬಣ್ಣದ ಈ ರೇಷ್ಮೆ ಸೀರೆಯಲ್ಲಿ ಅಪ್ಪು ಭಾವಚಿತ್ರವನ್ನು ನೀಲಿ ಬಣ್ಣದಿಂದ ಮಾಡಲಾಗಿದೆ. ಹಾಗೂ ಸೀರೆಯ ಕೆಳಭಾಗದಲ್ಲಿ ಡಾ.ಪುನೀತ್​​ ರಾಜ್​ಕುಮಾರ್​ ಎಂಬ ಹೆಸರನ್ನು ಸಾಲಾಗಿ ಚಿತ್ರಿಸಲಾಗಿದೆ. ಅಭಿಮಾನಿಗಳು ಕೊಟ್ಟ ಈ ಸೀರೆಯನ್ನು ಸ್ವೀಕರಿಸಿದ ರಾಘಣ್ಣ ಕೆಲಕ್ಷಣ ಭಾವುಕರಾದರು. ನಂತರ ಅಶ್ವಿನಿ ಅವರಿಗೆ ನೀಡುವುದಾಗಿ ತಿಳಿಸಿ ತಾವೇ ಆ ಸೀರೆಯನ್ನು ಪಡೆದುಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
