ಬೆಂಗಳೂರು:ಜನ ಸೇವೆಯೇ ಜನಾರ್ದನ ಸೇವೆ ಎಂಬ ಉದ್ದೇಶದಿಂದ ಆರಂಭವಾದ ರಕ್ಷಾ ಪೌಂಢೇಶನ್ ನಿಜವಾಗಿಯು ಬಡವರ ಪಾಲಿಗೆ ಶ್ರೀರಕ್ಷೆಯಾಗಿದೆ ಎಂದರೆ ತಪ್ಪಾಗಲಾರದು.
ದಿವಂಗತ ವಿಜಯಕುಮಾರ್ ಅವರ ಪರಮಾಪ್ತ ಹಾಗೂ ಬಿಜೆಪಿ ಮುಖಂಡ ಸಿ.ಕೆ ರಾಮಮೂರ್ತಿ ಇದರ ಸಂಸ್ಥಾಪಕರಾಗಿದ್ದು, ಕಳೆದ 30 ವರ್ಷದಿಂದ ಜನಸೇವೆ ಮಾಡುತ್ತ ಬಂದಿದ್ದಾರೆ. ಇವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಯೊಂದು ಮಹತ್ತರ ಯೋಜನೆಯೂ ಇಂದಿಗೂ ಲಕ್ಷಾಂತರ ಬಡವರು ಮತ್ತು ಬಡ ವಿದ್ಯಾರ್ಥಿಗಳ ಬಾಳು ಬೆಳಗುತ್ತಿದೆ. ಬಡತನದಿಂದ ಕಂಗೆಟ್ಟ ಅದೆಷ್ಟೋ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವ ಮೂಲಕ ಬದುಕು ಕಟ್ಟಿಕೊಟ್ಟಿದ್ದಾರೆ.
ಸಮಾಜ ಸೇವೆಯಲ್ಲಿ ಸಾಕಷ್ಟು ಹೆಸರುಗಳಿಸಿದ್ದ ಸಿ.ಕೆ.ರಾಮಮೂರ್ತಿ ಜನಾಶೀರ್ವಾದದಿಂದ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಅವರ ಅವಧಿಯಲ್ಲಿ ನಡೆದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದ ಜನತೆ 2ನೇ ಬಾರಿಗೂ ಆಶೀರ್ವದಿಸಿದರು. ಇದೀಗ ಪತ್ನಿ ನಾಗರತ್ನ ಪಟ್ಟಭಿರಾಮನಗರ ವಾರ್ಡ್ ನಿಂದ ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತಿರುವ ದಂಪತಿ, ರಸ್ತೆ, ಕುಡಿಯುವ ನೀರು, ಮೈದಾನ ಹಾಗೂ ಉದ್ಯಾನವನ ಅಭಿವೃದ್ಧಿ ಹೀಗೆ ಜನತೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಜನಮನ ಗೆದ್ದಿದ್ದಾರೆ.
ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದ ನಾಗರತ್ನ ರಾಮಮೂರ್ತಿ, ರಾಜ್ಯದ ವಿವಿಧ ಭಾಗಗಳ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತ ಬಂದಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್, ಮೆಡಿಕಲ್ ಕಿಟ್, ಸ್ಕಾಲರ್ ಶೀಪ್, ಸೈಕಲ್, ಅಂಗವಿಕಲರಿಗೆ ತ್ರಿಚಕ್ರ ವಾಹನ, ನಿರುದ್ಯೋಗಿಗಳಿಗೆ ಆಟೋ ವಿತರಣೆ ಹೀಗೆ ನೂರಾರು ಯೋಜನೆಗಳು ಇವರ ಸಮಾಜಸೇವೆಯ ಕೈಗನ್ನಡಿಯಂತಿವೆ. ಕೊರೊನಾದಿಂದ ತತ್ತರಿಸಿರುವ ಸಾವಿರಾರು ಕುಟುಂಬಗಳಿಗೆ ನೆರವಾದ ದಂಪತಿ.
ಲಾಕ್​ಡೌನ್ ಪ್ರಾರಂಭವಾದ ದಿನದಿಂದ ಈವರೆಗೆ ಜಯನಗರ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದ್ದು, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಉಚಿತ ಊಟ ವಿತರಣೆ ಮಾಡುತ್ತಿದ್ದಾರೆ. ಅಂದಾಜು 30 ಸಾವಿರ ಜನರ ಹಸಿವು ನೀಗಿಸಿದ ಹೆಗ್ಗಳಿಕೆ ಇವರದು.
ಪ್ರತಿದಿನ ಜಯನಗರ, ಪಟ್ಟಾಭಿರಾಮನಗರ, ಗ್ರೇಪ್ ಗಾರ್ಡ್​ನ್, ಭೈರಸಂದ್ರ, ಗುರಪ್ಪನ ಪಾಳ್ಯ ಹೀಗೆ ಕ್ಷೇತ್ರದೆಲ್ಲೆಡೆ ಸಂಚರಿಸಿ ಬಡವರಿಗೆ ಧವಸ ದಾನ್ಯ, ಹಾಲು, ಹಣ್ಣು, ತರಕಾರಿ, ಸ್ಯಾನಿಟೈಸರ್, ಮಾಸ್ಕ್ ವಿತರಣೆ ಜತೆಗೆ
ವಾರ್ಡ್​ನ ವಿವಿಧ ಭಾಗಗಳಲ್ಲಿ ಔಷಧಿ ಸಿಂಪಡಣೆ ಕಾರ್ಯ ಮಾಡುತ್ತಿದ್ದಾರೆ. ಪಾಲಿಕೆ ಸದಸ್ಯೆ ನಾಗರತ್ನ ಅವರು ಮನೆಮೆನೆಗೆ ತೆರಳಿ ಬಡವರ ಕಷ್ಟಗಳನ್ನು ಆಲಿಸುತ್ತ ಅವರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ತಲುಪಿಸುವ ಮೂಲಕ ಮನೆ ಮಾತಾಗಿದ್ದಾರೆ.
ಹಿರಿಯ ನಾಗರಿಕರು ಮತ್ತು ಬಡವರ ಆರೋಗ್ಯ ದೃಷ್ಟಿಯಿಂದ ರಕ್ಷಾ ಪೌಂಢೇಶನ್ ಮೂಲಕ 4 ಲಕ್ಷ ರೂ. ಮೀಸಲಿಟ್ಟಿದ್ದಾರೆ. ಸಹಾಯ ಹಸ್ತ ಎಂಬ ಆಪ್ ತೆರೆಯಲಾಗಿದೆ. ಆಪ್​ನಲ್ಲಿ ನೊಂದಣಿ ಮಾಡಿದ ಬಡವರು 500 ರೂ. ಮೌಲ್ಯದ ಔಷಧಿಯನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಿದ್ದಾರೆ.
ಜಯನಗರ ಕ್ಷೇತ್ರದಲ್ಲಿ ಜನಪರ ಕಾಳಜಿಯುಳ್ಳ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ರಾಮಮೂರ್ತಿ ಮಾಡಿದ್ದಾರೆ. ವಿಜಯ ಕುಮಾರ್ ಅವರಂತೆಯೇ ಜನಾನುರಾಗಿಯಾಗಿದ್ದಾರೆ. ನಾಯಕತ್ವದ ಗುಣಗಳನ್ನು ಸಮಾಜ ಸೇವೆಯ ಮೂಲಕ ತೊಡಗಿಸುತ್ತಿದ್ದಾರೆ.
| ಆರ್.ಅಶೋಕ್ ಕಂದಾಯ ಸಚಿವ
ಕ್ಷೇತ್ರದ ಅಭಿವೃಧಿ್ದ ಮತ್ತು ಕುಂದುಕೊರತೆಗಳ ನಿವಾರಣೆಗೆ ಸಂಸದ ತೇಜಸ್ವಿಸೂರ್ಯ ಅವರು ಸಂಪೂರ್ಣವಾಗಿ ಸ್ಪಂದಿಸುತ್ತಿದ್ದಾರೆ. ಅವರ ಸಲಹೆ ಮತ್ತು ಸೂಚನೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ. ಕರೊನಾ ಸಮಯದಲ್ಲಿ ಅನ್ನದಾಸೋಹ, ಧವಸ ದಾನ್ಯ ವಿತರಣೆಗೆ ಸಂಪೂರ್ಣ ಬೆಂಬಲ ಹಾಗೂ ಸಹಾಯ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ.
| ನಾಗರತ್ನ ಸಿ.ಕೆ ರಾಮಮೂರ್ತಿ ಪಾಲಿಕೆ ಸದಸ್ಯೆ
ರಕ್ಷಾ ಪೌಂಢೇಶನ್ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಸೀಲ್​ಡೌನ್ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಔಷಧಿ ಸಿಂಪಡಿಸಲು ಸ್ಯಾನಿಟೈಸರ್ ಯಂತ್ರವನ್ನು ಬಿಬಿಎಂಪಿ ದಕ್ಷಿಣ ವಲಯಕ್ಕೆ ಉಚಿತವಾಗಿ ನೀಡಿದ್ದಾರೆ ಅವರಿಗೆ ಧನ್ಯವಾದಗಳು.
| ವಿರೇಂದ್ರಸ್ವಾಮಿ ಜಂಟಿ ಆಯುಕ್ತ ಬಿಬಿಎಂಪಿ ದಕ್ಷಿಣವಲಯ
ನಮಗೆ ಕಷ್ಟ ಎಂದು ಪಾಲಿಕೆ ಕಚೇರಿಗೆ ಹೋದರೆ ಯಾವ ಜಾತಿ ಧರ್ಮವನ್ನೂ ಕೇಳುವುದಿಲ್ಲ. ಕಚೇರಿಯಲ್ಲಿ ಕೂರಿಸಿ ಚಹಾ ಕೊಟ್ಟು ನಮ್ಮ ಸಮಸ್ಯೆಗಳನ್ನು ಆಲಿಸುತ್ತಾರೆ. ಕೂಡಲೇ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆ ಬಗೆಹರಿ ಸುತ್ತಾರೆ. ಕರೊನಾ ಬಂದ ಮೇಲೆ ಬಡಾವಣೆಯ ಬಡವರಿಗೆ 200 ಕಿಟ್ ದಿನಸಿ ನೀಡಿದ್ದಾರೆ.
| ಲಾಮೀಯಾ ಬೇಗಂ
ಹಲವು ವರ್ಷಗಳಿಂದ ಸಿ.ಕೆ.ರಾಮಮೂರ್ತಿಯವರು ಸಹಾಯ ಮಾಡುತ್ತಿದ್ದಾರೆ.ಕಾಪೋರೇಟರ್ ಆಗಿ ಬಂದ ಮೇಲೆ ನಮ್ಮ ಏರಿಯಾದಲ್ಲಿ ಇದ್ದ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ.ಅಂದಿನಿಂದ ಇಂದಿನವರೆಗೆ ನಮ್ಮ ಎಲ್ಲ ಕಷ್ಟಗಳಿಗೂ ಸ್ಪಂದಿಸುತ್ತಾ ಬಂದಿದ್ದಾರೆ.ನಮಗೆ ಆಹಾರ ಕಿಟ್ ಕೊಟ್ಟು ಸಹಾಯ ಮಾಡಿದ್ದಾರೆ.
| ಹರೀಶ್ ಆರಾಧ್ಯ ಪಟ್ಟಾಭಿರಾಮನಗರ
ವಿಜಯಕುಮಾರ್ ಅವರ 2ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೇ.4 ರಂದು 1000 ಬಡವರಿಗೆ ಉಚಿತ ದಿನಸಿ ಕಿಟ್ ವಿತರಿಸಿದ್ದೇವೆ. ಪೌರಕಾರ್ವಿುಕರು, ಆರಕ್ಷಕ ಸಿಬ್ಬಂದಿ, ಜಲಮಂಡಳಿ ನೌಕರರು, ಕೂಲಿಕಾರ್ವಿುಕರು ಸೇರಿ ಈವರೆಗೆ ಅಂದಾಜು 6 ಸಾವಿರ ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಈ ಮೂಲಕ ರಾಜಕೀಯ ಗುರುಗಳ ಸೇವೆ ಸಲ್ಲಿಸಿದ್ದ ತೃಪ್ತಿ ನನಗಿದೆ.
| ಸಿ.ಕೆ.ರಾಮಮೂರ್ತಿ
ಜಯನಗರದಲ್ಲಿ ಅಭಿವೃದ್ಧಿ ಎಂದರೆ ದಿವಂಗತ ವಿಜಯಕುಮಾರ್ ಅವರ ಶಿಷ್ಯರಾದ ಸಿ.ಕೆ.ರಾಮಮೂರ್ತಿ ಅವರು ವಿಜಯಕುಮಾರ್ ಹೆಸರನ್ನು ಉಳಿಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಲು, ಹಣ್ಣು, ತರಕಾರಿ ಮಾತ್ರವಲ್ಲದೆ ನಮಗಿರುವ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲೇ ಪರಿಹಾರ ಕೊಡಿಸುತ್ತಿದ್ದಾರೆ.
| ಶೇಖರ್ ಜಯನಗರ
ಎಚ್ಚರ ತಪ್ಪಿದರೆ ಕಂಟಕ! ಕರೊನಾ ಆತಂಕ ಉಲ್ಬಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 20 =
Remember me
