| ರಮೇಶ್ ಮೈಸೂರು ಬೆಂಗಳೂರು
ಲಕ್ಷಗಟ್ಟಲೆ ಶುಲ್ಕ ತೆತ್ತು ವೃತ್ತಿಪರ ಕೋರ್ಸ್​ಗಳಿಗೆ ಸೇರಿ ಇಂಜಿನಿಯರಿಂಗ್ ಮುಗಿಸಿದರೂ ಯಾವುದೇ ಸಂಸ್ಥೆಗಳು ಉದ್ಯೋಗದ ಖಾತರಿ ನೀಡುವುದಿಲ್ಲ. ಈ ಕಹಿ ಸತ್ಯದ ನಡುವೆಯೂ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ ಸಿಕ್ಕಿದೆ.
ಪದವಿ, ಡಿಪ್ಲೊಮಾ ಬಳಿಕ ಅಪ್ರೆಂಟಿಸ್​ಶಿಪ್ ಪೂರೈಸುವುದು ಈವರೆಗೆ ವಿದ್ಯಾರ್ಥಿಗಳ ಬಾಧ್ಯತೆ ಆಗಿತ್ತು. ಇದಕ್ಕಾಗಿ ಮತ್ತೊಂದು ವರ್ಷ ವ್ಯಯಿಸಬೇಕಿತ್ತು. ಆದರೆ, ಇನ್ನುಮುಂದೆ ಅಪ್ರೆಂಟಿಸ್​ಶಿಪ್ (ಶಿಶುಕ್ಷು ತರಬೇತಿ) ಕೋರ್ಸ್​ನ ಭಾಗವೇ ಆಗಿರಲಿದ್ದು, ವ್ಯಾಸಂಗದ ಅವಧಿಯಲ್ಲೇ ಹಣ ಸಂಪಾದನೆಗೂ ಅವಕಾಶ ದೊರೆಯಲಿದೆ. ಆ ಮೂಲಕ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ ಭಾರಿ ಪ್ರಯೋಜನವಾಗಬಲ್ಲ ಕೋರ್ಸ್ ಮಾದರಿಯನ್ನು ರೂಪಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾರ್ಗಸೂಚಿಗಳನ್ನು ಹೊರಡಿಸಿದೆ. ಪದವಿ ವಿದ್ಯಾರ್ಥಿಗಳಿಗೆ 3ನೇ ಸೆಮಿಸ್ಟರ್ ಬಳಿಕ ಹಾಗೂ ಡಿಪ್ಲೊಮಾದವರಿಗೆ 2ನೇ ಸೆಮಿಸ್ಟರ್ ನಂತರ ಅಪ್ರೆಂಟಿಸ್​ಶಿಪ್ ಕೈಗೊಳ್ಳಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ಕೂಡ ದೊರೆಯಲಿದೆ.
ಹೇಗೆ ವಿದ್ಯಾರ್ಥಿಗಳಿಗೆ ಲಾಭ?:ಸಾಂಪ್ರದಾಯಿಕ ಪದವಿಗಿಂತ ಶಿಶುಕ್ಷು ತರಬೇತಿಯೊಂದಿಗಿನ ಪದವಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂಬುದು ಶೇ.92 ವಿಶ್ವವಿದ್ಯಾಲಯಗಳ ಅಭಿಪ್ರಾಯವಾಗಿದೆ. ನೀತಿ ಆಯೋಗದ ಮಾಹಿತಿ ಪ್ರಕಾರ ಅಪ್ರೆಂಟಿಸ್​ಶಿಪ್ ಮುಗಿಸಿದ ಶೇ.79 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿದ್ದಾರೆ. ಈ ಕಾರಣಕ್ಕಾಗಿ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ಜತೆಗೆ ಅಪ್ರೆಂಟಿಸ್​ಶಿಪ್​ಅನ್ನು ಅವಿಭಾಜ್ಯ ಅಂಗವಾಗಿಸಲಾಗುತ್ತಿದೆ.
ಭರಿಸುವುದು ಯಾರು?:ಅಪ್ರೆಂಟಿಸ್​ಶಿಪ್ ಮೊತ್ತದ ಪೈಕಿ ಅರ್ಧವನ್ನು ಕೇಂದ್ರ ಸರ್ಕಾರ ಭರಿಸಿದರೆ, ಇನ್ನರ್ಧವನ್ನು ಆಯಾ ಸಂಸ್ಥೆ, ಕೈಗಾರಿಕೆಗಳು ಭರಿಸಲಿವೆ. ಸ್ಟೈಪೆಂಡ್ ಹೊರತಾಗಿಯೂ ಕಾಲೇಜುಗಳು ಉದ್ಯೋಗ ತರಬೇತಿಗೆ ವಿವಿಧ ಉದ್ಯಮಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.
ಉದ್ಯೋಗ ತರಬೇತಿ ಅವಧಿ?:ಕೋರ್ಸ್​ನಲ್ಲಿ ಕನಿಷ್ಠ 1 ಸೆಮಿಸ್ಟರ್ ಅವಧಿ ಯನ್ನಾದರೂ ಅಪ್ರೆಂಟಿಸ್​ಶಿಪ್​ಗೆ ಮೀಸಲಿಡಬೇಕು. ಇದು ಆಯಾ ಶಿಕ್ಷಣ ಸಂಸ್ಥೆ, ವಿವಿ ನಿಯಮಗಳನ್ನು ಆಧರಿಸಿ ಬದಲಾಗಬಹುದು. ಆದರೆ, ಡಿಪ್ಲೊಮಾಗೆ ಗರಿಷ್ಠ 2 ಸೆಮಿಸ್ಟರ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ
ಗರಿಷ್ಠ 3 ಸೆಮಿಸ್ಟರ್ ಅಪ್ರೆಂಟಿಸ್​ಶಿಪ್ ಒದಗಿಸಬಹುದು. ಆದರೆ, ಒಂದು ಬಾರಿ ಉದ್ಯೋಗ ತರಬೇತಿ ಆರಂಭವಾದಲ್ಲಿ ಕನಿಷ್ಠ ಆರು ತಿಂಗಳ ಅವಧಿಗೆ ಮುಂದುವರಿಯತಕ್ಕದ್ದು ಅಥವಾ ಒಂದು ವರ್ಷಕ್ಕಿಂತ ಹೆಚ್ಚಿರಬಾರದು. ಡಿಪ್ಲೊಮಾದಲ್ಲಿ 2ನೇ ಸೆಮಿಸ್ಟರ್ ಬಳಿಕ, ಪದವಿಯಲ್ಲಿ 3ನೇ ಸೆಮಿಸ್ಟರ್ ನಂತರ ಅಪ್ರೆಂಟಿಸ್​ಶಿಪ್​ಗೆ ಅವಕಾಶ ನೀಡುವುದು ಸೂಕ್ತ ಎಂಬ ಸಲಹೆ ಸಮಿತಿಯದ್ದಾಗಿದೆ.
ತ್ರೀಪಕ್ಷೀಯ ಒಪ್ಪಂದ:ಶಿಶುಕ್ಷು ತರಬೇತಿ ನೀಡಲು ಶಿಕ್ಷಣ ಸಂಸ್ಥೆ, ತರಬೇತಿ ಸಂಸ್ಥೆ ಹಾಗೂ ತರಬೇತಿಗೊಳಪಡುವ ವಿದ್ಯಾರ್ಥಿಯನ್ನು ಒಳಗೊಂಡಂತೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.
ಮೌಲ್ಯಮಾಪನವೂ ಇದೆ :ಒಟ್ಟಾರೆ ಮೂರು ಹಂತದ ಮೌಲ್ಯಮಾಪನಗಳನ್ನು ಸೂಚಿಸಲಾಗಿದೆ. ಕೈಗಾರಿಕೆಗಳಿಂದ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಪ್ರಾಧ್ಯಾಪಕರಿಂದ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದ್ದರೂ, ಇದು ಐಚ್ಛಿಕವಾಗಿದೆ. ಆದರೆ, ಮೂರನೆಯದಾಗಿ ಸೆಮಿನಾರ್ ಮೂಲಕ ಪ್ರಸ್ತುತಿ ಹಾಗೂ ಮೌಖಿಕ ಸಂದರ್ಶನದ ಮೂಲಕ ಮೌಲ್ಯಮಾಪನ ನಡೆಸುವುದು. ಈ ಮೂಲಕ ಕೈಗಾರಿಕೆ ಹಾಗೂ ಸಂಸ್ಥೆಗಳು ನೀಡುವ ಅಂಕವನ್ನು ಸರಾಸರಿ ರೂಪದಲ್ಲಿ ವಿದ್ಯಾರ್ಥಿಯ ಅಂತಿಮ ಗ್ರೇಡ್ ನಿರ್ಧರಿಸಲು ಬಳಸುವುದು.ತರಬೇತಿಗೆ ಕ್ರೆಡಿಟ್ ಅಂಕಗಳನ್ನು ನಿಗದಿ ಮಾಡಲಾಗಿದೆ.
. ಕೈಗಾರಿಕೆಗೆ:ಉದ್ಯೋಗಕ್ಕೆ ಸಜ್ಜಾದ ಅಭ್ಯರ್ಥಿಗಳು ಲಭ್ಯವಾಗುತ್ತಾರೆ. ವರ್ಷಗಳ ಅವಧಿಗೆ ಮಾನವ ಸಂಪನ್ಮೂಲ, ವಿದ್ಯಾರ್ಥಿಗಳು ಸಮಸ್ಯೆಗೆ ಪರಿಹಾರಕ್ಕೆ ವಿಶೇಷ ಆಯಾಮ ನೀಡುತ್ತಾರೆ. ತಾತ್ಕಾಲಿಕ ಪ್ರಾಜೆಕ್ಟ್​ಗಳಿಗೆ ಗುಣಮಟ್ಟದ ವಿದ್ಯಾರ್ಥಿಗಳು ದೊರೆಯುತ್ತಾರೆ. ಸಂಭಾವ್ಯ ಉದ್ಯೋಗಿಗಳನ್ನು ಗುರುತಿಸಿ ನೇಮಕಾತಿ ಮಾಡಿಕೊಳ್ಳಲು ಅನುಕೂಲ
. ವಿದ್ಯಾರ್ಥಿಗಳಿಗೆ:ಉದ್ಯಮ ಅಥವಾ ಕೈಗಾರಿಕೆಗಳಿಂದ ನೇಮಕಾತಿ ಅವಕಾಶ. ಪ್ರಾಯೋಗಿಕ ತರಬೇತಿ ದೊರೆಯುತ್ತದೆ. ತಾತ್ವಿಕವಾಗಿ ಕಲಿತದ್ದು ಪ್ರಾಯೋಗಿಕವಾಗಿ ಹೇಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ತಿಳಿಯುವ ಅವಕಾಶ. ವೃತ್ತಿ ನಿರ್ಧಾರ ಕೈಗೊಳ್ಳಲು ಸಹಾಯಕ.
. ಶಿಕ್ಷಣ ಸಂಸ್ಥೆಗಳಿಗೆ:ಕೈಗಾರಿಕೆಗಳೊಂದಿಗೆ ಬಾಂಧವ್ಯ ಬೆಳೆಯುತ್ತದೆ. ಪ್ಲೇಸ್​ವೆುಂಟ್ ಪ್ರಕ್ರಿಯೆಗಳನ್ನು ಸರಾಗಗೊಳಿಸುತ್ತದೆ. ಸಂಸ್ಥೆಯ ವಿಶ್ವಾಸಾರ್ಹತೆ ಹಾಗೂ ಇಮೇಜ್ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ.
ತರಬೇತಿ ನಂತರ?:ವಿದ್ಯಾರ್ಥಿಗಳ ತರಬೇತಿ ನಂತರ ಕನಿಷ್ಠ ಒಂದು ವರ್ಷದ ಅವಧಿಗೆ ಕಾರ್ಯಕ್ರಮದ ಫಲಿತಾಂಶ ಅವಲೋಕನ ಮಾಡಬೇಕು. ಶಿಕ್ಷಣದ ನಂತರವೂ ಪ್ರಾಯೋಗಿಕ ತರಬೇತಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಸಮಿತಿಯಲ್ಲಿ ಯಾರಿದ್ದರು?: ಶಿಶುಕ್ಷು ತರಬೇತಿ ಒಳಗೊಂಡಂತೆ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ರೂಪಿಸಲು ಕೇಂದ್ರ ಸರ್ಕಾರವು 2023ರ ಜೂ.6ರಂದು ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಂ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಇದರಲ್ಲಿ ಆರು ಸದಸ್ಯರಿದ್ದು, ಎಐಸಿಟಿಇ ಉಪ ನಿರ್ದೇಶಕರಾದ ಡಾ. ನೀತು ಭಗತ್ ಸಂಚಾಲಕರಾಗಿದ್ದರು.
. 2019ರಲ್ಲಿ ಮಹತ್ವದ ಸಮೀಕ್ಷೆ ನಡೆಸಿದ್ದ ನಾಸ್ಕಾಂ
. 15 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮೀಕ್ಷೆ
. ಈ ಪೈಕಿ 2.5 ಲಕ್ಷ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿತ್ತು
. ಆಸ್ಪೈರಿಂಗ್ ಕೂಡ ಮತ್ತೊಂದು ಸಮೀಕ್ಷೆ ನಡೆಸಿತ್ತು
. ಶೇ.80 ಇಂಜಿನಿಯರ್​ಗಳು ನಿರುದ್ಯೋಗಿಗಳಾಗಿದ್ದರು
. ಡಿಪ್ಲೊಮಾಗೆ 2ನೇ, ಪದವಿಗೆ 3ನೇ ಸೆಮಿಸ್ಟರ್ ಬಳಿಕ ಉದ್ಯೋಗ ತರಬೇತಿ
ಎಷ್ಟು ವೇತನ?
. ಡಿಪ್ಲೊಮಾಗೆ ಮಾಸಿಕ 7 ಸಾವಿರ, ಪದವೀಧರರಿಗೆ 8 ಸಾವಿರ ರೂ. ಸ್ಟೈಫಂಡ್
ಯಾರಿಗೆ ಅನ್ವಯ?
. ಪದವಿ, ಡಿಪ್ಲೊಮಾ ಸೇರಿ ಎಲ್ಲ ತಾಂತ್ರಿಕ ಶಿಕ್ಷಣ
ಕೋರ್ಸ್​ಗಳಿಗೂ ಅನ್ವಯ
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಸ್​​ಐಟಿ ತನಿಖೆಗೆ ಸಿಎಂ ಆದೇಶ, ವಿದೇಶಕ್ಕೆ ಹಾರಿದ್ರಾ ಹಾಸನ ಸಂಸದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
