ಬೆಂಗಳೂರು:ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪಕ್ಷದ ವಿರುದ್ಧ ಮಾಡಿರುವ ಗಂಭೀರ ಆರೋಪ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕತ್ವಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಬೆಳವಣಿಗೆ ಪದ ರಾಜ್ಯ ಟಕದಲ್ಲಿ ಹಿಡಿತವಿಲ್ಲದ ನಾಯಕತ್ವವನ್ನು ಸಾಬೀತುಪಡಿಸುವ ಜತೆಯಲ್ಲೇ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಉಸ್ತುವಾರಿಯಿಂದ ಸಂಟನೆಯಲ್ಲಿ ಶಿಸ್ತು ದೂರಾಗಿ ಪದ ಕಾರ್ಯಕರ್ತರಿಗೂ ಇರುಸುಮುರಿಸು ಉಂಟು ಮಾಡಿದೆ.
ಪ್ರತಿ ನಿತ್ಯ ಒಂದಿಲ್ಲೊಂದು ಹೇಳಿಕೆಗಳಿಂದಲೇ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತ ಬಂದಿರುವ ಯತ್ನಾಳ್​, ರಾಮದುರ್ಗ ತಾಲೂಕಿನಲ್ಲಿ ಜರುಗಿದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಮಾತನಾಡುತ್ತ, “ದೆಹಲಿಯಿಂದ ಬಂದ ಕೆಲವು ಲೀಡರ್​ಗಳು 2500 ಕೋಟಿ ರೂ. ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು’ ಎನ್ನುವ ಮೂಲಕ ಪ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಯತ್ನಾಳ್​ ಅವರ ಈ ಹೇಳಿಕೆಗೆ ಪಕ್ಷದ ನಾಯಕರು ನಿರುತ್ತರರಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮೆತ್ತಿಕೊಂಡಿರುವ ಪರ್ಸೆಂಟೇಜ್​, ನೇಮಕಾತಿ ಹಗರಣಗಳ ಕಳಂಕದಿಂದ ಹೊರಬರಲು ಪರದಾಡುತ್ತಿರುವ ಸಂದರ್ಭದಲ್ಲಿಯೇ ಯತ್ನಾಳ್​ಅವರ ಈ ಆರೋಪ ನಾಯಕತ್ವಕ್ಕೆ ಕಪುಚುಕ್ಕೆಯನ್ನಿಟ್ಟಿದೆ. ಪ್ರತಿಪಕ್ಷಗಳ ಕೈಗೂ ಅಸ್ತ್ರ ದೊರಕಿಸಿಕೊಟ್ಟಿದೆ.
ಯತ್ನಾಳ್​ ಹೇಳಿದ್ದೇನು?:“ದೆಹಲಿಯಿಂದ ಬಂದ ಕೆಲವು ಲೀಡರ್​ಗಳು 2500 ಕೋಟಿ ರೂ. ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು. ಮಕ್ಕಳಾ 2,500 ಕೋಟಿ ರೂ. ಅಂದ್ರೆ ಏನ್​ ಅಂತ ತಿಳಿದೀರಿ ಅಂತ ನಾನು ಅವರನ್ನು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೆಂಗ್​ ಇಡೋದು. ಕೋಣೆಯಲ್ಲಿ ಇಡೋದಾ, ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದೆ. ರಾಜಕಾರಣದಲ್ಲಿ ಮೋಸ ಮಾಡ್ತಾರೆ. ವಾಜಪೇಯಿ ನೆರಳಲ್ಲಿ ಕೆಲಸ ಮಾಡಿದವನು ನಾನು. ಅಡ್ವಾಣಿ, ರಾಜನಾಥ್​ ಸಿಂಗ್​ ನನ್ನನ್ನು ಬಸವನಗೌಡ ಅಂತಾ ಹೆಸರು ಹೇಳಿ ಕರೀತಿದ್ರು.’ನಾಯಕರೇ ಗುರಿ: ವಾರದ ಹಿಂದಷ್ಟೇ ಗೃಹ ಸಚಿವರ ವಿರುದ್ಧ ಹೇಳಿಕೆ ನೀಡಿದ್ದ ಯತ್ನಾಳ್​ ಸರ್ಕಾರಕ್ಕೆ ಮುಜುಗರ ತಂದಿದ್ದರು. ಗೃಹ ಸಚಿವರ ಹುದ್ದೆ ಖಾಲಿ ಇದೆ ಎಂದು ಜಾಹೀರಾತು ನೀಡಬೇಕು ಎಂದು ತಮ್ಮದೇ ಸರ್ಕಾರದ ವಿರುದ್ಧ ನಡೆಸಿದ ದಾಳಿ ಪ್ರತಿಪದ ಗೇಲಿಗೆ ಸರಕಾಯಿತು. ರಾಜಕೀಯ ವಲಯದಲ್ಲಿ ಯತ್ನಾಳ್​ ಹೇಳಿಕೆ ಗಂಭೀರವಾಗಿ ಪರಿಗಣನೆ ಆಗದಿದ್ದರೂ, ಪ್ರತಿಪಕ್ಷ ಕಾಂಗ್ರೆಸ್​ 2500 ಕೋಟಿ ರೂ. ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿ ತನಿಖೆಗೂ ಆಗ್ರಹಿಸಿದೆ. ಯತ್ನಾಳ್​ ಹೇಳಿಕೆ ಮುಂದಿಟ್ಟುಕೊಂಡು ಜಾಲತಾಣದಲ್ಲಿ ಬಿಜೆಪಿಯನ್ನು ಮುಜುಗರಕ್ಕೆ ತಳ್ಳಿದೆ.
ನಿರಂತರ ಮುಕ್ಕು40 ಪರ್ಸೆಂಟ್​ ಕಮಿಷನ್​ ಆರೋಪದಿಂದ ಹೊರಬರಲು ಸರ್ಕಾರ ಯತ್ನಿಸುತ್ತಿದ್ದಾಗಲೇ, ಈಶ್ವರಪ್ಪ ತಲೆದಂಡ ಕೊಡಲೇಬೇಕಾದ ಸನ್ನಿವೇಶ ಎದುರಾಯಿತು. ಪಿಎಸ್​ಐ ನೇಮಕ ಅಕ್ರಮದಲ್ಲಿ ಬಿಜೆಪಿ ನಾಯಕಿ ಸಿಕ್ಕಿಬಿದ್ದಿದ್ದು, ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಹೀಗೆ ಸರಣಿ ಪ್ರಕರಣಗಳು ಸರ್ಕಾರದ ಇಮೇಜ್​ಗೆ ನಿರಂತರವಾಗಿ ಪೆಟ್ಟುನಿಡಿದೆ.
| ಬಿ.ಕೆ. ಹರಿಪ್ರಸಾದ್​ ವಿಧಾನ ಪರಿಷತ್​ ಪ್ರತಿಪಕ್ಷದ ನಾಯಕ
| ಡಿ.ಕೆ.ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ
| ಬಿ.ವಿ. ಶ್ರೀನಿವಾಸ್​ ಅಧ್ಯಕ್ಷ ಅಖಿಲ ಭಾರತ ಯುವ ಕಾಂಗ್ರೆಸ್​ ಸಮಿತಿ
ತನಿಖೆಗೆ ಕಾಂಗ್ರೆಸ್​ ಆಗ್ರಹಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ರೂ. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರೂ. ನೀಡಬೇಕು ಎಂಬ ಯತ್ನಾಳ್​ ಹೇಳಿಕೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಕಾಂಗ್ರೆಸ್​ ನಾಯಕರು ಆಗ್ರಹಿಸಿದ್ದಾರೆ.
ಯತ್ನಾಳ್​ ಹೇಳಿದ್ದೇನು?* ನಮ್ಮಲ್ಲಿ 100 ಕೋಟಿ ರೂ., 50 ಕೋಟಿ ರೂ. ಹಣ ಕೊಟ್ಟು ಮಂತ್ರಿ ಆಗುತ್ತಾರೆ. ಆ ಮೇಲೆ ಕರ್ನಾಟಕ ಲೂಟಿ ಮಾಡುತ್ತಾರೆ. ನಾನು ಅಷ್ಟೊಂದು ಹಣ ಎಲ್ಲಿಂದ ಕೊಡಲಿ? ನನ್ನನ್ನು ಯಾವುದಾದರೂ ಕೇಸ್​ನಲ್ಲಿ ಸಿಲುಕಿಸಲು ನಮ್ಮವರು ಪ್ರಯತ್ನಿಸುತ್ತಿದ್ದಾರೆ.* ರಾಜಕಾರಣ ಬಹಳ ಕೆಟ್ಟು ಹೋಗಿದ್ದು, ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ಸಮೀಪ ಬಂತೆಂದರೆ ನಿಮ್ಮನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್​ ಷಾ, ಕೈ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸ್ತಿವಿ. ಟಿಕೇಟ್​ ಕೊಡಿಸ್ತೀವಿ ಎಂದು ಕೆಲವರು ಬರುತ್ತಾರೆ.* ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿ ಗಿರಾಕಿಗಳು ನಿಮಗೆ ಟಿಕೆಟ್​ ಕೊಡಿಸ್ತಿವಿ ಅಂಥ ಬರುತ್ತಾರೆ. ಅವರಿಂದ ಹುಷಾರಾಗಿ ಇರಬೇಕು.* ನೇರವಾಗಿ ಮಾತನಾಡಿದರೆ, ಸತ್ಯ ಹೇಳಿದರೆ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ಸುಳ್ಳು ಹೇಳುವವರು, ಮೋಸ ಮಾಡುವವರು ರಾಜಕಾರಣದಲ್ಲಿ ಉಳಿಯಲು ಸಾಧ್ಯ.* ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ಎಂದು ಹೋರಾಟ ಮಾಡುತ್ತಿದ್ದೇನೆ. ವಿನಾ ಮಂತ್ರಿಗಿರಿಗಾಗಿ ಅಲ್ಲ.* ಪಕ್ಷದಲ್ಲಿ ಒಂದು ಕಾಲಕ್ಕೆ ಎಲ್ಲವೂ ನನ್ನ ಕೈಯಲ್ಲಿತ್ತು. ಆದರೆ, ಇದೀಗ ಎಲ್ಲವು ದೊಡ್ಡ ದೊಡ್ಡವರ ಕೈಯಲ್ಲಿದೆ. ನಮ್ಮ ಸಮಾಜದ ಹೋರಾಟ ಹತ್ತಿಕ್ಕಲು ನನಗೆ ಮಂತ್ರಿ ಸ್ಥಾನದ ಲಾಲಿಪಪ್​ ಕೊಡಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಹೇಳಿದ್ದೇನೆ.
ಸಿಎಂ ಗರಂಯತ್ನಾಳ್​ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಮನೆಗೆ ಹೋಗಿದ್ದಾಗ ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸದೆಯೇ ಅವರು ಸಿಟ್ಟಾಗಿ ತೆರಳಿದರು.
ದುರ್ಬಲ ನಾಯಕತ್ವರಾಜ್ಯ ಬಿಜೆಪಿ ನಾಯಕತ್ವ ದಿನದಿನಕ್ಕೂ ದುರ್ಬಲವಾಗಿ ಕಾಣಿಸಲಾರಂಭಿಸಿದೆ. ಯತ್ನಾಳ್​ ಅವರ ಈ ಹಿಂದಿನ ವಿಮರ್ಶೆಗಳಿಗೂ ಪದ ರಾಜ್ಯಾಧ್ಯರೇ ಚಕಾರ ಎತ್ತದ ಕಾರಣ, ಆ ಹೇಳಿಕೆ ಹಿಂದೆಯೂ ಪದ ಅಧ್ಯರೇ ಇರಬಹುದೆಂದು ಚರ್ಚೆಯಾಗುತ್ತಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಸಂಟನೆ ಮೇಲೆ ಪ್ರಭಾವ ಬೀರುವಂತೆ ಕಾಣಿಸಿಲ್ಲ. ಇಲ್ಲಿನ ಆಗುಹೋಗುಗಳ ಬಗ್ಗೆ ಅವರು ತಲೆಕೆಡಿಸಿಕೊಂಡಂತೆಯೂ ಇಲ್ಲ.
| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
