ದಾವಣಗೆರೆ:ಎಸ್​ಡಿಪಿಐ ಅಂದ್ರೆ, ಬಹುದೊಡ್ಡ ಚಳುವಳಿ. ಬಿಜೆಪಿಯವರು ಹದಿಮೂರು ವರ್ಷಗಳಿಂದ ಎಸ್​ಡಿಪಿಐ ಬ್ಯಾನ್ ಮಾಡುತ್ತೇವೆ ಎಂಬ ಕನಸು ಕಾಣುತ್ತಿದ್ದಾರೆ. ವಾಸ್ತವವಾಗಿ ಇದೊಂದು ಬಿಜೆಪಿ ನಾಯಕರ ಹಗಲು ಕನಸು ಎಂದು ಎಸ್​​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
ಬಿಜೆಪಿಯವರು ಜನರನ್ನು ಮಂಗಗಳೆಂದು ತಿಳಿದಿದ್ದೀರಾ? ಎಂದು ಪ್ರಶ್ನಿಸಿದ ಅಪ್ಸರ್ ಕೊಡ್ಲಿಪೇಟೆ, ಸುಳ್ಳನ್ನು ಹೇಳಿ ಜನರನ್ನು ಎಸ್​​ಡಿಪಿಐನಿಂದ ದೂರ ಮಾಡಲು ಸಾಧ್ಯವಿಲ್ಲ ಎಂದರು.
ಸಾವರ್ಕರ್ v/s ಟಿಪ್ಪು ನಡುವಿನ ಚುನಾವಣೆ ಎಂಬ ಕಟೀಲ್‌ ಹೇಳಿಕೆಗೆ ವಿಚಾರ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ನಾಚಿಯಾಗಬೇಕು. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಗೆ ಹೋಗುತ್ತೇವೆ ಎಂದು ಹೇಳುವ ಧೈರ್ಯ ಇಲ್ಲ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗಿಲ್ಲ. ಭ್ರಷ್ಟಾಚಾರದಲ್ಲಿ ಬಿಜೆಪಿಯವರು ಉತ್ತುಂಗಕ್ಕೇರಿದ್ದಾರೆ ಎಂದು ಟೀಕಿಸಿದರು.
ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ಲವ್ ಜಿಹಾದ್ ಎಂಬುದು ಒಂದು ಪ್ರಪೋಗಾಂಡ. 40% ಕಮಿಷನ್ ವಿಚಾರದಲ್ಲಿ ಇಡೀ ದೇಶದ ಮುಂದೆ ರಾಜ್ಯದ ಮಾನ ಹರಾಜಾಗಿದೆ. ಸಾವರ್ಕರ್, ಟಿಪ್ಪು ಸುಲ್ತಾನ್ ಬಗ್ಗೆ ಮಾನಾಡುವ ಇವರು ತಾಖತ್ ಇದ್ರೇ ಟಿಪ್ಪು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಜನರ ಮುಂದಿಡಲಿ ಎಂದು ಸವಾಲೆಸೆದರು.
ಟಿಪ್ಪು ಸುಲ್ತಾನ್ ಎರಡು ಸಾವಿರ ಕೆರೆಗಳನ್ನು ಪುನರುಜ್ಜೀವನಗೋಳಿಸಿದ್ದಾರೆ. ಬಿಜೆಪಿಯವರು ಒಂದು ಕೆರೆಯ ಹೂಳು ಎತ್ತಿದ್ದೀರಾ ಎಂದು ಅಪ್ಸರ್ ಕೊಡ್ಲಿಪೇಟೆ ಪ್ರಶ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 3 =
Remember me
