ಶಿವಮೊಗ್ಗ:ಕುಕ್ಕರ್ ಬ್ಲಾಸ್ಟ್ ನಡೆಸಿದ ಶಾರೀಕ್ ಆರೋಗ್ಯ ಸುಧಾರಣೆಯಾಗಬೇಕು. ಇನ್ನೂ 15 ದಿನ ಆತನಿಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರು ಹೇಳಿದ್ದಾರೆ. ಆತ ಚೇತರಿಸಿಕೊಂಡ ಬಳಿಕ ಮತ್ತಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ ಬರಲಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟದ ಸಮಗ್ರ ತನಿಖೆ ನಡೆಯುತ್ತಿದೆ. ಈಗಾಗಲೇ ಹಲವು ಮಾಹಿತಿಗಳು ಸಿಕ್ಕಿವೆ. ಆದರೆ ಈ ಹಂತದಲ್ಲಿ ನಾನು ಅದನ್ನು ಬಹಿರಂಗಪಡಿಸುವುದಿಲ್ಲ. ಪೊಲೀಸರು ಯಾರನ್ನೂ ವಶಕ್ಕೆ ಪಡೆದಿಲ್ಲ. ಕೆಲವರನ್ನು ಕರೆಯಿಸಿ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.
VIDEO: ಶಿಕ್ಷಕಿಗೆ ‘ಐ ಲವ್​ ಯೂ’ ಎಂದು ಪೀಡಿಸಿದ ವಿದ್ಯಾರ್ಥಿಗಳು; ವಿಡಿಯೋ ವೈರಲ್!
ಶಂಕಿತ ಉಗ್ರರು ಸ್ಯಾಟಲೈಟ್ ಫೋನ್ ಬಳಸಿದ್ದಾರೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಕರಾವಳಿ ಭಾಗದಲ್ಲಿ ಹಡಗುಗಳು ಸಂಚರಿಸುವುದರಿಂದ ಅಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಶಾರೀಖ್ ಎಲ್ಲೆಲ್ಲಿ ಓಡಾಟ ನಡೆಸಿದ್ದಾನೆ ಎಂಬುದರ ಮಾಹಿತಿ ಆಧಾರದಲ್ಲಿ ಅನೇಕ ತಂಡಗಳನ್ನು ರಚಿಸಿ ಎನ್‌ಐಎ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಮತೀನ್‌ಗಾಗಿ ಹುಡುಕಾಟ ನಡೆದಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
