ಬೆಂಗಳೂರು:ರಾಜ್ಯದ ಗೃಹ ಮಂತ್ರಿ ಅರಗ ಆರಗ ಜ್ಞಾನೇಂದ್ರ ಮಾಲಾಧಾರಿಯಾಗಿ ಇರುಮುಡಿ ಹೊತ್ತ ಶಬರಿಮಲೆ ಸ್ವಾಮಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. 6 ವರ್ಷಗಳ ಹಿಂದೆ ಶಬರಿಮಲೆ ಯಾತ್ರೆ ಮಾಡುವ ಸಂಕಲ್ಪ ತೊಟ್ಟಿದ್ದರು. ಸಂಕಲ್ಪದಂತೆ ಇದೀಗ ಆರಗ ಜ್ಞಾನೇಂದ್ರ, ಈ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಇರುಮುಡಿ ಹೊತ್ತು ತೆರಳಿದ್ದಾರೆ.
ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗಿದೆ. ನನ್ನ ಕೆಲವು ಮಿತ್ರರೊಂದಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಿದೆ ಎಂದು ಅರಗ ಜ್ಞಾನೇಂದ್ರ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗುತ್ತಿದೆ. ನಿನ್ನೆ ನನ್ನ ಕೆಲವು ಮಿತ್ರರೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಲಾಯಿತು.ಸ್ವಾಮಿಯೇ ಶರಣಂ ಅಯ್ಯಪ್ಪ! 🙏@BJP4Karnatakapic.twitter.com/0HJsbQX8KM— Araga Jnanendra (@JnanendraAraga)January 17, 2023
ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗುತ್ತಿದೆ. ನಿನ್ನೆ ನನ್ನ ಕೆಲವು ಮಿತ್ರರೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಲಾಯಿತು.ಸ್ವಾಮಿಯೇ ಶರಣಂ ಅಯ್ಯಪ್ಪ! 🙏@BJP4Karnatakapic.twitter.com/0HJsbQX8KM
ಕೇರಳದಲ್ಲಿರುವ ಶಬರಿಮಲೆ ದೇವಸ್ಥಾನಕ್ಕೆ ದೇಶದ ಮೂಲೆಮೂಲೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವಿವಿಧ ಕ್ಷೇತ್ರಗಳ ಗಣ್ಯರು ಸಹಿತ ಅಯ್ಯಪ್ಪನ ದರ್ಶನಕ್ಕೆ ಇರುಮುಡಿ ಹೊತ್ತು ಬರುತ್ತಾರೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಜ್ಯೋತಿ ದರ್ಶನ ಪಡೆಯಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಶಬರಿಮಲೆಗೆ ಬರುತ್ತಾರೆ. ಕಳೆದ ಭಾನುವಾರ(ಜ.15) ಈ ಬಾರಿ ಜ್ಯೋತಿ ದರ್ಶನವಾಗಿತ್ತು. ಇದೀಗ ಸಂಕ್ರಾಂತಿ ಕಳೆಯುತ್ತಿದ್ದಂತೆ ಆಪ್ತರ ಜತೆಗೆ ಅರಗ ಜ್ಞಾನೇಂದ್ರ ಶಬರಿಮಲೆಗೆ ತೆರಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
