ಬೆಂಗಳೂರು: ಸರ್ಕಾರದಲ್ಲಿ‌ ನಡವಳಿಕೆ ಬಗೆಗಿನ ಶಾಸಕರ ಸಹಿ ಸಂಗ್ರಹದ ಪತ್ರವು ಸಂಚಲನ‌ ಮೂಡುತ್ತಿದ್ದಂತೆ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಉಲ್ಟಾ ಹೊಡೆದಿದ್ದಾರೆ.
ನಾನು ಆ ಪತ್ರ ಓದದೇ ಸಹಿ ಹಾಕಿದ್ದಾಗಿ ಗುರುವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಟ್ಟಿಯಾಗಿ ಹೇಳಿದ್ದಾರೆ. ಆದರೆ, ಸಹಿ ಹಾಕುವಾಗ ಎದುರಿಗಿದ್ದ ಶಾಸಕರು ನೀವು ಓದಿಯೇ ಸಹಿ ಹಾಕಿದ್ದಾಗಿ ಸಾಕ್ಷಿ ನುಡಿದರು. ಈ ಸಂಗತಿಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿದ್ದ ಶಾಸಕರೊಬ್ಬರು ವಿಜಯವಾಣಿಗೆ ಖಚಿತಪಡಿಸಿದರು.
ಶಾಸಕರ ಸಹಿ ಸಂಗ್ರಹದಿಂದ ಸರ್ಕಾರಕ್ಕೆ ಭಾರೀ ಮುಜುಗರ ಉಂಟುಮಾಡಿದ್ದು, ಇದರಿಂದ ಹೈಕಮಾಂಡ್ ತಮ್ಮ ಮೇಲೆ ಅಸಮಾಧಾನಗೊಳ್ಳಬಹುದೇನೋ ಎಂಬ ಅಳುಕು ಸಹಿಹಾಕಿದ ಕೆಲವು ಶಾಸಕರಲ್ಲಿ ಮೂಡಿದೆ.
ಹೈಕಮಾಂಡ್ ಕೂಡ ಇಡೀ ಸಹಿ ಸಂಗ್ರಹ ಬೆಳವಣಿಗೆ ಬಗ್ಗೆ ವರದಿಪಡೆದುಕೊಂಡಿದೆ.
ಇನ್ನು ವರ್ಗಾವಣೆ, ಅನುದಾನದ ವಿಷಯದಲ್ಲಿ ಶಾಸಕರ ಸಹಿ ಸಂಗ್ರಹ ಮಾಡಿದ ವಿಚಾರ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಯಿತು.
ನಮ್ಮಿಂದ ಪತ್ರ ಬಂದಿದೆ ಅಂತ ಗೊಂದಲ ಶುರುವಾಗಿದೆ, ನಾವು ಪತ್ರಕ್ಕೆ ಸಹಿ ಹಾಕಿರುವುದು ನಿಜ. ನಿಮ್ಮ ಗಮನಸೆಳೆಯಲು ನಾವು ಪತ್ರ ಬರೆದಿದ್ದು. ಆದರೆ ಅದು ಇಷ್ಟು ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹಿರಿಯ ಶಾಸಕ ರಾಯರಡ್ಡಿ ಸಿಎಂ ಉದ್ದೇಶಿಸಿ ಹೇಳಿದರು.
ಅಲ್ಲದೇ, ನಮಗೆ ಎಲ್ಲೂ ಅಸಮಾಧಾನವಿಲ್ಲ.ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಇವೆ. ನಾವು ಎಲ್ಲವೂ ಇಲ್ಲವೆಂದು ಹೇಳುತ್ತಿಲ್ಲ. ಸಚಿವರುಗಳು ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಇದನ್ನಷ್ಟೇ ನಾವು ಕೇಳಿರುವುದು. ನಾವು ಬೇರೆ ಉದ್ದೇಶ ಇಟ್ಟುಕೊಂಡು ಪತ್ರ ಬರೆದಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮದು ಪಕ್ಷ ವಿರೋಧಿ, ಸರ್ಕಾರದ ವಿರೋಧಿ ನಡೆಯೂ ಅಲ್ಲ. ಇದನ್ನ ದಯವಿಟ್ಟು ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಹಿರಿಯ ಶಾಸಕರು ಸಹಿ ಸಂಗ್ರಹವನ್ನು ಸಮರ್ಥನೆ ಮಾಡಿಕೊಂಡರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × five =
Remember me
