ಬೆಂಗಳೂರು:ತಲಘಟ್ಟಪುರದಲ್ಲಿ ನಕಲಿ 10 ಕೋಟಿ ರೂ. ಮೊತ್ತದ ಜೆರಾಕ್ಸ್ ನೋಟ್ ಪತ್ತೆಯಾಗಿದ್ದು ಅನೇಕರಲ್ಲಿ ಪಕ್ಕದಲ್ಲಿದ್ದ ಚೊಂಬಿನಿಂದಾಗಿ ಗೊಂದಲ ಮೂಡಿದೆ.
ನಕಲಿ ನೋಟು ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಹಲವು ಅನುಮಾನಗಳು ಉಂಟಾಗಿದ್ದು ಆರೋಪಿಗಳು ವೆಬ್​ಸಿರೀಸ್ ನೋಡಿ ಹಣ ಜೆರಾಕ್ಸ್ ಮಾಡಿದ್ದಾರಾ ಎನ್ನುವ ಶಂಕೆಯೂ ಅದರಲ್ಲಿ ಒಂದು. ಇತ್ತೀಚೆಗೆ ಬಿಡುಗಡೆಯಾಗಿದ್ದ “ಫರ್ಜಿ” ಎನ್ನುವ ವೆಬ್ ಸಿರೀಸ್​, ಸಾಕಷ್ಟು ಸದ್ದು ಮಾಡಿದ್ದು ಯಾವ ರೀತಿ ಓರ್ವ ಚಿತ್ರಕಲಾವಿದ ಆರ್ಥಿಕ ತೊಂದರೆ ನೀಗಿಸಲು ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಎನ್ನುವ ಕಥೆಯನ್ನು ಹೊಂದಿದೆ. ಈ ಕಥೆಯಿಂದ ಸ್ಫೂರ್ತಿ ಪಡೆದು ದಂಧೆ ಮಾಡಿದ್ದಾರಾ ಎನ್ನುವ ಶಂಕೆ ಪೊಲೀಸರ ಮನಸ್ಸಿನಲ್ಲಿ ಮೂಡಿದೆ.
ಇದನ್ನೂ ಓದಿ:ಇನ್‌ಸ್ಟಾಗ್ರಾಮ್‌ನಲ್ಲಿ ಖೋಟಾ ನೋಟು ದಂಧೆ; ಕಾಟನ್‌ಪೇಟೆ ಪೊಲೀಸರಿಂದ 1307 ನಕಲಿ ನೋಟು ಜಪ್ತಿ
ಈ ದಂಧೆಕೋರರು, ನಕಲಿ ನೋಟುಗಳನ್ನು ಮುದ್ರಿಸಿ, 500 ಮುಖಬೆಲೆಯ ಅಸಲಿ ನೋಟನ್ನು ಪಡೆದು 2000 ಮುಖಬೆಲೆ ನಕಲಿ ನೋಟು ಮಾರುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ ಕೆಲ ದಿನಗಳ ಹಿಂದೆಯೇ 2000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಂಡಿದ್ದು, ಇದರಿಂದಾಗಿ ನಕಲಿ ನೋಟುಗಳು ನಿಷ್ಪ್ರಯೋಜಕವಾಗಿದೆ. ಈ ಹಿನ್ನೆಲೆಯಲ್ಲಿ ಖದೀಮರು ಅವುಗಳನ್ನು ಎಸೆದು ಹೋಗಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ:500 ರೂ. ನಕಲಿ ನೋಟು ನೀಡಿ ವೈದ್ಯರಿಗೆ ಮೋಸ ಮಾಡಿದ ರೋಗಿ ; ಡಾಕ್ಟರ್​​ ಮಾಡಿದ್ದೇನು?
ಸದ್ಯ ತಲಘಟ್ಟಪುರ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ಸೂಟ್​ಕೇಸ್​ ಪಕ್ಕದಲ್ಲಿ ಚೊಂಬೊಂದು ಲಭಿಸಿದ್ದು, ಇದು ಪೊಲೀಸರ ತಲೆ ಕೆಡಿಸಿದೆ ಎನ್ನಲಾಗಿದೆ. ಇವರು ರೈಸ್ ಪುಲ್ಲಿಂಗ್ ದಂಧೆ ಕೂಡ ನಡೆಸಿರುವ ಬಗ್ಗೆ ಅನುಮಾನ ಉಂಟಾಗಿದ್ದು ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಚೊಂಬು ಇಟ್ಟಿರಬಹದಾ ಎಂಬ ಆ್ಯಂಗಲ್​ನಲ್ಲೂ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
