-ಐಶ್ವರ್ಯಾ ಅರ್ಜುನ್ ಶೀಘ್ರದಲ್ಲೇ ಉಮಾಪತಿಯನ್ನು ಮದುವೆಯಾಗಲಿದ್ದಾರೆ-2024ರಲ್ಲಿ ನಡೆಯಲಿದೆ ಮದುವೆ
ಹೈದರಾಬಾದ್​​:ಬಹುಭಾಷಾ ನಟ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸರ್ಜಾ ಕುಟುಂಬದಲ್ಲಿ ಮಂಗಳ ವಾದ್ಯ ಸದ್ದು ಮೊಳಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ತಮಿಳು ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜತೆ 2024ರಲ್ಲಿ ಮದುವೆಯಾಗಲಿದ್ದಾರೆ. ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಮತ್ತು ಐಶ್ವರ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಪೋಷಕರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ.

ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಸಿದ್ಧತೆ ನಡೆಯುತ್ತಿದೆ. ಎಷ್ಟು ಬೇಗ ಸಿಹಿ ಸುದ್ದಿಯನ್ನು ಸರ್ಜಾ ಕುಟುಂಬಸ್ಥರು ಹಂಚಿಕೊಳ್ಳುತ್ತಾರೆಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದುವರೆಗೂ ಕುಟುಂಬಸ್ಥರಿಂದ ಯಾವುದೇ ಅಧಿಕೃತವಾದ ಮಾಹಿತಿ ಬಂದಿಲ್ಲ.
ಐಶ್ವರ್ಯಾ ಅರ್ಜುನ್ 2013 ರಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಐಶ್ವರ್ಯ ಮೊದಲು ಬಣ್ಣ ಹಚ್ಚಿದ್ದು, 2013ರಲ್ಲಿ ಬಿಡುಗಡೆ ಕಂಡ ತಮಿಳು ‘ಪಟ್ಟತ್ತು ಯಾಣೈ’ ಚಿತ್ರಕ್ಕೆ. ಅನಂತರ ದೊಡ್ಡ ಬ್ರೇಕ್ ತೆಗೆದುಕೊಂಡು 2018ರಲ್ಲಿ ಪ್ರೇಮಾ ಬರಹ ಸಿನಿಮಾದಲ್ಲಿ ನಟಿಸಿದ್ದರು. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದವು.

ಉಮಾಪತಿ ಅವರು 2017 ರಲ್ಲಿ ಅದಾಗಪ್ಪಟ್ಟದ್ದು ಮಗಜನಂಗಳೆಯ ಮೂಲಕ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು. ಅರ್ಜುನ್ ಸರ್ಜಾ ಅವರು ಹೋಸ್ಟ್ ಮಾಡಿದ ರಿಯಾಲಿಟಿ ಶೋವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಖ್ಯಾತಿಯನ್ನು ಗಳಿಸಿದರು. ಉಮಾಪತಿ ಟ್ಯಾಲೆಂಟ್ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ ಡ್ಯಾನ್ಸ್ ಟ್ರೈನಿಂಗ್ ಪಡೆದು ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಾರೆ ಜೊತೆಗೆ MMA ಫೈಟರ್ ಟ್ರೈನಿಂಗ್ ಪಡೆದಿದ್ದಾರೆ.
VIDEO |ಆಸ್ತಿ ವಿವಾದ; ಅತ್ತೆಯ ಜುಟ್ಟು ಹಿಡಿದು ಹೊಡೆದ ಸೊಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
