ಹಾಸನ:ಗಿರವಿ ಇಟ್ಟಿದ್ದ ಅಸಲಿ ಚಿನ್ನದ ಬದಲು ನಕಲಿ ಚಿನ್ನವನ್ನು ಇಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ಎಸ್​ಬಿಐ ಶಾಖೆಯಲ್ಲಿ ನಡೆದಿದೆ.
ಬ್ಯಾಂಕಿನ ಹೊರ ಗುತ್ತಿಗೆ ನೌಕರ ಲವಾ ಬಿ.ಎನ್. ವಿರುದ್ದ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದ ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದೆ. ಈ ಸಂಬಂಧ ಎಸ್.ಬಿ.ಐ ಪ್ರಧಾನ ವ್ಯವಸ್ಥಾಪಕಿ ಅನುರಾಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಮೃನಾಲ್​ ಠಾಕೂರ್​ ಹಳೇ ಫೋಟೋ ವೈರಲ್​! ಇವರೇನಾ ಸೀತಾಮಹಾಲಕ್ಷ್ಮೀ ಎನ್ನುತ್ತಿರುವ ನೆಟ್ಟಿಗರು
ಆರೋಪಿ ಲವಾ ಬ್ಯಾಂಕಿನಲ್ಲಿ ಚಿನ್ನ ಗಿರವಿ ಇಟ್ಟಿದ್ದ ಗ್ರಾಹಕರ ಚಿನ್ನವನ್ನು ಎಗರಿಸಿದ್ದಾನೆ. ಕಪಾಟಿನಲ್ಲಿದ್ದ 30 ಪಾಕೆಟ್ ಚಿನ್ನದಲ್ಲಿ 18 ಪಾಕೆಟ್ ಚಿನ್ನವನ್ನು ಎಗರಿಸಿ ಅದರಲ್ಲಿ ನಕಲಿ ಚಿನ್ನವನ್ನು ತುಂಬಿಟ್ಟಿದ್ದ. ಎರಡು ಪಾಕೆಟ್​ನಲ್ಲಿದ್ದ ಚಿನ್ನವನ್ನು ಸಂಪೂರ್ಣ ಎಗರಿಸಿ ಇತರೆ ಪಾಕೆಟ್​ಗಳಲ್ಲಿ ಕೆಲವು ಚಿನ್ನವನ್ನು ಮಾತ್ರ ಕದ್ದಿದ್ದ.
2013ರಿಂದ ಬ್ಯಾಂಕಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲವಾ, ಬ್ಯಾಂಕ್​ ಅಧಿಕಾರಿಗಳ ಜೊತೆ ವಿಶ್ವಾಸಗಳಿಸಿ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿ ಹೊತ್ತಿದ್ದ. ತನಗೆ ಬ್ಯಾಂಕಿನಲ್ಲಿ ಸಿಕ್ಕ ಸಲುಗೆ ಬಳಸಿ ಕೋಟಿ ಕೋಟಿ ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ್ದು, ಕೊಣನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಲವಾ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ನಟಿ ಖುಷ್ಬೂ ಆಕ್ರೋಶಕ್ಕೆ ಮಣಿದ ಸ್ಟಾಲಿನ್​ ಸರ್ಕಾರ: ನಾಲಿಗೆ ಹರಿಬಿಟ್ಟ ಡಿಎಂಕೆ ನಾಯಕನಿಗೆ ಆಘಾತ

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 1 ವಾರದಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು? ಖರ್ಚಾಗಿದ್ದೆಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
