ಬೆಂಗಳೂರು: ಸೇನಾ ನೇಮಕಾತಿ ರ್ಯಾಲಿ ಸೆಪ್ಟೆಂಬರ್ 19 ರಿಂದ ಮಾರ್ಚ್ 31 ರವರೆಗೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್​ಲೈನ್ ನೋಂದಣಿ ಮಾಡಬಹುದಾಗಿದೆ.ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟ್ರೇಡ್ಸ್ ಮನ್ – 10 ನೇ ತರಗತಿ ಪಾಸ್, 8 ನೇ ತರಗತಿ ಪಾಸ್, ಸೋಲ್ಜರ್ ಕ್ಲರ್ಕ್​/ ಸ್ಟೋರ್​ಕೀಪರ್ ಟೆಕ್ನಿಕಲ್/ ಇನ್ವೆಂಟರಿ ಮ್ಯಾನೇಜ್​ಮೆಂಟ್ ಮತ್ತು ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ / ನರ್ಸಿಂಗ್ ಅಸಿಸ್ಟೆನ್ಸ್ ವೆಟರಿನರಿ ಹುದ್ದೆಗಳಿಗೆ ಈ ರ್ಯಾಲಿ ನಡೆಯಲಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ. ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಜಿಲ್ಲೆಗಳ ಅರ್ಹ ಪುರುಷ ಅಭ್ಯರ್ಥಿಗಳಿಗೆ ಈ ರ್ಯಾಲಿ ಸೆಪ್ಟೆಂಬರ್ 19 ಮತ್ತು ಮಾರ್ಚ್​​ 31ರ ಅವಧಿಯಲ್ಲಿ ನಡೆಯಲಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಕೋವಿಡ್​​19 ನ್ನು ಸಮರ್ಥವಾಗಿ ನಿಭಾಯಿಸಿ ಉನ್ನತ ಮಟ್ಟದ ರಾಜಕೀಯ ಬದ್ಧತೆ ಮೆರೆದಿದ್ದಾರೆ: ಕೇಂದ್ರ ಸಚಿವ ಹರ್ಷವರ್ಧನ್
ಆನ್​ಲೈನ್ ನೋಂದಣಿ ಕಡ್ಡಾಯವಾಗಿದ್ದು, ಜುಲೈ 24 ರಿಂದ ಸೆಪ್ಟೆಂಬರ್ 6 ವರೆಗೆ ನೋಂದಣಿ ಮಾಡಲು ಅವಕಾಶವಿದೆ. ರ್ಯಾಲಿ ನಡೆಯುವ 15 ದಿನ ಮುಂಚಿತವಾಗಿ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಅಡ್ಮಿಟ್ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿರುವ ಮಾಹಿತಿ ಪ್ರಕಾರ ನಿಗದಿತ ದಿನಾಂಕ, ಸಮಯ, ಸ್ಥಳಕ್ಕೆ ರ್ಯಾಲಿಗೆ ಹಾಜರಾಗಬೇಕು. ಈ ಸಮಯದಲ್ಲಿ ಅರ್ಜಿ ಸಲ್ಲಿಕೆ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://bit.ly/3jB64Nw ಅಥವಾ https://joinindianarmy.nic.in/ ನೋಡಬಹುದು.
ದಂಡ ಕಟ್ಟಲು ದುಡ್ಡಿಲ್ಲ- ಕಟ್ಟದಿದ್ರೆ ಭಾರತಕ್ಕೆ ಬಿಡಲ್ಲ: ದುಬೈನಲ್ಲಿ ಕಾರ್ಮಿಕರು ವಿಲವಿಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
