ಹುಬ್ಬಳ್ಳಿ:ಮನೆಯ ಆಸುಪಾಸಿನಲ್ಲಿ ನಾಗರಹಾವು ಕಂಡುಬರುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಮನೆ ಬಳಿ ಒಂದಲ್ಲ ಎರಡಲ್ಲ ನಾಗರಹಾವುಗಳ ರಾಶಿಯೇ ಕಂಡುಬಂದಿದೆ. ಸುಮಾರು 25 ನಾಗರಹಾವುಗಳನ್ನು ಉರಗ ತಜ್ಞರೊಬ್ಬರು ಹಿಡಿದು ಕಾಡಿಗೆ ಬಿಡುವ ಮೂಲಕ ಸ್ಥಳೀಯರ ಆತಂಕ ನಿವಾರಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಗ್ರಾಮದ ಬಸವರಾಜ ಕಟ್ಟೀಮನಿ ಎಂಬವರ ಮನೆ ಸಮೀಪ ಇಂಥ ಸನ್ನಿವೇಶ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಇವರ ಮನೆ ಬಳಿ ನಾಗರಹಾವು ಓಡಾಡುತ್ತಿದ್ದುದರಿಂದ ಉರಗ ತಜ್ಞರನ್ನು ಕರೆಸಿದ್ದರು.
ಇದನ್ನೂ ಓದಿ:ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ
ಉರಗ ತಜ್ಞ ನಾಗರಹಾವೊಂದನ್ನು ಹಿಡಿದ ಕೆಲವೇ ಕ್ಷಣಗಳಲ್ಲಿ ಅಲ್ಲಿ ಅವಿತಿದ್ದ ನಾಗರಹಾವಿನ ಮರಿಗಳು ಕೂಡ ಪ್ರತ್ಯಕ್ಷವಾಗಿವೆ. ನೆಲದಲ್ಲಿ ಅವಿತಿದ್ದ ಅವುಗಳು ಹೊರಕ್ಕೆ ಬಂದಿದ್ದು, ಗ್ರಾಮಸ್ಥರು ಅವುಗಳನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡರು. ನಾಗರಹಾವು ಹಾಗೂ ಅದರ ಮರಿಗಳನ್ನು ಉರಗ ತಜ್ಞ ಹಿಡಿದು ಕಾಡಿಗೆ ಬಿಟ್ಟ ಬಳಿಕ ಗ್ರಾಮಸ್ಥರು ನಿಟ್ಟುಸಿರುಬಿಟ್ಟರು.
ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

ಭ್ರಷ್ಟರಿಗೆ ‘ಕರೊನಾ ಶಾಕ್’?: ಶೀಘ್ರವೇ ಕೋವಿಡ್​ ಅವಧಿಯ ಟೆಂಡರ್​ಗಳ ಮರು ಪರಿಶೀಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
