ಬೆಂಗಳೂರು:ಕೋವಿಡ್ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿರುವ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 9 ವರ್ಷದೊಳಗಿನ 40 ಸಾವಿರಕ್ಕೂ ಹೆಚ್ಚಿನ ಮಕ್ಕಳಲ್ಲಿ ಕರೊನಾ ಪಾಸಿಟೀವ್ ದೃಢಪಟ್ಟಿದೆ ಎಂದು ಸರ್ಕಾರದ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ರಾಜ್ಯ ಕರೊನಾ ವಾರ್ ರೂಂ ಅಂಕಿಅಂಶಗಳ ಪ್ರಕಾರ ಮಾರ್ಚ್ 18ರಿಂದ ಮೇ 18ರವರೆಗಿನ ಎರಡು ತಿಂಗಳ ಅವಧಿಯಲ್ಲಿ 9 ವರ್ಷದೊಳಗಿನ 39,846 ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 10-19 ವಯೋಮಾನದ 1,05,044 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ಸೋಂಕು ರಾಜ್ಯದಲ್ಲಿ ಆರಂಭವಾದಾಗಿನಿಂದ ಕಳೆದ ಮಾರ್ಚ್​ವರೆಗೆ 27,841 ಮಕ್ಕಳಿಗೆ ಸೋಂಕು ತಗುಲಿತ್ತು. ಆದರೆ, ಮೇ 18ರ ವೇಳೆಗೆ ಇದು 65,551ಕ್ಕೆ ಏರಿಕೆಯಾಗಿದೆ.
ಈ ವರ್ಷದ ಮಾರ್ಚ್ 18ರವರೆಗೆ 28 ಮಕ್ಕಳು ಸೋಂಕಿಗೆ ಬಲಿಯಾಗಿದ್ದರು. ಅಂದಿನಿಂದ ಮೇ 18ರವರೆಗೆ 15 ಮಕ್ಕಳು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಹದಿಹರೆಯದವರ ಸಾವಿನ ಸಂಖ್ಯೆ 46 ರಿಂದ 62ಕ್ಕೆ ಏರಿಕೆಯಾಗಿದೆ. ಎರಡನೇ ಅಲೆಯಲ್ಲಿ ಮಕ್ಕಳ ಸಾವಿನ ಪ್ರಮಾಣ ಮೊದಲ ಅಲೆಗಿಂತ ಮೂರು ಪಟ್ಟು ಹಾಗೂ ಹದಿಹರೆಯದವರ ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ.

ಮಕ್ಕಳಿಗೆ ತ್ವರಿತವಾಗಿ ಪ್ರಸರಣ:ಕೋವಿಡ್ ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಒಂದು ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಎರಡನೇ ದಿನ ಕುಟುಂಬದ ಎಲ್ಲರೂ ಸೋಂಕಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಮಕ್ಕಳಿಗೂ ಸೋಂಕು ತಗುಲುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳು ಪ್ರಥಮ ಸಂರ್ಪತರಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎನ್ನುತ್ತಾರೆ ಮಕ್ಕಳ ವೈದ್ಯರು. ಮಕ್ಕಳು ಮನೆಯಲ್ಲಿ ವಯಸ್ಕರೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿರುವುದರಿಂದ ಬಹಳ ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ. ಅವರು ಅತಿ ವೇಗವಾಗಿ ಇತರರಿಗೆ ಸೋಂಕು ಹರಡುತ್ತಾರೆ. ಹಾಗಾಗಿ ಮಕ್ಕಳಲ್ಲಿ ಸ್ವಲ್ಪ ಲಕ್ಷಣ ಕಾಣಿಸಿದ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಬೇಕು. ಇತರರಿಗೆ ಸೋಂಕು ಹರಡದಂತೆ ತಡೆಯಬೇಕು. ಜತೆಗೆ ಆರಂಭದಲ್ಲೇ ಚಿಕಿತ್ಸೆ ಕೊಡಿಸಿದಲ್ಲಿ ಅವರು ಬೇಗ ಗುಣ ಹೊಂದುತ್ತಾರೆ.
ಸಿಟಿ ಸ್ಕ್ಯಾನ್​ ಬೇಡ:ಮಕ್ಕಳಲ್ಲಿ ಜ್ವರ, ಕೆಮ್ಮು, ವಾಂತಿ, ಭೇದಿ ಮುಂತಾದ ರೋಗಲಕ್ಷಣಗಳು ಕಂಡು ಬಂದರೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಅವರನ್ನು ಪಾಲನೆ ಮಾಡುವವರೊಂದಿಗೆ ಪ್ರತ್ಯೇಕಿಸಬೇಕು. ಆದರೆ ಸೋಂಕು ಪತ್ತೆಗಾಗಿ ಮಕ್ಕಳನ್ನು ಸಿಟಿ ಸ್ಕಾ್ಯನ್ ಮತ್ತು ಡಿ ಡೈಮರ್ ಪರೀಕ್ಷೆಗೆ ಒಳಪಡಿಸಬಾರದು ಎನ್ನುತ್ತಾರೆ ಕೆ.ಸಿ.ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
