ಬೆಂಗಳೂರು:ಗೃಹಲಕ್ಷ್ಮಿ ಯೋಜನೆಯಡಿ ಸರಳವಾಗಿ ಮಹಿಳೆಯರಿಗೆ ಹಣ ತಲುಪಿಸಲು ಚರ್ಚೆ ಮಾಡಿದ್ದೇವೆ. ಅರ್ಜಿ ನಮೂನೆ ಬಗ್ಗೆ ಯಾವುದೇ ಗೊಂದಲವಿಲ್ಲ. ಓಟರ್ ಐಡಿ ಸಂಖ್ಯೆ, ಪಾಸ್​​ಬುಕ್ ಬೇಡವೆಂದು ಸಿಎಂ ಸೂಚಿಸಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಚಿವೆ, ಈ ಯೋಜನೆಗೆ ಆನ್​ಲೈನ್, ಆಫ್​​ಲೈನ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಗ್ರಾಮೀಣ ಭಾಗದಲ್ಲಿರುವವರು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಕೂಲಂಕುಷವಾಗಿ ಅಧ್ಯಯನ ಮಾಡಿ ನಿಯಮ ಹಾಕಿದ್ದೇವೆ. ಈಗ ಇರುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಲಡ್ಡು ಗೋಪಾಲ ಕಾಪಾಡಿದ: ಕೃಷ್ಣನ ಮೂರ್ತಿಯೊಂದಿಗೆ ರೈಲು ಪ್ರಯಾಣ ಬೆಳೆಸಿದ ಮಹಿಳೆ!
APL ರೇಷನ್​ ಕಾರ್ಡ್​ಗೆ ಹೊಸದಾಗಿ ಅರ್ಜಿ ಹಾಕಿದವರು ಮತ್ತು ಜಿಎಸ್ಟಿ ರಿಟರ್ನ್ ಮಾಡುವರನ್ನು ಈ ಯೋಜನೆಗೆ ಸೇರಿಸುವ ಬಗ್ಗೆ ಮನವಿ ಮಾಡಿದ್ದೇವೆ. ಈಗ ಈ ಯೋಜನೆಯಿಂದ 85-88% ಕುಟುಂಬಗಳು ಲಾಭ ಪಡೆಯಲಿವೆ. ಜನರಿಗೆ ಯಾವುದೇ ಗೊಂದಲ ಇಲ್ಲ. ಸರಿಯಾದ ಕ್ಲಾರಿಟಿ ಇದೆ. ಇಲಾಖೆಯಲ್ಲಿ ಚರ್ಚೆ ಮಾಡಿಯೇ ಎಲ್ಲಾ ನಿರ್ಧಾರ ಮಾಡಿದ್ದೇವೆ ಎಂದರು.
ಎರಡು ತಿಂಗಳು ಡಾಟಾ ಎಂಟ್ರಿಗೆ ತಾತ್ಕಾಲಿಕವಾಗಿ ಕಚೇರಿ ಪ್ರಾರಂಭ ಮಾಡುತ್ತೇವೆ. APL,BPL, ಅಂತ್ಯೋದಯ ಕಾರ್ಡ್ ಇಲ್ಲವರಿಗೆ ಸದ್ಯ ಯೋಜನೆ ಸಿಗುವುದಿಲ್ಲ. ಈಗ ಹೊಸದಾಗಿ ಅನೇಕ ಜನ ಅರ್ಜಿ ಹಾಕಿದ್ದಾರೆ. ಆದರೆ ಸದ್ಯ ಕಾರ್ಡ್​ಗೆ ಅರ್ಜಿ ಹಾಕಿದ್ದವರಿಗೆ ಯೋಜನೆ ಸಿಗೊಲ್ಲ. ಮುಂದಿನ ದಿನಗಳಲ್ಲಿ ಅವರನ್ನ ಸೇರಿಸುವ ಪ್ರಯತ್ನ ಮಾಡುತ್ತೇವೆ. ಈಗ ಇರುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ಹೃದಯಾಘಾತದಿಂದ ಸರ್ಕಲ್​ ಇನ್ಸ್​ಪೆಕ್ಟರ್ ನಿಧನ: ಚಿತ್ರದುರ್ಗದ ಲಾಡ್ಜ್​ನಲ್ಲಿ ದುರ್ಘಟನೆ
ಅಧಿಕಾರಿಗಳು ಸುಖಾ ಸುಮ್ಮನೆ ಅರ್ಜಿ ರಿಜೆಕ್ಟ್ ಮಾಡುವಂತೆ ಇಲ್ಲ. ಅರ್ಜಿ ರಿಜೆಕ್ಟ್ ಮಾಡಲು ಸಕಾರಣ ಇರಬೇಕು. ಇಲ್ಲದೆ ಹೋದರೆ ಮತ್ತೆ ಫಲಾನುಭವಿಗಳು ಅರ್ಜಿ ಹಾಕಬಹುದು. ಇದೇ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
