ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ನೇರ ಆರೋಪ ಮಾಡಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಟ್ವಿಟರ್ ಮೂಲಕ ಜಾರಕಿಹೊಳಿ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರಮಣ ಆರಂಭಿಸಿದೆ.
“ರಮೇಶ್ ಜಾರಕಿಹೊಳಿಯ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ. ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ’ ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ. ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ” ಎಂದು ಕಾಂಗ್ರೆಸ್ ವಾಕ್​ಪ್ರಹಾರ ಮಾಡಿದೆ. ಜಾರಕಿಹೊಳಿ ವಿರುದ್ಧ “ಕೇಸ್ ದಾಖಲಾಗಿದ್ದರೂ ಬಂಧಿಸದೇ ಇಂತಹ ಕೀಳು ನಾಟಕ ಆಡಲು ಬಿಟ್ಟಿದ್ದೀರಾ?” ಎಂದು ಗೃಹ ಸಚಿವ ಬಿ.ಎಸ್.ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ನಿವಾಸದ ಎದುರು ಕಾಂಗ್ರೆಸ್ ಪ್ರತಿಭಟನೆ
‘ಅರೆಸ್ಟ್​​​ರೇಪಿಸ್ಟ್​​ರಮೇಶ್’ ಎಂಬ ಹ್ಯಾಶ್​ಟ್ಯಾಗ್ ಸೃಷ್ಟಿಸಿರುವ ಕಾಂಗ್ರೆಸ್, “ರಮೇಶ್ ಜಾರಕಿಹೊಳಿ ಅವರೇ, ಸಿಡಿಯಲ್ಲೂ ಹೊಲಸು ಮಾತುಗಳನ್ನಾಡಿದ್ದೀರಿ, ಮಾಧ್ಯಮಗಳ ಎದುರೂ ಸಹ ಹೊಲಸು ನಾಲಿಗೆ ಹರಿಬಿಟ್ಟಿದ್ದೀರಿ. ಇದರಿಂದ ಸಂಶಯವಿಲ್ಲದಂತೆ ಸಿಡಿಯ ಅಸಲಿತನ ಜಗತ್ತಿಗೆ ತಿಳಿದಂತಾಯ್ತು” ಎಂದು ಟ್ವೀಟ್ ಮಾಡಿದೆ. ಜೊತೆಗೆ “ಅತ್ಯಾಚಾರ ಆರೋಪಿಯನ್ನು ಬಂಧಿಸದೆ ಬೀದಿಯಲ್ಲಿ ಬಿಟ್ಟು ಆಟ ಆಡುತ್ತಿದೆ ಸರ್ಕಾರ” ಎಂದು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ.
ಯಾರೋ ಹೆಸರು ಹೇಳಿದ್ದಕ್ಕೆ ರಾಜೀನಾಮೆ ಕೇಳುವ ರಾಜ್ಯ ಬಿಜೆಪಿಯು, ಮೊದಲು ಚಾಂದಿನಿ ನಾಯ್ಕ್‌ರ ಮೇಲೆ ಹಲ್ಲೆ ನಡೆಸಿದ ಶಾಸಕ ಸಿದ್ದು ಸವದಿಯನ್ನು ಉಚ್ಚಾಟಿಸಬೇಕು, ಕೋರ್ಟ್ ತಡೆಯಾಜ್ಞೆ ತಂದಿರುವ 6 ಸಚಿವರ ರಾಜೀನಾಮೆ ಪಡೆಯಬೇಕು, ಸದನ ಸದಸ್ಯರ ಚಾರಿತ್ರ್ಯ ಪ್ರಶ್ನಿಸಿದ ಸುಧಾಕರ್ ರಾಜೀನಾಮೆ ಪಡೆಯಬೇಕು, ಅತ್ಯಾಚಾರಿ ಮಾಜಿ ಸಚಿವನನ್ನು ಪಕ್ಷದಿಂದ ಉಚ್ಚಾಟಿಸಬೇಕು. ಈ ಮೂಲಕ ನೈತಿಕತೆ ತೋರಿಸಬೇಕು” ಎಂದು ರಾಜ್ಯ ಕಾಂಗ್ರೆಸ್ ಬೇಡಿಕೆ ಇಟ್ಟಿದೆ.
ಡಿಕೆಶಿ ಗಂಡಸಲ್ಲ, ನಾನು ಗಂಡಸು.. ನಾಲಾಯಕ್ ಮಹಾನಾಯಕನನ್ನು ಕನಕಪುರದಲ್ಲೇ ಸೋಲಿಸ್ತೀನಿ: ಜಾರಕಿಹೊಳಿ
ಏರ್ ಇಂಡಿಯಾ ಖಾಸಗೀಕರಣಕ್ಕೆ ದಿನಗಣನೆ; ಶೇ. 100 ರಷ್ಟು ಬಂಡವಾಳ ಹಿಂತೆಗೆತ
ನಮ್ಮ ಮಗಳನ್ನು ಒತ್ತೆಯಾಳಾಗಿಟ್ಟುಕೊಂಡು ಡಿಕೆ ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಿಡಿ ಲೇಡಿ ಪೋಷಕರು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + thirteen =
Remember me
