ಬೆಂಗಳೂರು:ಈಶಾನ್ಯ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಬುಧವಾರ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದಲ್ಲಿ ಅದೇ ರಾಜ್ಯದ ಯುವಕನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ, ‘ನಾನು ಕೊಲೆ ಮಾಡಿಲ್ಲ. ಸೆಕ್ಸ್ ಮಾಡುವಾಗ ರಕ್ತಸ್ರಾವ ಉಂಟಾಗಿ ಆಕೆ ಮೂರ್ಛೆ ಹೋದಳು’ ಎಂದು ಕಣ್ಣೀರಿಟ್ಟಿದ್ದಾನೆ.
ಬ್ಯಾಡರಹಳ್ಳಿ ಸಮೀಪದ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪದಲ್ಲಿ ಅನಿಸುಲ್​ ರೆಹಮಾನ್​ (21) ಎಂಬಾತನ್ನು ಬಂಧಿಸಲಾಗಿದೆ.
2ನೇ ವರ್ಷದ ಪ್ಯಾರಾಮೆಡಿಕಲ್​ ಕೋರ್ಸ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಅನಿಸುಲ್​ಗೂ ಮೃತ ಯುವತಿಯ ಸಹೋದರ ಇಬ್ಬರೂ ಸ್ನೇಹಿತರು. ಈ ಹಿಂದೆ ಬೆಂಗಳೂರಿನ ಕಾಲೇಜಿ​ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸಹೋದರ ಮೂಲಕ ಅನಿಸುಲ್​ನ ಪರಿಚಯ ಯುವತಿಗೆ ಆಗಿತ್ತು. ಒಂದೇ ರಾಜ್ಯದವರಾದ್ದರಿಂದ ಯುವತಿಯ ಕುಟುಂಬಸ್ಥರಿಗೂ ಆರೋಪಿ ಪರಿಚಿತನಾಗಿದ್ದ. ಪ್ಯಾರಾಮೆಡಿಕಲ್​ ಕೋರ್ಸ್​ಗೆ ಹೆಚ್ಚಿನ ಬೇಡಿಕೆಯಿದ್ದು, ತಾನು ಓದುತ್ತಿರುವ ಕಾಲೇಜಿನಲ್ಲೇ ಅಡ್ಮಿಶನ್​ ಮಾಡಿಸುವುದಾಗಿ ಹೇಳಿದ್ದ. ಅದರಂತೆ ಯುವತಿಗೆ ಸಹಾಯವನ್ನೂ ಮಾಡಿದ್ದ. ಹಾಸ್ಟೆಲ್​ನಲ್ಲಿ ತಂಗಲು ವ್ಯವಸ್ಥೆಯೂ ಆಗಿತ್ತು. ಡಿ.15ರಂದು ವಿದ್ಯಾರ್ಥಿನಿ ರೈಲಿನಲ್ಲಿ ಬೆಂಗಳೂರಿಗೆ ಬಂದು, ಕಾಲೇಜಿನ ಹಾಸ್ಟೆಲ್​ನಲ್ಲೇ ತಂಗಿದ್ದಳು. ಪ್ರವೇಶಾತಿಗೆ ಅಂತಿಮ ಹಂತದ ಕೆಲ ಪ್ರಕ್ರಿಯೆ ಬಾಕಿ ಇತ್ತು.ಇದನ್ನೂ ಓದಿರಿಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
ಬುಧವಾರ ಬೆಳಗ್ಗೆ ವಿದ್ಯಾರ್ಥಿನಿಗೆ ಕರೆ ಮಾಡಿ ತನ್ನ ರೂಂನ ಬಳಿ ಅನಿಸುಲ್​ ಕರೆಸಿಕೊಂಡಿದ್ದ. ಆಕೆ ಹಾಸ್ಟೆಲ್​ನಿಂದ ಆಟೋ ಮಾಡಿಕೊಂಡು ಅನಿಸುಲ್​ ರೂಂಗೆ ಬಂದಿದ್ದಳು. ಆಗ ಆಕೆ ಅಲ್ಲೇ ಮೃತಪಟ್ಟಿದ್ದಳು. ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆದರೆ ವಿಚಾರಣೆ ವೇಳೆ ಆರೋಪಿಯು, ‘ನಾನು ಮತ್ತು ಆಕೆ ಪ್ರೀತಿಸುತ್ತಿದ್ದೆವು. ಬುಧವಾರ ಬೆಳಗ್ಗೆ ರೂಮಿಗೆ ಬಂದಿದ್ದಳು. ಆಗ ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಆಕೆಗೆ ರಕ್ತಸ್ರಾವ ಉಂಟಾಗಿತ್ತು. ನಂತರ ಉಸಿರುಕಟ್ಟಿದಂತಾಗಿ ಪ್ರಜ್ಞೆ ತಪ್ಪಿದಳು. ನನಗೆ ಭಯವಾಗಿ ಕೂಡಲೇ ನೆರೆಹೊರೆಯವರ ಬಳಿ ಬಂದು ನನ್ನ ಸ್ನೇಹಿತೆ ಉಸಿರಾಡುತ್ತಿಲ್ಲ. ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡುವಂತೆ ಕೇಳಿದೆ. ಬಳಿಕ ಆಟೋದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ. ಆದರೆ ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆಂದು ವೈದ್ಯರು ಹೇಳಿದರು. ನಾನು ಕೊಲೆ ಮಾಡಿಲ್ಲ’ ಎಂದು ಹೇಳಿದ್ದಾನೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

ರೇಣುಕಾಚಾರ್ಯರನ್ನು ಅಟ್ಟಾಡಿಸಿದ್ದ ಕೋತಿಗೆ ತ್ಯಾವರೆಕೊಪ್ಪದಲ್ಲಿ ಸಿಕ್ತು ಸಂಗಾತಿ!

ಅಕ್ರಮ ಸಂಬಂಧ ಮುರಿದುಕೊಳ್ಳಲು ಒಲ್ಲೆ… ಎನ್ನುತ್ತ ಬಂದಾಕೆ ಪ್ರಿಯಕರನ ಜತೆಗೂಡಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ಳು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 + 8 =
Remember me
