ಬಾಗಲಕೋಟೆ:ಕಳೆದ ಕೆಲವು ತಿಂಗಳುಗಳಿಂದ ಮುಧೋಳ, ಲೋಕಾಪುರ, ಬೀಳಗಿ, ಕೆರೂರು ಭಾಗದಲ್ಲಿ ಕುರಿ ಕಳ್ಳತನ ನಡೆಸುತ್ತಿದ್ದರು. ರಾತ್ರಿ ವೇಳೆ ಬಂದು ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಕುರಿಗಳ ಕಳ್ಳತನ ನಡೆಯುತ್ತಿತ್ತು. ಇದು ಗ್ರಾಮದ ಜನರ ಚಿಂತೆಗೆ ಕಾರಣವಾಗಿತ್ತು.
ಗ್ರಾಮದಲ್ಲಿ ಕುರಿ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮುಧೋಳ ಸಿಪಿಐ ಅಯ್ಯನಗೌಡ ನೇತೃತ್ವದ ತಂಡ ರಚಿಸಿ ಕಾರ್ಯಾಚರಣೆ ಮಾಡಿದ್ದಾರೆ. ಲೋಕಾಪುರದ ಸಮೀಪ ಯಾದವಾಡ ರಸ್ತೆಯಲ್ಲಿ ಕುರಿ ಕಳ್ಳರನ್ನು ಬಂಧಿಸುವಲ್ಲಿ ಲೋಕಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲಕದ ಯಲ್ಲಪ್ಪ ಕಿಲಾರಿ(35), ಚಿಕ್ಕೋಡಿ ಮೂಲದ ಬಸಪ್ಪ (30), ಬೆಳಗಾವಿ ಮೂಲದ ಸಾಜೀದ(21), ಹಮೀದ್ (43) ಬಂಧಿತರು. ಬಂಧಿತರಿಂದ 5,86,000 ರೂ. ಹಾಗೂ ಕುರಿ ಸಾಗಿಸಲು ಬಳಸುತ್ತಿದ್ದ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕದ್ದ ಕುರಿಗಳನ್ನು ಬೆಳಗಾವಿ ಮೂಲದ ಹಮೀದ್ ಎನ್ನುವವರಿಗೆ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಚಾರಣೆ ಮುಂದುವರಿಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
