ಚಿಕ್ಕಬಳ್ಳಾಪುರ: ಹಣಕ್ಕಾಗಿ ಹಲವು ಉದ್ಯಮಿಗಳನ್ನು ಅಪಹರಿಸಿ, ಸುಲಿಗೆ ಮಾಡಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಚಿಕ್ಕಬಳ್ಳಾಪುರದ ರ್ಬಕತ್​ ವುಲ್ಲಾ (44), ಬೆಂಗಳೂರಿನ ತಾವರೆಕೆರೆಯ ಲೋಹಿತ್​ ಕುಮಾರ್​ (30), ಬೆಳ್ಳಂದೂರಿನ ಪ್ರವಿಣ್​ (21), ಹುಳಿಮಾವಿನ ಭರತ್​ (26), ಹೆಬ್ಬಾಳ ಎ.ಕೆ.ಕಾಲನಿಯ ಮಾರುತಿ ಪ್ರಸನ್ನ (32), ಕೋಲಾರದ ಚಿನ್ನಾಪುರದ ವೆಂಕಟೇಶ್​ (24) ಬಂಧಿತರು. ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಅಪಹರಣ, ಹಣ ಸುಲಿಗೆ, ಬೆದರಿಕೆ ಸೇರಿದಂತೆ ನಾನಾ ಪ್ರಕರಣಗಳು ದಾಖಲಾಗಿವೆ.
*ಗಿರಿಧಾಮದ ತಪ್ಪಲಿನಲ್ಲಿ ಅಪಹರಣಕಳೆದ ಜು.18 ರಂದು ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಸಾಗರಹಳ್ಳಿ ಬಳಿ ಉದ್ಯಮಿಯೊಬ್ಬರನ್ನು ಅಪಹರಿಸಿ, ಆರೋಪಿಗಳು 78 ಲಕ್ಷ ರೂ ಸುಲಿಗೆ ಮಾಡಿದಕ್ಕೆ ಸಂಬಂಧಿಸಿದಂತೆ ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇಲ್ಲಿನ ಎಯುಆರ್​ಎ ಬಡಾವಣೆಯಲ್ಲಿ ವಾಯು ವಿಹಾರಕ್ಕೆ ಹೋಗುತ್ತಿದ್ದ ರಿಯಲ್​ ಎಸ್ಟೇಟ್​ ಉದ್ಯಮಿ ಕುಡುವತಿ ನವೀನ್​ ಕುಮಾರ್​ರನ್ನು ಕಾರಿನಲ್ಲಿ ಬಂದ ಆರೋಪಿಗಳು, ಅಪಹರಿಸಿದ್ದರು. ಹಾಗೆಯೇ ಬೆದರಿಕೆಯನ್ನೊಡ್ಡಿ ಅವರ ಸಂಬಂಧಿಕರಿಂದ ಹಣವನ್ನು ತರಿಸಿಕೊಂಡಿದ್ದರು. ಕೊನೆಗೆ ಹಲವು ತಾಸಿನ ಬಳಿಕ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದು ಇದರ ದೂರನ್ನು ಪಡೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರ್ಬಕತ್​ನಿಂದ 9.50 ಲಕ್ಷ ರೂ, ರೋಹಿತ್​ನಿಂದ 31.50 ಲಕ್ಷ ರೂ ನಗದು, ವಿವಿಧ ಕಂಪನಿಯ 7 ಮೊಬೈಲ್​ ಜತೆಗೆ ಎರಡು ಕಾರುಗಳನ್ನು ವಶಪಡಿಸಿದ್ದಾರೆ.
*ವರ್ತೂರು ಪ್ರಕಾಶ್​ ಪ್ರಕರಣವರ್ತೂರು ಪ್ರಕಾಶ್​ ಅಪಹರಣ ಪ್ರಕರಣದಲ್ಲಿ ಲೋಹಿತ್​ (ಪ್ರಮುಖ ಆರೋಪಿ) ಸಹ ಇದ್ದ. ಕಳೆದ 2020 ನೇ ಸಾಲಿನ ನ.25 ರಂದು ರಾತ್ರಿ 7 ಗಂಟೆ ಕೋಲಾರದ ಬೆಗ್ಲಿಹೊಸಹಳ್ಳಿಯ ಾರಂ ಹೌಸ್​ನಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸುಲಿಗೆಕೋರರ ತಂಡವು ಮಾಜಿ ಶಾಸಕ ವರ್ತೂರು ಪ್ರಕಾಶ್​ ಮತ್ತು ಚಾಲಕ ಸುನೀಲ್​ರನ್ನು ಅಪಹರಿಸಿತ್ತು. ಕೊನೆಗೆ ಹಲ್ಲೆ ನಡೆಸಿದ್ದಲ್ಲದೇ ಬೆದರಿಸಿ 48 ಲಕ್ಷ ರೂ ಹಣವನ್ನು ಪಡೆದುಕೊಂಡು ಬಿಟ್ಟು ಕಳುಹಿಸಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆರು ಜನರನ್ನು ಬಂಧಿಸಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − seven =
Remember me
