ಬೆಂಗಳೂರು:ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಲಲಿತಾ ಕಲಾ ಅಕಾಡೆಮಿಯಲ್ಲಿ ಶನಿವಾರ ಆಯೋಜಿಸಿದ್ದ ಕಲಾ ಶಿಬಿರದಲ್ಲಿ ವಿಷ್ಣುವರ್ಧನ್ ಅವರ ಬದುಕು,ಸಾಧನೆ ಮತ್ತು ಆದರ್ಶ ಕುರಿತು ಅಪರೂಪ ಚಿತ್ರಗಳನ್ನು ಕಲಾವಿದರು ಬಿಡಿಸಿದರು.
ಕಲಾವಿದ ಬಾಗೂರು ಮಾರ್ಕಂಡೇಯ ಸೇರಿ 15 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್ ಚಿತ್ರಗಳನ್ನು ನೋಡಿ ಸಭಿಕರು ಕಣ್ತುಂಬಿಕೊಂಡರು.ಒಂದೊಂದು ಚಿತ್ರ ಅವರ ಜೀವನ ಸಾರ ಬಗ್ಗೆ ಬೆಳಕು ಚೆಲ್ಲುತ್ತಿತ್ತು. ಈ ಚಿತ್ರಗಳು ನೋಡಿದರೆ ವಿಷ್ಣುವರ್ಧನ್ ನಮ್ಮ ಸುತ್ತಮುತ್ತ ಜೀವಿಸುತ್ತಿರುವ ಎಂಬ ಭಾವನೆ ವ್ಯಕ್ತವಾಗುತ್ತಿತ್ತು.
ಕಲಾವಿದ ಸುನೀಲ್ ಮಿಶ್ರ ಮಾತನಾಡಿ ‘ವಿಷ್ಣುವರ್ಧನ್ ಅವರ ವಿವಿಧ ಭಂಗಿ ಕಲ್ಪಿಸಿಕೊಂಡು ನಾವೆಲ್ಲರೂ ಚಿತ್ರ ಬಿಡಿಸಿದ್ದೇವೆ. ಇಂಥ ಕಾರ್ಯಗಳಿಂದ ವಿಷ್ಣುವರ್ಧನ್‌ನನ್ನು ಜೀವಂತವಾಗಿ ಇಡುವುದಕ್ಕೆ ಸಾಧ್ಯವಾಗುತ್ತದೆ. ಕ್ಯಾಲೆಂಡರ್‌ನಲ್ಲಿ ಕೇವಲ ಅಂಕಿ ಅಂಶಗಳು ಮಾತ್ರವಲ್ಲ, ಅವರ ಭಾವಗಳು ಅಡಗಿವೆ. ಒಂದೊಂದು ಪುಟಕ್ಕೂ ವಿಷ್ಣು ಚಿತ್ರಗಳಿವೆ. ಅವರ ಜೀವನ ಪಯಣ ಕ್ಯಾಲೆಂಡರ್‌ನಲ್ಲಿ ಇರುವುದು ವಿಶೇಷವಾದದ್ದು ಎಂದರು.
ವಿಭಿನ್ನ ಪರಿಕಲ್ಪನೆ: 2011-12ರಿಂದ ವಿಷ್ಣುವರ್ಧನ್ ಹೆಸರಿನ ‘ಕೋಟಿಗೊಬ್ಬ’ ಕ್ಯಾಲೆಂಡರ್ ಬಿಡುಗಡೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಕ್ಯಾಲೆಂಡರ್‌ನ್ನು ತಯಾರಿಸಲಾಗಿದೆ. ವಿಷ್ಣುವರ್ಧನ್‌ನನ್ನು ಹೊಸ ರೂಪದಲ್ಲಿ ತೋರಿಸುವ ಪ್ರಯತ್ನ ಇದಾಗಿದೆ. ಯುವಕರ ಪ್ರತಿನಿಧಿ, ಮಾತೃಪ್ರೇಮಿ, ಸಿಂಹರೂಪಿ, ಕನ್ನಡ ಹೋರಾಟಗಾರ, ವೃಕ್ಷಪ್ರೇಮಿ, ಸಂತ, ರೈತ, ದೇಶಭಕ್ತ ವಿಷ್ಣುವರ್ಧನ್ ಹಾಗೂ ಕಟೌಟ್ ಜಾತ್ರೆಯ ಪರಿಕಲ್ಪನೆಗಳನ್ನು ಹೊಂದಿದೆ ಎಂದು ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಿವರಿಸಿದರು. ಕಲಾವಿದ ಬಾಗೂರು ಮಾರ್ಕಂಡೇಯ ಮತ್ತು ಅವರ ತಂಡ ಈ ಕ್ಯಾಲೆಂಡರ್‌ಗೆ ಚಿತ್ರ ಬಿಡಿಸಲೆಂದೇ ಕಲಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಲಾವಿದರು ಬಿಡಿಸಿರುವ 12 ಚಿತ್ರಗಳು ಒಂದೊಂದು ಅರ್ಥ ಹೇಳಲಿವೆ ಎಂದರು.
ಕಾರ್ಯಕ್ರಮಕ್ಕೆ ಭಾಗಿಯಾಗಲು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಬಾಲಣ್ಣ ಆಸ್ಟ್ರೇಲಿಯಾದಿಂದ ಆಗಮಿಸಿದ್ದರು. ಕಲಾವಿದರಾದ ಕೀರ್ತಿ ವರ್ಮಾ, ಮಂಜು, ವಿನಯ್ ಸೇರಿ 15ಕ್ಕೂ ಹೆಚ್ಚು ಕಲಾವಿದರು ಇದ್ದರು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
