ವಿಶ್ವ ಸಾಂಸ್ಕೃತಿಕಉತ್ಸವದಲ್ಲಿ 17,000 ಕಲಾವಿದರನ್ನು ಒಳಗೊಂಡ “ಸಾಂಸ್ಕೃತಿಕ ಒಲಿಂಪಿಕ್ಸ್”ನ ಮುಂದಾಳತ್ವವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್ ವಹಿಸಲಿದ್ದಾರೆ.
ಈ ವಾರದ ಕೊನೆಯಂದು ಇಡೀ ಜಗತ್ತಿನ ಕಣ್ಣುಗಳು ವಾಷಿಂಗ್ಟನ್​​ ಡಿಸಿಯ ಮೇಲೆ ಇರಲಿದೆ ಮತ್ತು ಅದು ಕೂಡ ಒಳ್ಳೆಯ ಕಾರಣಕ್ಕಾಗಿ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1ರವರೆಗೆ ಯುಎಸ್​ನ ರಾಜಧಾನಿಯು ಅವಿಸ್ಮರಣೀಯವಾದಂತಹ ವೈವಿಧ್ಯತೆಯ ಹಾಗೂ ಏಕತೆಯ ಉತ್ಸವಕ್ಕೆ ಆತಿಥ್ಯೇಯವನ್ನು ವಹಿಸಲಿದೆ. ಇದು ಆರ್ಟ್ ಆಫ್ ಲಿವಿಂಗ್​ನ ವಿಶ್ವ ಸಾಂಸ್ಕೃತಿಕ ಉತ್ಸವದ ನಾಲ್ಕನೆಯ ಆವೃತ್ತಿಯಾಗಲಿದೆ.
ವಿಶ್ವ ವಿಖ್ಯಾತ ಯುಎಸ್ ಕ್ಯಾಪಿಟಾಲ್​ನ ಹಿನ್ನಲೆಯನ್ನು ಹೊಂದಿರುವ ವೇದಿಕೆಯೇ ಒಂದು ಫುಟ್ಬಾಲ್​ ಆಟದ ಮೈದಾನದಷ್ಟಿದೆ. ಈ ಉತ್ಸವದಲ್ಲಿ 17,000 ಕಲಾವಿದರು, ಅನೇಕ ರಾಜ್ಯಗಳ ಮುಖ್ಯಸ್ಥರು, 100ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಭಾಗವಹಿಸಲಿದ್ದು, ಎಲ್ಲರೂ ನ್ಯಾಷನಲ್ ಮಾಲ್​ನಲ್ಲಿ ಸೇರಲಿದ್ದಾರೆ. ಅರ್ಧ ಮಿಲಿಯನ್ ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ಈ ಉತ್ಸವವು ವ್ಯಾಪಕವಾದ ಜಾಗತಿಕ ಉತ್ಸವವಾಗಲಿದೆ. ಈ ಉತ್ಸವದಲ್ಲಿ 50 ಪ್ರದರ್ಶನಗಳು ನಡೆಯಲಿವೆ.
* ಪಾರಂಪರಿಕ ಚೀನಾದ ಸಾಂಸ್ಕೃತಿಕ ಪ್ರದರ್ಶನ. ಇದರಲ್ಲಿ 1,000 ಹಾಡುಗಾರರು ಮತ್ತು ನರ್ತಕರು ಭಾಗವಹಿಸಲಿದ್ದಾರೆ.* 7,000 ನರ್ತಕರನ್ನೊಳಗೊಂಡ ಗರ್ಭನೃತ್ಯ ವೈಭವ.* ನೇರ ಸ್ವರಮೇಳದ ಸಹಿತ 700 ಭಾರತೀಯ ಶಾಸ್ತ್ರೀಯ ನರ್ತಕರು.* ಹಿಪ್ ಹಾಪ್​ನ 50ನೇ ವರ್ಷದ ಸಂಭ್ರಮ, ಕುರ್ಟಿಸ್ ಬ್ಲೋ, ಎಸ್ ಹೆಚ್ ಎ- ರಾಕ್, ಸೀಕ್ವೆನ್ಸ್ ಗರ್ಲ್ಸ್, ಡಿಜೆಕೂಲ್ ಇನ್ನಿತರ ಹಿಪ್ ಹಾಪ್​ನ ಖ್ಯಾತನಾಮರು. ಇವರೊಂದಿಗೆ, ಕಿಂಗ್ ಚಾರ್ಲ್ಸ್ ಹಾಗೂ ಕೆಲ್ಲಿ ಫಾರ್ಮನ್ ಅವರಿಂದ ಸಂಯೋಜಿಸಲ್ಪಟ್ಟ ನೃತ್ಯ ಸಂಯೋಜನೆಯಲ್ಲಿ 100 ಬ್ರೇಕ್ ಡಾನ್ಸ್​ನ ನರ್ತಕರು ತಮ್ಮ ಚೊಚ್ಚಲ ಪ್ರದರ್ಶನವನ್ನು ನೀಡಲಿದ್ದಾರೆ.* ತಮ್ಮ ಪಾರಂಪರಿಕ ನೃತ್ಯವಾದ ಹೋಪಾಕ್ ನೃತ್ಯ ಪ್ರದರ್ಶನವನ್ನು ನೀಡಲಿರುವ 1000 ಯೂಕ್ರೇನ್​​ನ ನರ್ತಕರು.* ಗ್ರಾಮಿ ಪ್ರಶಸ್ತಿ ವಿಜೇತರಾದ ಮಿಕ್ಕಿ ಫ್ರೀ ಯವಲ ನೇತೃತ್ವದಲ್ಲಿ 1000 ಗಿಟಾರ್ ವಾದ್ಯ.* ಬಾಬ್ ಮಾರ್ಲೆಯವರ ಖ್ಯಾತ “ಒನ್ ಲವ್”ನ ಮರುಸೃಷ್ಟಿ. ಮಾರ್ಲೆ ಅವರ ಮೊಮ್ಮಗನಾದ ಸ್ಕಿಪ್ ಮಾರ್ಲಿನ್​ರವರಿಂದ.
ನ್ಯಾಷನಲ್ ಮಾಲ್​ನಲ್ಲಿ, 1963ರಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ತಮ್ಮ ಖ್ಯಾತ ” ಐ ಹಾವ್ ಎ ಡ್ರೀಮ್” ಭಾಷಣವನ್ನು ನೀಡಿ, ಜಗತ್ತಿಗೆ ಸಮನ್ವಯತೆಯ, ಏಕತೆಯ ಸಂದೇಶವನ್ನು ಸಾರಿದರು. ಅದಕ್ಕಿಂತಲೂ ನೂರು ವರ್ಷಗಳ ಹಿಂದೆ ಚಿಕಾಗೋವಿನಲ್ಲಿ ನಡೆದ ಪ್ರಥಮ ವಿಶ್ವ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮಿಂಚಿನ ಭಾಷಣವನ್ನು ನೀಡಿ, ಸಭಿಕರನ್ನು ತಮ್ಮ ತುದಿಯ ಮೇಲೆ ನಿಲ್ಲುವಂತೆ ಮಾಡಿದರು. ಜಗತ್ತಿನ ದೊಡ್ಡ ಧರ್ಮಗಳ ಪ್ರತಿನಿಧಿಗಳನ್ನು ಸಹೋದರ, ಸಹೋದರಿಯರೆ ಎಂದು ಕರೆದು, ಧಾರ್ಮಿಕ ದ್ವಂದ್ವತೆಯನ್ನು, ಅಸಹಿಷ್ಣುತೆಯನ್ನು ಕೊನೆಗಾಣಿಸಬೇಕೆಂಬ ಕರೆಯನ್ನು ನೀಡಿದರು.
ಸೆಪ್ಟೆಂಬರ್ 29, 2023ರಂದು ನ್ಯಾಪನಲ್ ಮಾಲ್​ನಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರರು ” ಒಂದೇ ಜಾಗತಿಕ ಕುಟುಂಬ”ದ ಫಲಕದಡಿ ಎಲ್ಲಾ ಗಡಿಗಳ, ಧರ್ಮಗಳ, ಪಂಥಗಳ, 180 ದೇಶಗಳ ಜನರನ್ನು ಒಗ್ಗೂಡಿಸಿ, ಎಲ್ಲರ ನಡುವೆಯೂ ಇರುವ ವಿಭನೆಗಳನ್ನು ಜೋಡಿಸುವ ಸೇತುವೆಯಾಗಲಿದ್ದಾರೆ.
ಆಹಾರದಂತಹ ಒಗ್ಗೂಡಿಸುವ ವಿಷಯ ಮತ್ತೊಂದಿಲ್ಲ. ಈ ಉತ್ಸವದಲ್ಲಿ ಜಗತ್ತಿನ ಎಲ್ಲೆಡೆಯ ಆಹಾರಗಳ ಮೇಳವೂ ನಡೆಯಲಿದೆ. ಈ ಉತ್ಸವದ ವಿಶೇಷತೆಯೆಂದರೆ, ಚಿಗುರುತ್ತಿರುವ ಕಲಾವಿದರಿಗೆ, ಪ್ರದರ್ಶಕರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುತ್ತಿರುವುದು.
ಈ ಉತ್ಸವದಲ್ಲಿ ಭಾಗವಹಿಸಲಿರುವ ಗಣ್ಯ ಭಾಷಣಕಾರರು:ವಿಶ್ವ ಸಂಸ್ಥೆಯ 8ನೆಯ ಸೆಕ್ರೆಟರಿ ಜೆನರಲ್ ಆದ ಎಚ್.ಇ. ಬನ್ ಕೀ ಮೂನ್, ಎಚ್. ಇ. ಎಸ್. ಜಯಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು, ಅಮೆರಿಕದ ಸರ್ಜನ್ ಜೆನರಲ್ ಡಾ. ವಿವೇಕ್ ಮೂರ್ತಿ, ಯುಎಸ್​ನ ಸಂಸದರಾದ ಹಾನ್. ರಿಕ್ ಸ್ಕಾಟ್, ಹಾನ್. ನಾನ್ಸಿ ಪೆಲೋಸಿ, ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್, ಇತರ ಮಾಜಿ ಹಾಗೂ ಹಾಲಿ ರಾಜ್ಯಗಳ ನಾಯಕರು ಭಾಗವಹಿಸಲಿದ್ದಾರೆ.
World Tourism Day 2023: ಪ್ರವಾಸೋದ್ಯಮದಲ್ಲಿ ಸರ್ಕಾರಿ ಉದ್ಯೋಗಗಳು: ಎಲ್ಲಿ, ಹೇಗೆ ನೇಮಕಾತಿ ನಡೆಯಲಿದೆ?

375 ವರ್ಷಗಳಿಂದ ಕಾಣೆಯಾಗಿದ್ದ 8ನೇ ಖಂಡವನ್ನು ಪತ್ತೆಹಚ್ಚಿದ ವಿಜ್ಞಾನಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
