ಬೆಂಗಳೂರು:ದೇಹದ ಪ್ರತಿರಕ್ಷಣಾ ಕಾಯಿಲೆಗಳಲ್ಲಿ ಸಂಧಿವಾತ (ಆರ್ಥರೈಟಿಸ್) ಪ್ರಮುಖವಾಗಿದ್ದು, ದೀರ್ಘಕಾಲ ಕಾಡುವ ಈ ಕಾಯಿಲೆಗೆ ವಯಸ್ಸಿನ ಮಿತಿಯಿಲ್ಲ. ಜಾಗತಿಕವಾಗಿ ಪ್ರತಿ ನಾಲ್ವರಲ್ಲಿ ಒಬ್ಬರು ನಾನಾ ರೀತಿಯ ಸಂಧಿವಾತದಿಂದ ಬಳಲುತ್ತಿದ್ದಾರೆ.
ಸಂಧಿವಾತವು ಕೀಲುಗಳ ಮೇಲೆ ಪರಿಣಾಮ ಬೀರುವ ತೀವ್ರ ನೋವಿನಿಂದ ಬಾಧಿಸುವ ಕಾಯಿಲೆ. ಇದು ಕೀಲು ನೋವು ಮತ್ತು ಬಿಗಿತಕ್ಕೆ ಕಾರಣವಾಗಿ, ರೋಗಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಸಾಮಾನ್ಯವಾಗಿ ವಯಸ್ಸಿನೊಂದಿಗೆ ಉಲ್ಬಣಿಸುವ ಈ ಕಾಯಿಲೆ ಕೆಲವರಲ್ಲಿ ಅನುವಂಶಿಕವಾಗಿಯೂ ಕಾಡುತ್ತದೆ. ಸಂಧಿವಾತದ ಬಗ್ಗೆ ಬಹಳಷ್ಟು ಜನರಿಗೆ ಅರಿವೇ ಇಲ್ಲ. ಹಾಗಾಗಿ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಮುಂದಾಗುತ್ತಾರೆ.
ಹಾಗಾಗಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಅ.12ರಂದು ವಿಶ್ವ ಸಂಧಿವಾತ ದಿನ ಆಚರಿಸಲಾಗುತ್ತದೆ. ಸಂಧಿವಾತದ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮೂಲಕ ರೋಗದ ದುಷ್ಪರಿಣಾ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಸಂಧಿವಾತ ತಜ್ಞರು.
ಮಕ್ಕಳಲ್ಲಿ ಜೆಐಎ ಸಮಸ್ಯೆ:ಸಂಧಿವಾತ ಕೇವಲ ದೊಡ್ಡವರಲ್ಲಿ ಮಾತ್ರವಲ್ಲ ಶೇ.1 ಮಕ್ಕಳಲ್ಲಿಯೂ (16 ವರ್ಷ ಒಳಗಿನ) ಕಾಣಿಸಿಕೊಳ್ಳುತ್ತದೆ. ಇದನ್ನು ಜುವೆನೈಲ್ ಇಡಿಯೋಪಥಿಕ್ ಆರ್ಥರೈಟಿಸ್ ಎಂದು ಕರೆಯಲಾಗುತ್ತದೆ. ಕೀಲುಗಳಲ್ಲಿ ನೋವಿನಿಂದ ಕೂಡಿದ ಬಿಗತ ಮಕ್ಕಳನ್ನು ದೀರ್ಘಕಾಲ ಬಾಧಿಸಲಿದೆ. ಕೆಲವೊಮ್ಮೆ ದೊಡ್ಡವರಾದ ಮೇಲೂ ಚಿಕಿತ್ಸೆ ಮುಂದುವರೆಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಆರೋಗ್ಯಕರ ತೂಕ ಕಾಪಾಡಿಕೊಳ್ಳಿ: ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವವರಲ್ಲಿ ಮೊಣಕಾಲಿನ ಅಸ್ಥಿಸಂಧಿವಾತ ಸಾಧ್ಯತೆ ಹೆಚ್ಚು. ಹಾಗಾಗಿ ಆರೋಗ್ಯದೊಂದಿಗೆ ದೇಹದ ತೂಕವನ್ನು ಸರಿಯಾಗಿಟ್ಟುಕೊಳ್ಳುವುದು ಅತೀ ಮುಖ್ಯ. ಇದಲ್ಲದೆ ಮಂಡಿ, ಮೊಣಕಾಲು, ಮೊಣಕೈಗಳಿಗೆ ಪೆಟ್ಟಾಗಿದ್ದರೆ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ವೈದ್ಯರು.
ಆಹಾರದ ಬಗ್ಗೆ ಎಚ್ಚರಿಕೆ:ಸಂಧಿವಾತ ಇರುವವರು ಹೊರಗಿನ ಆಹಾರ ಹಾಗೂ ಮಾಂಸಾಹಾರದಿಂದ ದೂರ ಇರಬೇಕು. ಮನೆಯಲ್ಲಿ ತಯಾರಿಸಿದ ರುಚಿಶುಚಿ ಊಟ, ತಾಜಾ ಹಣ್ಣು, ತರಕಾರಿ ಮತ್ತು ಸೊಪ್ಪ ಸೇವನೆ ಉತ್ತಮ.
ನೂರಾರು ರೀತಿಯ ಸಂಧಿವಾತಗಳಿವೆ. ಅವರವರ ದೇಹದ ಪ್ರತಿರಕ್ಷಣೆ ಆಧರಿಸಿ ಬಾದಿಸಲಿದೆ. ಹಾಗಾಗಿ ರೋಗಲಕ್ಷಣ ತಿಳಿದು ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಒಳ್ಳೆಯದು. ದೀರ್ಘಕಾಲ ಕಾಡುವ ಈ ಕಾಯಿಲೆಗೆ ಚಿಕಿತ್ಸೆಯೂ ದುಬಾರಿಯಾಗಿದ್ದು, ಆರೋಗ್ಯ ವಿಮೆಯಲ್ಲೂ ಈ ಚಿಕಿತ್ಸೆಗೆ ಸೌಲಭ್ಯವಿಲ್ಲ. ಹಾಗಾಗಿ ಜನರು ಜಾಗೃತಿ ವಹಿಸಬೇಕು.
| ಡಾ.ವಿಕ್ರಂ ಕೆ. ಜೈನ್, ರುಮಟಾಲಜಿ ತಜ್ಞ, ಜೈನ್ ಆಸ್ಪತ್ರೆ
ಮಹಿಳೆಯರಲ್ಲಿ ಹೆಚ್ಚು:ಸಂಧಿವಾತ ಮಹಿಳೆಯರಲ್ಲಿ ಹೆಚ್ಚು, ಅದರಲ್ಲೂ ಋತುಚಕ್ರ ಮುಗಿನ ನಂತರದಲ್ಲಿ ದೇಹದಲ್ಲಿನ ಹಾಮೋನ್​ಗಳ ಬದಲಾವಣೆಯಿಂದ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಪ್ರಮುಖವಾಗಿ ರುಮಟೈಡ್ ಮತ್ತು ಲೂಪಸ್ ಆರ್ಥರೈಟಿಸ್ ಹೆಚ್ಚು. ಹಾಗೆ ಪುರಷರಲ್ಲಿ ಗೌಟ್ ಮತ್ತು ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಆರ್ಥೊ ಸಮಸ್ಯೆ ಹಚ್ಚು ಕಾಣಿಸಿಕೊಳ್ಳುತ್ತದೆ.
ಮಂಡಿ, ಮೊಣಕಾಲು, ಮೊಣಕೈ, ಮುಂಗೈ ಸೇರಿ ಕೀಲುಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಸಂಬಂಧಿಸಿದ ಕೀಲುಗಳು ನಿರಂತರ ಕಾರ್ಯನಿರ್ವಹಿಸಿದಾಗ ನೋವು ಹೆಚ್ಚಾಗಿ ಊತ ಸಹ ಕಾಣಿಸಿಕೊಳ್ಳುತ್ತದೆ. ರೋಗಿಗಳ ಕೀಲುಗಳಲ್ಲಿ ಲೂಬ್ರಿ ಕೆಂಟ್ ಸೈನೋವಿಯಲ್ ದ್ರವ ಅಧಿಕವಾಗಿರುತ್ತದೆ. ಇದು ಕೀಲುಗಳ ಉರಿಊತಕ್ಕೆ ಕಾರಣವಾಗುತ್ತದೆ. ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಸಂಬಂಧಪಟ್ಟ ಕೀಲುಗಳ ಚಲನೆ ನಿಂತು ಹೋಗುತ್ತದೆ. ಕೆಲ ರೋಗಿಗಳಲ್ಲಿ ನಿರ್ದಿಷ್ಟ ಕೀಲಿನ ಭಾಗದಲ್ಲಿ ನೋವಿನೊಂದಿಗೆ ಕೆಂಪು ಬಣ್ಣ ಕಾಣಿಸುತ್ತದೆ. ಕೆಲವರಲ್ಲಿ ಬೆಳಗ್ಗೆ ಎದ್ದಾಗ, ಸಂಜೆವೇಳೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ನೋವು ಮತ್ತಷ್ಟು ಹೆಚ್ಚಾಗುತ್ತದೆ.
ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
