||ಡಾ.ಮೇಖಲಾ ದ್ವಾರಕಾನಾಥ್, ರಮ್ಯಾ ಗುಹಾ ದ್ವಾರಕಾನಾಥ್
ನಮಸ್ತೇ ಗಿರಿಜೇ ದೇವಿ ನಮಸ್ತೇ ಲೋಕನಾಯಕಿ
ನಮಸ್ತೇ ಸರ್ವಪಾಪಘ್ನ ಸ್ವರ್ಣಗೌರೀ ನಮೋಸ್ತುತೇ
ಶ್ರೀ ಪ್ಲವ ನಾಮ ಸಂವತ್ಸರದ ವೈಶಾಖ ಮಾಸದ ಅಕ್ಷಯ ತದಿಗೆ ಅಕ್ಷಯವಾದ ಆರೋಗ್ಯವನ್ನು, ಸುಮಂಗಲಿಯರು ಮಾಡುವ ಪೂಜೆ ರಾಷ್ಟ್ರಕ್ಕೆ ಆರ್ಥಿಕ ಭದ್ರತೆ ಕೊಡಲೆಂದು ಪ್ರಾರ್ಥಿಸೋಣ. ಧರ್ಮಶಾಸ್ತ್ರ ಆಧಾರದಲ್ಲಿ ಬಿದಿಗೆ ಚಂದ್ರನು ಉದಯವಾಗುವ ಪ್ರತಿಮಾಸದ ಶುಕ್ಲ ಪಕ್ಷದ ತದಿಗೆಗೆ ವಿಶೇಷವಾದ ಸ್ಥಾನವಿದೆ. ಪ್ರತಿ ಸಂವತ್ಸರದ ಭಾದ್ರಪದ ಮಾಸದಲ್ಲಿ ಬರುವ ಶ್ರೀಸ್ವರ್ಣಗೌರಿ ವ್ರತ ತದಿಗೆಯಂದೇ ಬರುತ್ತದೆ. ಅದಕ್ಕಾಗಿ ನಮ್ಮ ಹಿರಿಯರು, ಸನತ್​ಕುಮಾರ ಋಷಿಗಳು, ನವಕಾಂಡ ಋಷಿ ಪತ್ನಿಯರ ಮೂಲಕ ಸ್ವರ್ಣಗೌರಿ ವ್ರತ ಆಚರಿಸಿ, ದೀರ್ಘ ಸುಮಂಗಲಿಯಾಗಿ ಬಾಳುವ ವಿಧಾನವನ್ನು, ಗಂಡನಿಗೆ ಆಯಸ್ಸು ವೃದ್ಧಿಯಾಗುವುದಕ್ಕೆ, ರಾಷ್ಟ್ರಕ್ಕೆ ಸಂಪತ್ತನ್ನು ವೃದ್ಧಿಸುವುದಕ್ಕೆ, ಸಂಸಾರಕ್ಕೆ ಸುಖ-ಸಂತೋಷ ತರುವ ವ್ರತವನ್ನು ಹೇಳಿದ್ದಾರೆ.
ಪ್ರಾಚೀನ ಕಾಲದಲ್ಲಿ ದಕ್ಷಿಣಾಯನದಲ್ಲಿ ಆರಂಭವಾಗಿ ಉತ್ತರಾಯಣದವರೆಗೂ ವ್ರತಗಳನ್ನು ಮಾನವ ಕಲ್ಯಾಣಕ್ಕಾಗಿ ಆಚರಿಸಲು ತಿಳಿಸಿದ್ದಾರೆ. ಪ್ರತಿ ವರ್ಷದ ಚೈತ್ರ ಶುದ್ಧ ತದಿಗೆಯಂದು ತದಿಗೆ ಗೌರಿ ವ್ರತ ಆಚರಿಸಲು ಧರ್ಮಶಾಸ್ತ್ರದಲ್ಲಿ ನಿಖರವಾಗಿ ಉಲ್ಲೇಖಿಸಿದ್ದಾರೆ. ಇದರಿಂದ ಗೌರಿ ವ್ರತ ಪ್ರಾರಂಭವಾಗಿ ವಸಂತ ಮಾಸದ ವೈಶಾಖ ಶುದ್ಧ ತದಿಗೆಯನ್ನು ಅಕ್ಷಯ ತದಿಗೆ ಎಂದು ಹಿರಿಯರು ಸೂಚಿಸಿದ್ದಾರೆ. ಜ್ಯೇಷ್ಠ ಮಾಸದಲ್ಲಿ ಜ್ಯೇಷ್ಠ ಲಕ್ಷ್ಮೀ ವ್ರತ ಆಚರಿಸುತ್ತಾರೆ. ಹೀಗೇ ಮುಂದುವರಿದು ಭಾದ್ರಪದ ಮಾಸದ ಸ್ವರ್ಣಗೌರಿ ವ್ರತದ ಆಚರಣೆಯೊಂದಿಗೆ ಗೌರಿವ್ರತ ಸಂಪನ್ನವಾಗುತ್ತದೆ. ಜಾತಿ-ಮತಗಳ ಭೇದಭಾವವಿಲ್ಲದೆ ಆಚರಿಸುವ ಈ ವ್ರತ ಸ್ತ್ರೀಯರಿಗೆ ದೀರ್ಘಸೌಮಂಗಲ್ಯ ನೀಡುತ್ತದೆ. ಅಕ್ಷಯ ತದಿಗೆ ವ್ರತ ರಾಷ್ಟ್ರ-ರಾಜ್ಯ ಸುಖ, ಸಂಸಾರದ ಸುಖಕ್ಕೆ ಸಾಧನವಾಗಿ ಮಾಡುವ ವ್ರತವಾಗಿದೆ. ಈ ಹೊತ್ತಿನಲ್ಲಿ ರಾಷ್ಟ್ರ ಘೋರವ್ಯಾಧಿಯಿಂದ ನರಳುತ್ತಿರುವಾಗ, ಆರೋಗ್ಯವಂತ ರಾಷ್ಟ್ರವನ್ನು ಕರುಣಿಸು ಎಂದು ಪರ್ವತ ರಾಜನ ಪುತ್ರಿ-ಸಾಂಬಸದಾಶಿವನ ಪತ್ನಿ ಗೌರಿಯನ್ನು ಪ್ರಾರ್ಥಿಸೋಣ.
ಹೀಗಿರಲಿ ಪ್ರಾರ್ಥನೆ:ಅಕ್ಷಯ ತದಿಗೆಯಂದು ಸಾಯಂಕಾಲ ದೇವಿಗೆ ತುಪ್ಪದ ದೀಪ ಹಚ್ಚಿ ವ್ರತರತ್ನಮಾಲಾದಲ್ಲಿರುವ ಗೌರೀವ್ರತದ ಕಥೆ ಓದಬೇಕು. ಪುಣ್ಯಕಾರ್ಯಗಳನ್ನು ಮಾಡಿ ನಮ್ಮ ಪುಣ್ಯ ಸಂಪಾದನೆಯನ್ನು ಅಕ್ಷಯವಾಗಿಸಿಕೊಳ್ಳೋಣ. ಸನತ್​ಕುಮಾರ ಋಷಿಗಳು ತಿಳಿಸಿರುವಂತೆ ಗೌರಿಯನ್ನು ಪೂಜಿಸಿ, ಮನೆಯಲ್ಲಿಯೇ ಇರುವ ಹೆಣ್ಣು ಮಕ್ಕಳಿಗೆ ಅರಿಶಿಣ-ಕುಂಕುಮ ನೀಡಿ ದೀರ್ಘಸೌಮಾಂಗಲ್ಯ ನೀಡೆಂದು ಗೌರಿಯನ್ನು ಪ್ರಾರ್ಥಿಸೋಣ. ದೇವರಿಗೆ ಬಂಗಾರ ತೊಡಿಸಿದರೆ ಆಭರಣವಾಗುತ್ತದೆ. ಹೆಣ್ಣುಮಕ್ಕಳು ತೊಟ್ಟರೆ ಸೌಂದರ್ಯವತಿಯರಾಗಿ ಕಾಣುತ್ತಾರೆ. ಇಂದು ಭಾರತಮಾತೆ ನಮ್ಮೆಲ್ಲರ ಸ್ವರ್ಣವನ್ನು ಧರಿಸಿ ಭಾರತವನ್ನು ಕಾಪಾಡಲಿ ಎಂದು ಏಕಕಂಠದಿಂದ ಪ್ರಾರ್ಥಿಸೋಣ. ನಮ್ಮ ದೇಶದ ಮಾತೆಯರಿಗೆ ದೇಶವೇ ಆಭರಣವಾಗಿ ಕಂಗೊಳಿಸಲಿ.
ಮನಸ್ಸು ಬಂಗಾರಮಯವಾಗಲಿ:ಚಿನ್ನವನ್ನು ಖರೀದಿಸಬೇಕೆಂದು ಯಾವ ಶಾಸ್ತ್ರವೂ ಸೂಚಿಸಿಲ್ಲ. ಅವರವರ ಆರ್ಥಿಕತೆ ಆಧಾರದ ಮೇಲೆ ಖರೀದಿ ಮಾಡಬಹುದು. ನಮ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಮೂಡಿದಾಗ, ಮನಸ್ಸೇ ಬಂಗಾರಮಯವಾಗಿ, ಚಿನ್ನದಂಥ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ಚಿನ್ನವನ್ನು ಕೊಂಡು ಸ್ವಾರ್ಥವನ್ನು ಮಾಡುವುದಕ್ಕಿಂತ, ರೋಗದಿಂದ ಬಳಲುತ್ತಿರುವ ಜನರಿಗೆ ಕೈಲಾದ ಸಹಾಯ, ದಾನ-ಧರ್ಮ ಮಾಡೋಣ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
