ಶುಚಿರ್ಜಿತೇಂದ್ರಿಯೋ ವೇದವೇದಾಂಗಾದಿವಿಚಕ್ಷಣಃ |
ಯೋಗಜ್ಞಃ ಸರ್ವಶಾಸ್ತ್ರಜ್ಞಃ ಸ ಮದಾಸ್ಥಾನಮರ್ಹತಿ ||
ಇದು ಶ್ರೀ ಶಂಕರ ಭಗವತ್ಪಾದರ ಮಹಾನುಶಾಸನೋಕ್ತಿ. ಇದಕ್ಕೆ ಸಕಲ ಸಲ್ಲಕ್ಷಣ ಶೋಭಿತರಾದವರು ಶೃಂಗೇರಿ ಶಾರದಾಪೀಠದ 36ನೇ ಅಧಿಪತಿಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು. ಸಕಲ ಆಸ್ತಿಕ ಜನರ ಶ್ರೇಯಸ್ಸೇ ಅವರ ಪರಮಧ್ಯೇಯ. ಪ್ರತಿನಿತ್ಯ ಶ್ರೀ ಶಾರದಾಚಂದ್ರಮೌಳೀಶ್ವರರ ಪೂಜೆಯನ್ನು ಮಾಡುತ್ತ ಆಸೇತುಶೀತಾಚಲ ವಿಶೇಷವಾಗಿ ಧರ್ಮಪ್ರಚಾರ ಮಾಡುತ್ತಿದ್ದಾರೆ. ಜಿಜ್ಞಾಸುಗಳಾದ ಶಿಷ್ಯಜನರಿಗೆ ಧರ್ಮ-ಬ್ರಹ್ಮ ತತ್ವಗಳನ್ನು ಉಪದೇಶಿಸುತ್ತ ವೇದಶಾಸ್ತ್ರ ಪ್ರಚಾರ, ಬಡಜನರಿಗೆ ಉಪಕಾರ ಮೊದಲಾದ ಅನೇಕ ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಪೀಠದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಪೀಠದ ಕೀರ್ತಿಯನ್ನು ವಿಶ್ವದ ಎಲ್ಲೆಡೆಗೂ ಪಸರಿಸಿದ್ದಾರೆ.
ಶ್ರೀಗಳ ಪೂರ್ವಾಶ್ರಮದ ಹೆಸರು ಸೀತಾರಾಮಾಂಜನೇಯಲು. ತಂದೆ ತಂಗಿರಾಲ ವೆಂಕಟೇಶ್ವರ ಅವಧಾನಿ, ತಾಯಿ ಅನಂತಲಕ್ಷ್ಮಮ್ಮ. ಆಂಧ್ರದ ಮಚಲೀ ಪಟ್ಟಣದಲ್ಲಿ 1951ರ ಏಪ್ರಿಲ್ 11ರಂದು ಜನನ. ದೈವಭಕ್ತಿ, ಅಧ್ಯಯನಶಕ್ತಿ, ಪ್ರಾಪಂಚಿಕ ಸಂಗತಿಗಳಲ್ಲಿ ನಿರಾಸಕ್ತಿ ಜನ್ಮದಾರಭ್ಯ ಸ್ವಭಾವ. ಈ ಸದ್ಗುಣಗಳನ್ನು ಗುರುತಿಸಿದ 35ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು, ಅವರನ್ನು ತಮ್ಮೊಡನೆ ಕರೆದುಕೊಂಡು ಬಂದು ಶೃಂಗೇರಿಯಲ್ಲಿ ಸ್ವತಃ ಶಾಸ್ತ್ರಾಭ್ಯಾಸ ಮಾಡಿಸಿದರು. 1974ರ ನವೆಂಬರ್ 11ರಂದು ಸನ್ಯಾಸ ದೀಕ್ಷೆ ನೀಡಿ ಶ್ರೀ ಭಾರತೀ ತೀರ್ಥರೆಂಬ ಹೆಸರಿಟ್ಟು, ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿದರು. ಶ್ರೀ ಭಾರತೀ ತೀರ್ಥರು ಶುಕ್ಲ ಸಂವತ್ಸರದ ಆಶ್ವೀಜ ಮಾಸದ ಕೃಷ್ಣಪಂಚಮಿಯಂದು (19-10-1989) ಜಗದ್ಗುರುಗಳಾಗಿ ಪಟ್ಟಾಭಿಷಕ್ತರಾದರು.
ಭಾಷಾಭಿಮಾನ:ಶ್ರೀ ಭಾರತೀತೀರ್ಥರ ಮಾತೃಭಾಷೆ ತೆಲುಗು. ಚಿಕ್ಕವಯಸ್ಸಿನಲ್ಲಿಯೇ ವ್ಯಾಕರಣ, ಸಾಹಿತ್ಯ, ತತ್ತ್ವಶಾಸ್ತ್ರ ಅಧ್ಯಯನ ಮಾಡಿ, ಸಂಸ್ಕೃತದಲ್ಲೇ ಕವನ ರಚಿಸುತ್ತಿದ್ದರಂತೆ. ಆಟ ಪಾಠಗಳಲ್ಲೂ ಪದ್ಯರೂಪದಲ್ಲಿ ಮಾತನಾಡುತ್ತಿದ್ದರಂತೆ! ಅನೇಕ ಭಾರತೀಯ ಭಾಷೆಗಳಲ್ಲಿ ಶ್ರೀಗಳಿಗೆ ಇರುವ ಪ್ರಭುತ್ವ ಎಂಥವರನ್ನೂ ವಿಸ್ಮಿತಗೊಳಿಸುತ್ತದೆ. ಶೃಂಗೇರಿಯಲ್ಲಿ ಶಾಂತಿಕುಟೀರ, ವೃದ್ಧಾಶ್ರಮ, 127 ಅಡಿ ಎತ್ತರದ ಪ್ರವೇಶ ಗೋಪುರ ಶ್ರೀಗಳ ಕೊಡುಗೆಗಳು. 2012-13ರಲ್ಲಿ 13 ತಿಂಗಳ ಕಾಲ ದಕ್ಷಿಣ ಭಾರತ ವಿಜಯಯಾತ್ರೆ ಕೈಗೊಂಡು ಜನರಲ್ಲಿ ಧಾರ್ವಿುಕ ಪ್ರಜ್ಞೆ ಜಾಗೃತಗೊಳಿಸಿದ್ದಾರೆ. ಶ್ರೀಗಳ ಆಶಯದಂತೆ ಸರ್ಕಾರ ಶಂಕರ ಜಯಂತಿ ದಿನವನ್ನು ‘ತತ್ತ್ವಜ್ಞಾನಿಗಳ ದಿನ’ ಎಂದು ಘೊಷಿ ಸಿದೆ. ಪ್ರಧಾನಮಂತ್ರಿಯಾದಿಯಾಗಿ ಬಹಳಷ್ಟು ಗಣ್ಯರು ಶೃಂಗೇರಿ ಪೀಠಕ್ಕೆ ಆಗಮಿಸಿ ಆಶೀರ್ವಾದ ಪಡೆದಿದ್ದಾರೆ. ಈಗ ಶ್ರೀ ಭಾರತೀ ತೀರ್ಥರು ತಮ್ಮ ಉತ್ತರಾಧಿಕಾರಿಶಿಷ್ಯಪ್ರವರರಾದ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳಿಂದ ಸೇವ್ಯಮಾನ್ಯರಾಗಿದ್ದಾರೆ. ಎಲ್ಲ ವಿಧದಲ್ಲಿಯೂ ತಮ್ಮ ಪ್ರತಿರೂಪವೇ ಆಗಿರುವ ಶ್ರೀ ವಿಧುಶೇಖರಭಾರತೀ ಶ್ರೀಗಳಿಗೆ ಜವಾಬ್ದಾರಿಗಳನ್ನು ವಹಿಸಿ ಆತ್ಮಧ್ಯಾನನಿರತರಾಗಿದ್ದಾರೆ. ಎಲ್ಲ ವಿಧವಾದ ಲೌಕಿಕ ವಿಷಯಗಳಿಗೆ ವಿಮುಖರಾಗಿ ಆದರ್ಶಮಠಾಧಿಪತಿಗಳಾಗಿದ್ದಾರೆ.
72ನೇ ವರ್ಧಂತಿ ಇಂದು:ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ 72ನೇ ವರ್ಧಂತಿ ಉತ್ಸವ ಇದೇ ಏ. 7ರಂದು ಶೃಂಗೇರಿಯಲ್ಲಿ ನಡೆಯಲಿದೆ. ಲೋಕ ಕಲ್ಯಾಣದ ಸಲುವಾಗಿ ಹೋಮ-ಹವನಗಳು ನಡೆಯಲಿವೆ. ಶಾರದಾಂಬೆ ಪೂಜೆ, ಶತರುದ್ರ ಹೋಮ, ಪೂರ್ಣಾಹುತಿ ನೆರವೇರಲಿವೆ. ಗುರುವಂದನಾ ಕಾರ್ಯಕ್ರಮ, ಅನುಗ್ರಹ ಸಂದೇಶ ಇರುತ್ತವೆ. ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಿಂದ ಭಕ್ತರು ಬರಲಿದ್ದಾರೆ.
ಭೀಕರ ಅಪಘಾತ; ಮಗುಚಿ ಬಿದ್ದ ಲಾರಿ, ಒಬ್ಬ ಸ್ಥಳದಲ್ಲೇ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
