|ಡಾ. ಅಜಿತ್ ಬೆನೆಡಿಕ್ಟ್ ರಾಯನ್
ಮೇರಿ ಕನ್ಯಾಸ್ತ್ರೀ. ದೇವದೂತರು ಆಕೆಗೆ ಸಂದೇಶವೊಂದನ್ನು ತರುತ್ತಾರೆ. ನಿನ್ನ ಗರ್ಭದಲ್ಲಿ ದೇವರು ಜನಿಸಲಿರುವರು ಎನ್ನುತ್ತಾರೆ. ‘ನನಗಿನ್ನೂ ಮದುವೆಯಾಗಿಲ್ಲ, ಅದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ ಮೇರಿ ನಂತರ ‘ದೇವರ ಇಷ್ಟದಂತೆ ಆಗಲಿ’ ಎನ್ನುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ಮಹಾಭಾರತದ ಕುಂತಿಯ ಹಾಗೆ ಪವಿತ್ರಾತ್ಮರಿಂದ ಆಕೆ ಗರ್ಭವತಿಯಾಗುತ್ತಾಳೆ. ನಂತರ ಜೋಸೆಫ್ ಎಂಬುವವರ ಜತೆ ಆಕೆಯ ವಿವಾಹ ನಿಶ್ಚಯವಾಗುತ್ತದೆ. ಗರ್ಭವತಿಯನ್ನು ಮದುವೆಯಾಗುವುದು ಹೇಗೆ ಎಂದು ಜೋಸೆಫ್ ಗೊಂದಲಕ್ಕೊಳಗಾದಾಗ ಮತ್ತೆ ದೇವದೂತರೇ ಸಂದೇಶ ತರುತ್ತಾರೆ. ಮದುವೆ ನೆರವೇರುತ್ತದೆ.
ಮೇರಿಗೆ ಒಂಬತ್ತು ತಿಂಗಳು ತುಂಬಿದಾಗ ಹೆರಿಗೆಗಾಗಿ ಸುರಕ್ಷಿತ ಮನೆ ಇರುವುದಿಲ್ಲ. ತುಂಬು ಗರ್ಭಿಣಿಯನ್ನು ಕರೆದುಕೊಂಡು ಆಶ್ರಯಕೋರಿ ಜೋಸೆಫ್ ಅಲೆದಾಡುತ್ತಾರೆ. ಎಲ್ಲಿಯೂ ನೆಲೆ ಸಿಗದಿದ್ದಾಗ ಕೊನೆಗೆ ಬೆತ್ಲಹೇಮ್ಲ್ಲಿ ಉಳಿದುಕೊಳ್ಳಲು ಸ್ಥಳವೊಂದು ಸಿಗುತ್ತದೆ. ಆದರೆ ಅದು ಗೋದಲಿ. ಅಂದರೆ ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲಿಯೇ ಯೇಸುಕ್ರಿಸ್ತನ ಜನನವಾಗುತ್ತದೆ. ಆ ಪುಣ್ಯದಿನ ಇಂದು. ಯೇಸು ಭೂಮಿಗೆ ಬಂದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತಂತೆ. ದೇವಪುತ್ರನ ಜನನ ಸಮಯದಲ್ಲಿ ಆಕಾಶದಲ್ಲಿ ಕಂಡ ಆ ನಕ್ಷತ್ರದ ಸಂಕೇತವೇ ಕ್ರಿಸ್​ವುಸ್ ಆಚರಣೆಯಲ್ಲಿ ಎಲ್ಲೆಲ್ಲೂ ಕಾಣುವ ಸ್ಟಾರ್​ಗಳು. ಇದನ್ನು ಕ್ರಿಸ್​ವುಸ್​ನ ಸಂಕೇತವೆಂದು ಕರೆಯಲಾಗಿದೆ.
ಕ್ರಿಸ್ತಶಕ 350ರಲ್ಲಿ ರೋಮನ್ ಬಿಷಪ್ ಅವರು ಡಿ.25ನ್ನು ಕ್ರಿಸ್​ವುಸ್ ಎಂದು ಆಚರಿಸುವಂತೆ ಆದೇಶಿಸಿದರು. ಅಂದಿನಿಂದ ಕ್ರಿಸ್​ವುಸ್ ಆಚರಣೆ ನಡೆಯುತ್ತ ಬಂದಿದೆ. 1660ರಲ್ಲಿ ಈ ದಿನವನ್ನು ರಜಾದಿನವಾಗಿ ಘೋಷಿಸಲಾಯಿತು.
ಆಗಮನ ಕಾಲ:ಕ್ರಿಸ್​ವುಸ್ ಆಚರಣೆಗಾಗಿ ಕ್ರೖೆಸ್ತರ ಮನೆಗಳಲ್ಲಿ ಒಂದು ತಿಂಗಳು ಮುಂಚಿತವಾಗಿಯೇ ಸಿದ್ಧತೆಗಳು ಆರಂಭವಾಗುತ್ತವೆ. ಇದನ್ನು ‘ಆಗಮನ ಕಾಲ’ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಕೆಲವರು ಪ್ರಾರ್ಥನೆ, ಉಪವಾಸ ಮಾಡುತ್ತಾರೆ. ಮತ್ತೆ ಕೆಲವರು ಮಾಂಸಾಹಾರ ತ್ಯಜಿಸುತ್ತಾರೆ. ಇನ್ನು ಕೆಲವರು ಬೈಬಲ್ ಪಠಣ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಶಾಂತಿ, ದಯೆ, ಸದ್ಗುಣ, ಪ್ರೀತಿ ಇಂಥ ಸಕಾರಾತ್ಮಕ ಪ್ರಜ್ಞೆ ಬೆಳೆಯುತ್ತದೆ ಎನ್ನುವುದು ಈ ನಿಯಮ ಪಾಲನೆಯ ಉದ್ದೇಶ. ಬಗೆ ಬಗೆಯ ತಿಂಡಿ ತಿನಿಸುಗಳು (ಕುಸ್ವಾರ್) ಸಿದ್ಧವಾಗುತ್ತವೆ. ನಕ್ಷತ್ರ- ಗೂಡುದೀಪ ನೇತಾಡಿಸುವುದು, ಕ್ರಿಸ್​ವುಸ್ ಡಾನ್ಸ್, ಕ್ಯಾರಲ್ ಸಿಂಗಿಂಗ್, ಕ್ರಿಸ್​ವುಸ್ ಶುಭಾಶಯ ಕೋರಿ ಗ್ರೀಟಿಂಗ್ ಕಳುಹಿಸುವುದು, ಹೊಸ ಉಡುಗೆ-ತೊಡುಗೆ, ಸಾಂತಾಕ್ಲಾಸ್, ಮನೆ ಅಲಂಕಾರ, ಕ್ರಿಸ್​ವುಸ್ ಟ್ರೀ- ಹೀಗೆ ಹಬ್ಬದ ಸಂಭ್ರಮಕ್ಕೆ ವಿಧ ವಿಧವಾದ ತಯಾರಿ ನಡೆಯುತ್ತವೆ. ಕ್ರಿಸ್ತ ಜನಿಸಿದ ಸ್ಥಳದ ನೆನಪಿಗಾಗಿ ಗೋದಲಿ ನಿರ್ಮಾಣ ಮಾಡಲಾಗುತ್ತದೆ. ಗೋದಲಿ ವಿನಯಗುಣದ ಸಂಕೇತವೂ ಹೌದು.
ಚರ್ಚ್​ಗಳಲ್ಲಿ ಐದು ರೀತಿಯ ಮೊಂಬತ್ತಿಗಳನ್ನು ಬೆಳಗಲಾಗುತ್ತದೆ. ನಾಲ್ಕು ಭಾನುವಾರ ಈ ಆಚರಣೆ ಇರುತ್ತದೆ. ಈ ಮೊಂಬತ್ತಿಗಳಲ್ಲಿ ಮೂರು ನೇರಳೆ ಬಣ್ಣದವು, ಒಂದು ಪಿಂಕ್ (ಗುಲಾಬಿಬಣ್ಣ) ಮತ್ತು ಇನ್ನೊಂದು ಬಿಳಿಬಣ್ಣದ್ದಾಗಿರುತ್ತದೆ. ಈ ಬಣ್ಣಗಳೂ ಸಂಕೇತವೇ. ಮೊದಲನೆಯ ಭಾನುವಾರ ನೇರಳೆ ಬಣ್ಣ ನಂಬಿಕೆಯ ಸಂಕೇತವಾಗಿ, ಎರಡನೆಯ ಭಾನುವಾರದ ನೇರಳೆ ಶಾಂತಿಯ ಸಂಕೇತವಾಗಿ, ಮೂರನೆಯ ಭಾನುವಾರ ಸಂತೋಷದ ಸಂಕೇತವಾಗಿ ಪಿಂಕ್, ನಾಲ್ಕನೆಯದು ಪ್ರೀತಿಯ ಸಂಕೇತವಾಗಿ ನೇರಳೆ ಹಾಗೂ ಕ್ರಿಸ್​ವುಸ್ ದಿನದಂದು ಬಿಳಿಯಬಣ್ಣದ ಮೊಂಬತ್ತಿ ಹಚ್ಚಲಾಗುತ್ತದೆ. ವಿಶ್ವದ ಬೆಳಕು ಎಂದು ಕರೆಯುವ ಕ್ರಿಸ್ತನ ನೆನಪನ್ನು ಈ ಮೇಣದ ಬತ್ತಿಗಳು ಮಾಡುತ್ತವೆ.
ಕ್ರಿಸ್​ವುಸ್ ಹಿಂದಿನ ದಿನ ‘ರಾತ್ರಿ ಪೂಜೆ’ ನಡೆಯುತ್ತದೆ. ಚರ್ಚ್​ಗಳಲ್ಲಿ ಕುಟುಂಬ ದಿನ ಆಚರಿಸಲಾಗುತ್ತದೆ. ಬೇರೆ ಬೇರೆ ಭಾಷೆಗಳಲ್ಲಿ ಕ್ರಿಸ್​ವುಸ್ ಹಾಡುಗಳನ್ನು ಹಾಡಲಾಗುತ್ತದೆ. ಎಲ್ಲ ಜಾತಿಯವರೂ ಅಲ್ಲಿ ಸೇರಿರುತ್ತಾರೆ. ಧರ್ಮಗುರು ಸಂದೇಶ ನೀಡುತ್ತಾರೆ. ನಂತರ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಕ್ರಿಸ್​ವುಸ್ ಟ್ರೀ:ಕ್ರಿಸ್​ವುಸ್ ಆಚರಣೆಯ ಪ್ರಮುಖ ಭಾಗಗಳಲ್ಲೊಂದು ಕ್ರಿಸ್​ವುಸ್ ಮರ. ಇದು ಸಂತೋಷ ಮತ್ತು ಭರವಸೆಯ ಸಂಕೇತ. ಹಿಮ ಬಿದ್ದರೂ ತನ್ನ ಹಸಿರನ್ನು ಕಳೆದುಕೊಳ್ಳದಿರುವುದು ಈ ಮರದ ವಿಶೇಷ. ತ್ರಿಕೋನಾಕಾರದಲ್ಲಿರುವ ಈ ಮರವು ಮನೆಯ ದುಃಖವನ್ನು ದೂರಮಾಡಿ ಸಂತೋಷ ನೆಲೆಸುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ.
ವ್ರೀತ್:ಹಾಗೆಯೇ ಕ್ರಿಸ್​ವುಸ್ ವ್ರೀತ್ ರಚಿಸಲಾಗುತ್ತದೆ. ಮನೆಯ ಮುಂಬಾಗಿಲಿನಲ್ಲಿ ಈ ವ್ರೀತ್ ಹಾಕಲಾಗಿರುತ್ತದೆ. ಇದು ವೃತ್ತಾಕಾರದಲ್ಲಿರುತ್ತದೆ. ಹೇಗೆ ವೃತ್ತಕ್ಕೆ ಅಂತ್ಯವಿಲ್ಲವೋ ಹಾಗೆ ಅಂತ್ಯವೇ ಇಲ್ಲದ ದೇವರ ಪ್ರೀತಿಯನ್ನು ಇದು ಸಾರುತ್ತದೆ. ಹಸಿರು ಎಲೆಗಳಿಂದ ಮತ್ತು ಬೆರ್ರಿಗಳಿಂದ ಈ ವ್ರೀತ್​ಗೆ ಅಲಂಕಾರ ಮಾಡುತ್ತಾರೆ. ಕ್ರಿಸ್​ವುಸ್ ಬೆಲ್ ರಜಾದಿನದ ಸಂಕೇತ.
ಉಡುಗೊರೆ:ಕ್ರಿಸ್​ವುಸ್ ತಾತ ತುಂಬ ಪ್ರಸಿದ್ಧ. ಯೇಸುಕ್ರಿಸ್ತನ ಸಂದೇಶ ಸಾರುವ ಹಾಡುಗಳನ್ನು ಹಾಡುತ್ತ ಮಕ್ಕಳಿಗೆ ಚಾಕೊಲೇಟ್, ಉಡುಗೊರೆ ನೀಡುತ್ತ ಖುಷಿಪಡಿಸುವ ಪದ್ಧತಿ ಇದೆ. ಹಾಗೆಯೇ ಯಾರಿಗೂ ಗೊತ್ತಾಗದ ಹಾಗೆ ಬಡಜನರಿಗೆ ಉಡುಗೊರೆ ನೀಡುವ ರೂಢಿ ಇದೆ. ಅದೇ ಸಾಂತಾಕ್ಲಾಸ್. ಇದನ್ನು ಆರಂಭಿಸಿದವರು ಸಂತ ನಿಕೋಲಸ್. ಈತ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ತಮ್ಮ ನಿಜವಾದ ಗುರುತನ್ನು ಬಹಿರಂಗಪಡಿಸದೆಯೇ ಅವರು ಹಣ ಮತ್ತು ಉಡುಗೊರೆಗಳನ್ನು ನೀಡುತ್ತ ಸೀಕ್ರೆಟ್ ಸಂತ ಆಗಿದ್ದರು. ಸಮಯ ಕಳೆದಂತೆ ಅವರು ಧರಿಸುತ್ತಿದ್ದ ದಿರಿಸು ಸಾಂತಾಕ್ಲಾಸ್ ರೂಪದಲ್ಲಿ ಮಾರ್ಪಟ್ಟಿತು. ಮೈರಾದ ಬಿಷಪ್ ಇವರಾಗಿದ್ದರು. ಮೈರಾ ಈಗ ಆಧುನಿಕ ಟರ್ಕಿಯಲ್ಲಿದೆ.
ಅಲ್ಲದೇ ಈ ಹಬ್ಬದ ವೇಳೆೆ ಹಿರಿಯರನ್ನು, ಅಶಕ್ತರನ್ನು, ರೋಗಿಗಳನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಸಹಾಯ ಮಾಡುವುದು ವಾಡಿಕೆ.
ಹೀಗೆ ಕ್ರಿಸ್​ವುಸ್ ಆಚರಣೆಯಲ್ಲಿರುವ ಸಂಕೇತಗಳು ವಿಶೇಷವಾಗಿ ಮೊಂಬತ್ತಿ ಬೆಳಗುವಲ್ಲಿ ಇರುವ ಕಾಳಜಿ, ಬಡವರಿಗೆ, ಅಶಕ್ತರಿಗೆ ನೆರವಾಗುವುದು ಇತ್ಯಾದಿ ಮನುಕುಲದ ಸದ್ವಿಚಾರಗಳನ್ನು ಪ್ರತಿನಿಧಿಸುತ್ತವೆ. ಎಲ್ಲರೂ ಉತ್ತಮ ಪರೋಪಕಾರಿಗಳಾಗಿರಬೇಕು ಎನ್ನುವುದು ಕ್ರಿಸ್​ವುಸ್ ಸಂದೇಶವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು.
(ಲೇಖಕರು, ಹಾಸ್ಮಾಟ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು)
ಚಾಲಕನಿಗೆ 33 ಕೋಟಿ ರೂ. ಬಂಪರ್ ಬಹುಮಾನ; ನಂಬೋಕೇ ಆಗ್ತಿಲ್ಲ ಅಂದವ ‘ಟ್ರಸ್ಟ್’ ಮಾಡ್ತೇನೆ ಎಂದ!

ಶೂಟಿಂಗ್​ ಸೆಟ್​​ನಲ್ಲೇ ನೇಣು ಹಾಕಿಕೊಂಡು ಪ್ರಾಣ ಕಳ್ಕೊಂಡ ನಟಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 14 =
Remember me
