| ಪಂಡಿತ್ ವಿಠಲ ಭಟ್ನವರಾತ್ರಿಯ ಎರಡನೇ ದಿನ ದೇವಿಯ ಆರಾಧನೆ ಸ್ವರೂಪ ಬ್ರಹ್ಮಚಾರಿಣಿ ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ (ಬಿದಿಗೆ) ತಿಥಿಯಂದು ಬ್ರಹ್ಮಚಾರಿಣಿ ಸ್ವರೂಪಳಾದ ದುರ್ಗಾ ಆರಾಧನೆಯನ್ನು ಮಾಡಬೇಕು. ರಂಗೋಲಿಯಲ್ಲಿ ಅಷ್ಟ ದಳ ವನ್ನು ಬಿಡಿಸಿ, ಕಲಶ ಸ್ಥಾಪನೆ ಮಾಡಿ, ಆ ಕಲಶದಲ್ಲಿ ಈ ಕೆಳಗಿನ ಶ್ಲೋಕದೊಂದಿಗೆ ಬ್ರಹ್ಮಚಾರಿಣಿ ದೇವಿಯನ್ನು ಧ್ಯಾನಿಸಬೇಕು.
ಹಂಸಾರೂಢಾಂ ಶುಕ್ಲ ವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ
ಚತುರ್ಭಜಾಂ ಸೃಕ್​ಸ್ರುವೌ ಚ ಕಮಂಡಲ್ವಕ್ಷಮಾಲಿಕಾಂ
ಬಿಭ್ರಿತೀಂ ಪೂಜಯೇದ್ದೇವೀಂ ದ್ವಿತೀಯಾಯಾಂ ಸದಾನೃಪ
ಬ್ರಹ್ಮಚಾರಿಣಿ ದೇವಿಯ ಸ್ವರೂಪದಲ್ಲಿ ಆ ತಾಯಿ ಹಂಸವಾಹಿನಿಯಾಗಿ, ಬಿಳಿಯ ಬಣ್ಣದಲ್ಲಿ ಶೋಭಿಸುತ್ತಾ, ಬಿಳಿಯ ಬಣ್ಣದ ಹೂವಿನ ಮಾಲೆಗಳಿಂದ ಅಲಂಕೃತಳಾಗಿರುತ್ತಾಳೆ. ನಾಲ್ಕು ತೋಳುಗಳಲ್ಲಿ ಯಜ್ಞಕ್ಕೆ ಅವಶ್ಯವಾದ ಸೃಕ್ ಹಾಗೂ ಸೃವ, ಮತ್ತೊಂದರಲ್ಲಿ ಕಮಂಡಲ ಹಿಡಿದರೆ, ಇನ್ನೊಂದರಲ್ಲಿ ಜಪಮಾಲೆ ಇರುತ್ತದೆ. ಆದ್ದರಿಂದ ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ ಬಿಳಿಯ ಬಣ್ಣದ ಹೂವುಗಳನ್ನು ಬಳಸುವುದು ಶ್ರೇಷ್ಠ.
ಈ ದೇವಿಯು ತನ್ನ ಪೂರ್ವ ಜನ್ಮದಲ್ಲಿ ಪರ್ವತ ರಾಜನ ಮನೆಯಲ್ಲಿ ಹುಟ್ಟಿರುತ್ತಾಳೆ. ನಾರದರು ಉಪದೇಶ ಮಾಡಿದಂತೆ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯುವುದಕ್ಕೆ ತಪಸ್ಸು ಮಾಡುತ್ತಾಳೆ. ಒಂದು ಸಾವಿರ ವರ್ಷಗಳ ಕಾಲ ದೇವಿಯು ಹಣ್ಣು- ಎಲೆಗಳನ್ನು ತಿಂದು ಜೀವಿಸುತ್ತಾಳೆ. ಆ ನಂತರ ಒಂದು ಸಾವಿರ ವರ್ಷ ಕೇವಲ ನೆಲದ ಮೇಲೆ ಬಿದ್ದ ಒಣಗಿದ ಬಿಲ್ವಪತ್ರೆಗಳನ್ನು ಮಾತ್ರ ಸೇವಿಸುತ್ತಾಳೆ. ಅದಾದ ಮೇಲೆ ಅವುಗಳನ್ನು ಸಹ ಸೇವಿಸುವುದನ್ನು ನಿಲ್ಲಿಸುತ್ತಾಳೆ. ಹೀಗೆ ಸಾವಿರಾರು ವರ್ಷ ಆಹಾರವನ್ನೂ ಸೇವಿಸದೆ ತಪಸ್ಸು ಮಾಡಿದ ದೇವಿಯು ಎಲೆಗಳನ್ನು ಸಹ ಸೇವಿಸುವುದನ್ನು ನಿಲ್ಲಿಸಿದ್ದರಿಂದ ಆ ತಾಯಿಗೆ ಅಪರ್ಣಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಎಲ್ಲ ದೇವತೆಗಳ ಶಕ್ತಿ ಸಮೀಕರಣದಿಂದ ಪ್ರಕಟಗೊಂಡ ಸ್ತ್ರೀ ಸ್ವರೂಪ ದಿವ್ಯ ಚೈತನ್ಯಕ್ಕೆ ಪರಮೇಶ್ವರ ತನ್ನ ಕೈಯಲ್ಲಿ ಇದ್ದ ತ್ರಿಶೂಲ ಕೊಟ್ಟರೆ, ಮಹಾವಿಷ್ಣು ತನ್ನ ಆಯುಧವಾದ ಚಕ್ರವನ್ನು ನೀಡುತ್ತಾನೆ. ವರುಣ ಶಂಖವನ್ನು ಕೊಡುತ್ತಾನೆ. ಅಗ್ನಿಯು ಈಟಿಯಂತೆ ಇರುವ ಆಯುಧವನ್ನು ಕೊಡುತ್ತಾನೆ. ವಾಯು ಬಿಲ್ಲನ್ನು ಹಾಗೂ ಎರಡು ಬತ್ತಳಿಕೆ ತುಂಬ ಬಾಣಗಳನ್ನು ನೀಡುತ್ತಾನೆ. ದೇವತೆಗಳ ಒಡೆಯ ಇಂದ್ರ ತನ್ನ ವಜ್ರಾಯುಧ ಹಾಗೂ ತನ್ನ ಬಳಿ ಇರುವ ಐರಾವತದ ಕುತ್ತಿಗೆಯಲ್ಲಿ ಇದ್ದ ಗಂಟೆ ಜಪಮಾಲೆ ಹಾಗೂ ಅಭಿಮಂತ್ರಿತ ಜಲ ತುಂಬಿದ ಕಮಂಡಲ ನೀಡುತ್ತಾನೆ. ಸೂರ್ಯ ತನ್ನ ಕಿರಣಗಳನ್ನು ನೀಡಿದರೆ, ಕಾಲನು ಖಡ್ಗವನ್ನು ಕೊಡುತ್ತಾನೆ. ಕ್ಷೀರ ಸಾಗರವು ಆಭರಣಗಳನ್ನು ಕೊಟ್ಟರೆ, ವಿಶ್ವಕರ್ಮನು ಕೊಡಲಿಯನ್ನು ನೀಡುತ್ತಾನೆ.
ಹಿಮವಂತ ಪರ್ವತವು ವಾಹನವಾಗಿ ಸಿಂಹವನ್ನು, ಕುಬೇರ, ಸರ್ಪರಾಜ ಇತ್ಯಾದಿ ದೇವತೆಗಳು ನಾನಾ ವಿಧವಾದ ಆಭರಣಗಳನ್ನು, ಆಯುಧಗಳನ್ನು ನೀಡಿದರು. ಹೀಗೆ ಎಲ್ಲ ದೇವತೆಗಳ ಶಕ್ತಿಗಳಿಂದ ಆವಿರ್ಭವಿಸಿದ ಆ ದೇವತೆ ಸಿಂಹಾರೂಢಳಾಗಿ ಸರ್ವಾಭರಣ ಭೂಷಿತಳಾಗಿ ಸಕಲ ಶಸ್ತ್ರಾಸ್ತ್ರಗಳಿಂದ ಕೂಡಿ, ಜೋರಾಗಿ ನುಗ್ಗುತ್ತಾ ಭೀಕರವಾಗಿ ಗರ್ಜಿಸಲು ಪ್ರಾರಂಭಿಸುತ್ತಾಳೆ. ಆ ಭಯಂಕರವಾದ ಶಬ್ದಕ್ಕೆ ಸಕಲ ಲೋಕಗಳೂ ಕಂಪಿಸುತ್ತವೆ. ಸಪ್ತ ಸಾಗರಗಳೂ ನಡುಗುತ್ತವೆ. ಪರ್ವತಗಳು ಬಿರುಕು ಬಿಡುತ್ತವೆ. ಆ ದೇವಜಾತೆ ಸಿಂಹವಾಹಿನಿಗೆ ದೇವತೆಗಳೆಲ್ಲಾ ಜಯಘೊಷ ಕೂಗುತ್ತಾರೆ. ಹೀಗೆ ಆವಿರ್ಭವಿಸುವ ದೇವಿಯನ್ನು ನಾವು ಕಲಶದಲ್ಲಿ ಆವಾಹನೆ ಮಾಡಿ, ಶ್ರದ್ಧೆಯಿಂದ ಪೂಜಿಸಬೇಕು. ಪೂಜೆಯಲ್ಲಿ ಸುಗಂಧಭರಿತ ಶ್ವೇತ ಪುಷ್ಪಗಳಿಗೆ ಆದ್ಯತೆ. ಈ ಸ್ವರೂಪದಲ್ಲಿ ಆ ಭಗವತಿಯ ಆರಾಧನೆಯಿಂದ ಸಿಗುವ ಪ್ರಮುಖವಾದ ಫಲ ಎಂದರೆ, ಅಶಕ್ತರು ಸಶಕ್ತರಾಗುತ್ತಾರೆ. ಯಾರ ಸಹಾಯವೂ ದೊರೆಯದೆ ಜೀವನದಲ್ಲಿ ಕಷ್ಟ ಪಡುತ್ತ ಇರುವವರಿಗೆ ಈ ದೇವಜಾತಾ ಸ್ವರೂಪಿಣಿಯ ಆರಾಧನೆಯಿಂದ ಅನಿರೀಕ್ಷಿತ ಸಹಾಯಗಳು ಲಭಿಸುತ್ತವೆ. ಇನ್ನು ಬೆಳಗ್ಗೆ ಪೂಜೆಯ ನಂತರ ಸಂಧ್ಯಾ ಸಮಯದಲ್ಲಿ ಮುತೆôದೆಯರಿಗೆ ಅರಿಶಿನ- ಕುಂಕುಮವನ್ನು ಅಥವಾ ಬಾಗಿನವನ್ನು ಕೊಡುವುದರಿಂದ ಪೂರ್ಣಫಲ ಸಿಗುತ್ತದೆ.
ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − five =
Remember me
