ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಸರ್ಕಾರಿ ಸ್ವಾಮ್ಯದ, ರಕ್ಷಣಾ ಉತ್ಪನ್ನಗಳ ಉತ್ಪಾದಕ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್​ನ (ಎಲ್​ಸಿಎಚ್) ಮೊದಲ ಬ್ಯಾಚ್ ಈಚೆಗಷ್ಟೇ ವಾಯುಪಡೆಗೆ ಸೇರ್ಪಡೆಯಾಗಿದೆ. ಈ ದೇಶೀಯ ಸಾಧನೆ ಹೆಮ್ಮೆಯ ಸಂಗತಿಯೇ ಆದರೂ ರಫ್ತು ಮಾರುಕಟ್ಟೆಯಲ್ಲಿ ಎಚ್​ಎಎಲ್ ಹೇಳಿಕೊಳ್ಳುವಂತಹ ಸ್ಥಾನವನ್ನೇನೂ ಗಳಿಸಿಲ್ಲ. ಮುಂದಿನ ದಿನಗಳಲ್ಲಿ ರಫ್ತು ವಲಯದಲ್ಲಿ ಸಾಧನೆ ಮಾಡುವ ನಿರೀಕ್ಷೆಗಳನ್ನು ಹೊಂದಿದೆ.
2013ರಿಂದ 2,040ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳ ಅರ್ಜಿಗಳನ್ನು ಸಲ್ಲಿಸಿರುವುದಾಗಿಯೂ, 640ಕ್ಕೂ ಹೆಚ್ಚು ಪೇಟೆಂಟ್​ಗಳು, ಕೈಗಾರಿಕಾ ವಿನ್ಯಾಸ, ಹಕ್ಕುಸ್ವಾಮ್ಯ ಮತ್ತು ಟ್ರೇಡ್​ವಾರ್ಕ್​ಗಳನ್ನು ಸಂಪಾದಿಸಿರುವುದಾಗಿಯೂ ಎಚ್​ಎಎಲ್ ತಿಳಿಸಿದೆ.
ಎಚ್​ಎಎಲ್ ಪಡೆದುಕೊಂಡಿರುವ ಪೇಟೆಂಟ್​ಗಳು ಅದು ಅಭಿವೃದ್ಧಿಪಡಿಸಿರುವ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಇದರಲ್ಲಿ ತಾಂತ್ರಿಕತೆ, ಉತ್ಪನ್ನಗಳು, ಸಾಫ್ಟ್​ವೇರ್​ಗಳು, ದೇಶೀಯವಾಗಿ ನಿರ್ವಿುಸಿರುವ ವಿಮಾನಗಳು ಹಾಗೂ ಹೆಲಿಕಾಪ್ಟರ್​ಗಳು ಎಚ್​ಎಎಲ್ ಆದಾಯದ ಮುಖ್ಯ ಮೂಲಗಳಾಗಿವೆ.
ಭಾರತ ಸರ್ಕಾರದ ‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದ ಅಡಿಯಲ್ಲಿ, ದೇಶೀಯ ನಿರ್ವಣದ ಯೋಜನೆಗಳಾದ ಲಘು ಯುದ್ಧ ವಿಮಾನ(ಎಲ್​ಸಿಎ), ಲಘು ಯುದ್ಧ ಹೆಲಿಕಾಪ್ಟರ್ (ಎಲ್​ಸಿಎಚ್), ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಹಾಗೂ ಎಚ್​ಟಿಟಿ-40 ಗಳ ನಿರ್ವಣದ ಮೂಲಕ ಎಚ್​ಎಎಲ್ ಖಾಸಗಿ ಸಂಸ್ಥೆಗಳ ಜೊತೆ ಕಾರ್ಯ ನಿರ್ವಹಿಸಿ, ಉಪಕರಣಗಳ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.
ಎಚ್​ಎಎಲ್ ಫ್ಲೈಟ್ ಕಂಟ್ರೋಲ್ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸಿದೆ. ಇದನ್ನು ಮುಂದಿನ ದೇಶೀಯ ನಿರ್ವಣದ ಯುದ್ಧ ವಿಮಾನಗಳಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಭಾರತದ ಬಳಿ ಇನ್ನೂ ‘ಬಿಯಾಂಡ್ ವಿಷುವಲ್ ರೇಂಜ್’ ಯುದ್ಧ ಕ್ಷಿಪಣಿ ವ್ಯವಸ್ಥೆ ಲಭ್ಯವಿಲ್ಲ. ಆದ್ದರಿಂದ ಎಲ್​ಸಿಎಗಳಲ್ಲಿ ಫ್ರೆಂಚ್ ಕ್ಷಿಪಣಿಗಳನ್ನು ಅಳವಡಿಸುವುದು ಸೂಕ್ತ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಎಚ್​ಎಎಲ್​ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ ಆಂಡ್ ಡಿ) ನೀಡಿರುವ ಮಾಹಿತಿಗಳ ಪ್ರಕಾರ, ಸಂಸ್ಥೆ ಪಡೆದಿರುವ ಪೇಟೆಂಟ್​ಗಳಲ್ಲಿ ಸ್ವಯಂಚಾಲಿತ ತಾಪಮಾನ ಕಂಟ್ರೋಲರ್ ಹಾಗೂ ವಾಟರ್ ಡ್ರೇಯ್ನ ವಾಲ್ವ್, ಇಂಜಿನ್ ಕಂಟ್ರೋಲ್ ಆಂಪ್ಲಿಫೈಯರ್ ಪರೀಕ್ಷೆ ನಡೆಸಲು ಹಾಗೂ ಟ್ಯೂನಿಂಗ್ ನಡೆಸಲು ಬೇಕಾದ ಇಂಜಿನ್ ರೆಸ್ಪಾನ್ಸ್ ಮಾದರಿ ಹಾಗೂ ಕಾಕ್​ಪಿಟ್ ಸಿಮ್ಯುಲೇಶನ್, ಏವಿಯಾನಿಕ್ ವ್ಯವಸ್ಥೆಗಳಿಗೆ ಬೇಕಾದ ಆನ್​ಲೈನ್ ಸೆನ್ಸರ್ ಡೇಟಾ ನಿರ್ವಹಣೆಗಳೂ ಸೇರಿವೆ. ಎಚ್​ಎಎಲ್ ಪೇಟೆಂಟ್ ಪಡೆದಿರುವ ಏರ್ ಟರ್ಬೆನ್ ವೀಲ್ ಅನ್ನು ಹಾಕ್ ಯುದ್ಧ ವಿಮಾನದಲ್ಲಿ ಅಳವಡಿಸಲಾಗುವುದರಿಂದ, ವಿದೇಶಿ ವಿನಿಮಯ ಗಳಿಸಲೂ ಸಹಕಾರಿಯಾಗುತ್ತದೆ.
ಎಚ್​ಎಎಲ್ ಪ್ರಸ್ತುತ ಪಡೆದಿರುವ ಆರ್ಡರ್​ಗಳ ಮೌಲ್ಯ ಹತ್ತು ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅದರೊಡನೆ, ರಿಪೇರಿ ಹಾಗೂ ನಿರ್ವಹಣೆಗಳ ಮೂಲಕ, 2023ರ ಹಣಕಾಸು ವರ್ಷದಲ್ಲಿ ಭಾರತ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ 1.6 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ. ಮಲೇಷ್ಯಾದಲ್ಲಿ ಕಚೇರಿಯನ್ನು ಆರಂಭಿಸುವುದಾಗಿ ಎಚ್​ಎಎಲ್ ಇತ್ತೀಚೆಗೆ ಘೊಷಿಸಿದೆ. ಈ ಕಚೇರಿಯು ರಾಯಲ್ ಮಲೇಷ್ಯನ್ ಏರ್​ಫೋರ್ಸ್​ಗೆ 18 ಲೀಡ್ ಇನ್ ಫೈಟರ್ ಟ್ರೇನರ್ಸ್ ಹಾಗೂ ಸಾಗಾಟದ ವ್ಯವಸ್ಥೆಗಳನ್ನು ಒದಗಿಸುವ ಕುರಿತು ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಸು-30 ಎಂಕೆಎಂ ಹಾಗೂ ಹಾಕ್ ಯುದ್ಧ ವಿಮಾನಗಳ ಮೇಲ್ದರ್ಜೆಗೇರಿಸುವಿಕೆಯೂ ಸೇರಿವೆ.
ಈ ವರ್ಷದ ಆರಂಭದಲ್ಲಿ, ಭಾರತವು ಫಿಲಿಪ್ಪೀನ್ಸ್ ಜೊತೆ ಮೊದಲ ಪ್ರಮುಖ ರಫ್ತು ಒಪ್ಪಂದಕ್ಕೆ ಸಹಿ ಹಾಕಿದೆ. 375 ಮಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದದಲ್ಲಿ ಭಾರತ ಫಿಲಿಪ್ಪೀನ್ಸ್​ಗೆ ಬ್ರಹ್ಮೋಸ್ ಆಧಾರಿತ ಆಂಟಿಶಿಪ್ ಕ್ಷಿಪಣಿ ವ್ಯವಸ್ಥೆಗಳನ್ನು ಪೂರೈಸಲಿದೆ.
ಆದರೆ, ಎಚ್​ಎಎಲ್​ನ ಯುದ್ಧ ವಿಮಾನಗಳ ಹಾಗೂ ಹೆಲಿಕಾಪ್ಟರ್​ಗಳ ರಫ್ತು ಶೈಶವಾವಸ್ಥೆಯಲ್ಲೇ ಇದ್ದು ರಫ್ತು ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಈಚೆಗೆ ಈಜಿಪ್ಟ್​ಗೆ ಭೇಟಿ ನೀಡಿದ್ದರು. ಈಜಿಪ್ಟ್ ಪ್ರಸ್ತುತ ಭಾರತದಿಂದ 70 ಲಘು ಯುದ್ಧ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ. ಭಾರತವು ಅಲ್ಲಿ ಎಲ್​ಸಿಎ ಉತ್ಪಾದನಾ ಘಟಕ ಆರಂಭಿಸುವ ಭರವಸೆ ನೀಡಿದೆ. ಇನ್ನೊಂದೆಡೆ, ಧ್ರುವ ಹಾಗೂ ಎಲ್​ಸಿಎಚ್​ಗಳನ್ನು ಭಾರತವು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುತ್ತಿದೆ. ಎಚ್​ಎಎಲ್​ನ ರಫ್ತು ಉದ್ದೇಶಗಳಿಗೆ ಇರುವ ಪ್ರಮುಖ ತೊಡಕೆಂದರೆ-ಭಾರತವು ಯುದ್ಧ ವಿಮಾನಗಳ ಇಂಜಿನ್​ಗಳನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ಭಾರತ ಯುದ್ಧ ವಿಮಾನಗಳ ಮಾರಾಟ ಮತ್ತು ನಿರ್ವಹಣೆಗಾಗಿ ಓಇಎಂ (ಮೂಲ ಸಾಧನ ತಯಾರಕರು) ಅನುಮತಿಯ ಮೇಲೆ ಅವಲಂಬಿತವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 2 =
Remember me
