ಕ್ರಿ.ಶ. 1120ರಿಂದ 1130ರ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಡಿವಾಳ ಮಾಚಯ್ಯ ಜನಿಸಿದರು. ಪರ್ವತಯ್ಯ ಹಾಗೂ ಸುಜ್ಞಾನಾಂಬೆ ದಂಪತಿಗೆ ಜನಿಸಿದರು. ಕುಲದೈವ ಕಲಿದೇವರನ್ನು ಆರಾಧಿಸಿ ಸ್ಪೂರ್ತಿಯ ಸೆಲೆಯಾದರು. ಜಗದ್ಗುರು ಬಸವಣ್ಣ ಅವರಿಗಿಂತ ಮಡಿವಾಳ ಮಾಚಯ್ಯ ವಯಸ್ಸಿನಲ್ಲಿ ಹಿರಿಯರು. ವಚನಾಂಕಿತದಲ್ಲಿಯೂ ಈ ದೇವರ ಹೆಸರನ್ನು ಬಳಸಿಕೊಂಡಿದ್ದರು. ಇಂದಿಗೂ ಹಿಪ್ಪರಗಿಯಲ್ಲಿ ಕಲಿದೇವರ ಗುಡಿ ಇದೆ. ಪಾಲಕರ ವೃತ್ತಿಯನ್ನೇ ಮಡಿವಾಳ ಮಾಚಯ್ಯ ಅನುಸರಿಸಿದರು. ಶಕ್ತಿಶಾಲಿ ಆಜಾನುಬಾಹು ದೇಹ ಮತ್ತು ಮುಖದಲ್ಲಿ ದೈವ ತೇಜಸ್ಸು ಹೊಂದಿದ್ದರು. ‘ಮಲ್ಲಿಗವ್ವ’ ಎಂಬುವರನ್ನು ವಿವಾಹವಾದರು.
ಅಂದಿನ ಕಾಲದಲ್ಲಿ ಮಾಚಯ್ಯಯವರಿಗೆ ವಿದ್ಯೆ ಕಲಿಯಲು ಅವಕಾಶ ಸಿಗಲಿಲ್ಲ. ಮಲ್ಲಿಕಾರ್ಜುನ ಸ್ವಾಮೀಜಿ ಎಂಬುವರು ದಿವ್ಯ ವ್ಯಕ್ತಿತ್ವ, ಭಕ್ತಿ, ಶ್ರದ್ಧೆ ಗಮನಿಸಿ ಮಾಚಯ್ಯ ಅವರಿಗೆ ವಿದ್ಯೆ ಮತ್ತು ವೇದಶಾಸ್ತ್ರ ಕಲಿಸಿದರು. ಶಿಷ್ಯನ ಮಹಿಮೆ ತಿಳಿದ ಗುರುಗಳು ದೀಕ್ಷೆ ನೀಡಿ ಕ್ರಾಂತಿಗೆ ನಾಂದಿ ಹಾಡಿದರು. ಬಸವಣ್ಣ ನೇತೃತ್ವದಲ್ಲಿ ಶರಣರ ಆಂದೋಲನ ಪ್ರಾರಂಭವಾಗಿತ್ತು. ಬಸವಣ್ಣನವರ ಭಕ್ತಿ, ಕಾಯಕ ತತ್ವ, ದಾಸೋಹ, ಗುರುಲಿಂಗ ಮತ್ತು ಜಂಗಮ ಸೇವೆಗಳು ಎಲ್ಲ ಕಡೆಗೂ ಪ್ರಖ್ಯಾತವಾಗಿದ್ದವು. ಈ ವಿಚಾರ ತಿಳಿದು ಮಾಚಯ್ಯ, ಕಲಿದೇವರ ಗುರುಗಳ ಅಪ್ಪಣೆ ಪಡೆದು ಕಲ್ಯಾಣದೆಡೆಗೆ ಸಾಗಿದರು. ಕಲ್ಯಾಣಕ್ಕೆ ಬಂದ ಮೇಲೆ ಮಾಚಿದೇವ ಕಾಯಕವನ್ನು ಮುಂದುವರಿಸಿದರು. ಮೊದಲಿನಿಂದಲೂ ಸೂರ್ಯ ಹುಟ್ಟುವ ಮುನ್ನ ಎದ್ದು ತಮ್ಮ ಕಾರ್ಯ ಆರಂಭಿಸುತ್ತಿದ್ದರು. ಶುದ್ಧ ಶಿವಭಕ್ತರ ಕಾಯಕದಲ್ಲಿ ನಿಷ್ಠೆ ಉಳ್ಳವರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದರು. ಸೋಮಾರಿಗಳ, ಪರಾವಲಂಬಿಗಳ ಬಟ್ಟೆಗಳನ್ನು ಎಂದಿಗೂ ಮುಟ್ಟುತ್ತಿರಲಿಲ್ಲ. ಮಡಿಗೊಳಿಸಿದ ಬಟ್ಟೆಯನ್ನು ಯಾರೂ ಅಪವಿತ್ರ ಗೊಳಿಸಬಾರದೆಂದು ದಾರಿಯಲ್ಲಿ ಬರುವಾಗ ಗಂಟೆ ಬಾರಿಸುತ್ತಾ ಬರುತ್ತಿದ್ದರು. ಹೀಗಾಗಿ, ‘ವೀರಗಂಟೆ ಮಾಚಯ್ಯ’ ಎಂಬ ಹೆಸರು ಬಂತು.
ಶರಣರ ಸಂಪರ್ಕದಿಂದ ಮಹಾಪುರುಷ:ಮಡಿವಾಳ ಕುಲದಲ್ಲಿ ಹುಟ್ಟಿದ್ದರೂ ಮಾಚಯ್ಯ ಉತ್ತಮ ಶಿಕ್ಷಣ ಮತ್ತು ಶರಣರ ಸಂಪರ್ಕದಿಂದ ಮಹಾಪುರುಷರಾದರು. ಕಲ್ಯಾಣ ಕ್ರಾಂತಿಯ ಇತಿಹಾಸದಲ್ಲಿ ಮಾಚಯ್ಯ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಜ್ಞಾನಜ್ಯೋತಿಯಿಂದ ಲೋಕವನ್ನು ಬೆಳಗಿಸಿದ ಮಾಚಯ್ಯ ‘ನುಡಿದಂತೆ ನಡೆದ, ನಡೆದಂತೆ ನುಡಿದ’ ಶರಣರಲ್ಲಿ ಒಬ್ಬರು. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅಧಿಕಾರವಿದೆ ಎಂದು ತಿಳಿಸಿ ಸರ್ವರಿಗೂ ಆಧ್ಯಾತ್ಮಿಕ ಉನ್ನತಿ ಪಡೆಯುವಂತೆ ಪ್ರೋತ್ಸಾಹಿಸಿದರು. ಎಲ್ಲ ಶರಣರು ಮಾಚಯ್ಯನನ್ನು ‘ಮಾಚಿ ತಂದೆ’ ಎಂದು ಕರೆದಿದ್ದಾರೆ. ‘ಅನುಭವ ಮಂಟಪ’ ನಿರ್ವಣದ ಕಾರ್ಯದಲ್ಲಿ ಮಾಚಯ್ಯನವರ ಪಾತ್ರ ದೊಡ್ಡದು. ಮಾರ್ವಿುಕ ವಚನಗಳನ್ನು ರಚಿಸಿ ಕೊಡುಗೆ ನೀಡಿದ್ದಾರೆ.
ಉದ್ಯಾನನಗರಿಯಲ್ಲಿ ಇಂದು ಕಾರ್ಯಕ್ರಮ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಬುಧವಾರ (ಫೆ.1) ಬೆಳಗ್ಗೆ 11 ಗಂಟೆಗೆ ನಯನ ಸಭಾಂಗಣದಲ್ಲಿ ‘ಮಡಿವಾಳ ಮಾಚಿದೇವ ಜಯಂತಿ’ ಕಾರ್ಯಕ್ರಮ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆಂಗೇರಿಯ ಗುರುಪೀಠದ ಶ್ರೀ ಮಾಚಿದೇವ ಶಿವಾನಂದ ಯೋಗಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಶಾಸಕ ಉದಯ್ ಬಿ. ಗರುಡಾಚಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಡಾ. ಸಿ.ಎನ್.ಅಶ್ವತ್ಥನಾರಾಯಣ, ಭೈರತಿ ಬಸವರಾಜ, ಎಸ್.ಟಿ ಸೋಮಶೇಖರ್, ಕೆ.ಗೋಪಾಲಯ್ಯ, ಮುನಿರತ್ನ ಮುಂತಾದವರು ಭಾಗವಹಿಸುವರು.
ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ
ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
