|ಬಿ.ಆರ್.ಶ್ರೀಕಂಠಯ್ಯ
ಸೂರ್ಯನು ಪ್ರತ್ಯಕ್ಷ ದೈವ. ಇಡೀ ಪ್ರಪಂಚದ ಕಣ್ಣು. ನವಗ್ರಹಗಳ ರಾಜ. ಈತನ ವಾಹನ ಸಪ್ತ ಅಶ್ವಗಳು ಮತ್ತು ಸಾರತಿ ಅರುಣ. ನವಗ್ರಹಗಳ ಪೂಜೆ ಮಾಡುವಾಗ, ಈತನ ಧಾನ್ಯ ಗೋದಿ ಮತ್ತು ಸ್ಥಾನ ಎಲ್ಲ ಗ್ರಹಗಳ ಮಧ್ಯದಲ್ಲಿ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದಕ್ಕೆ ಸಂಕ್ರಮಣ ಎಂದು ಹೇಳುತ್ತಾರೆ. ಮಕರ ರಾಶಿಗೆ ಬರುವ ದಿನವನ್ನು ಮಕರ ಸಂಕ್ರಮಣ ಎಂದು ಕರೆಯುತ್ತಾರೆ. ಇಲ್ಲಿಂದ ಉತ್ತರಕ್ಕೆ ಪಯಣ, ಈ ಕಾಲವನ್ನು ಉತ್ತರಾಯಣ ಎಂದು ಕರೆಯುತ್ತಾರೆ.
ದೇವತೆಗಳಿಗೆ ಉತ್ತರಾಯಣ ಹಗಲು ಮತ್ತು ದಕ್ಷಿಣಾಯನ ರಾತ್ರಿ. ಉತ್ತರಾಯಣ, ಪೂಜಾವಿಧಿಗಳಿಗೆ ಶೇಷ್ಠ. ದೇವತಾಕಾರ್ಯ, ಉಪನಯನ, ವಿವಾಹ ಮತ್ತು ಎಲ್ಲ ಮಂಗಳಕಾರ್ಯಗಳಿಗೆ ಶುಭಕರ. ಆದರೆ, ಸಂಕ್ರಮಣದ ದಿನ ಮಾತ್ರ ವಜ್ಯ. ದಕ್ಷಿಣಾಯನ, ಪಿತೃದೇವತೆಗಳ ಕಾರ್ಯಕ್ಕೆ ಮೀಸಲು. ಉತ್ತರಾಯಣ ಪುಣ್ಯ ಕಾಲವನ್ನು ವಿವಿಧ ರೀತಿಯಲ್ಲಿ ಆಯಾಯ ಪ್ರದೇಶಗಳ ಅನುಸರಣೆಯಂತೆ ಕರೆಯುತ್ತಾರೆ. ಮಕರ ಸಂಕ್ರಾಂತಿ, ಪೊಂಗಲ್, ಎಳ್ಳು ಬೀರುವ ಹಬ್ಬ ಇತ್ಯಾದಿ. ಪೊಂಗಲ್ ಹಬ್ಬವನ್ನು ತಮಿಳುನಾಡಿನಲ್ಲಿ ಬಹಳ ವಿಶೇಷವಾಗಿ ಆಚರಿಸುತ್ತಾರೆ.
ಪುಷ್ಯ ಮಾಸ ಅಷ್ಟಮಿ ದಿನ ಸೂರ್ಯನು ಮಕರರಾಶಿಗೆ ಪ್ರವೇಶಿಸುತ್ತಾನೆ (15.01.2023). ಸಂಕ್ರಾಂತಿಯ ಹಿಂದಿನ ದಿನಕ್ಕೆ ಭೋಗಿಹಬ್ಬ ಎಂದು ಕರೆಯುತ್ತಾರೆ. ನವಮಿಯಂದು ಉತ್ತರಾಯಣ ಪುಣ್ಯಕಾಲ, ಈ ದಿನ ಸಂಕ್ರಾಂತಿ ಹಬ್ಬ ಮತ್ತು ಸಂಕ್ರಮಣ ಪರ್ವಕಾಲದಲ್ಲಿ ತಿಲ ತರ್ಪಣಗಳನ್ನು ಕೊಡುತ್ತಾರೆ. ಈ ಪಿತೃ ತರ್ಪಣಗಳನ್ನು ಗ್ರಹಣಕಾಲದಲ್ಲಿ, ಅಮಾವಾಸ್ಯೆ ಮತ್ತು ಮಹಾಲಯ ಪಕ್ಷದಲ್ಲಿ ಕೊಡುವ ಸಂಪ್ರದಾಯಗಳು ರೂಢಿಯಲ್ಲಿದೆ. ಹೇಳುವ ಸಂಕಲ್ಪಗಳು ಮಾತ್ರ ಬೇರೆಯಾಗಿರುತ್ತದೆ. ಹಬ್ಬದ ಮುಂದಿನ ದಿನ ಕನೂಹಬ್ಬ ಎಂದು ಕೆಲವು ಕಡೆ ಆಚರಿಸುತ್ತಾರೆ. ಇದನ್ನು ವಿಶೇಷವಾಗಿ ಆಚರಿಸಿ ಭೂತ ತೃಪ್ತಿಗಾಗಿ ಭಕ್ಷ್ಯಗಳನ್ನು ಮಾಡಿ ಎಲೆಹಾಕಿ ಆಹಾರವನ್ನು ಸಮರ್ಪಿಸುತ್ತಾರೆ ಎಂದು ತಿಳಿದುಬರುತ್ತದೆ. ಮನೆ ಮುಂದೆ ಬೆಂಕಿ ಹಾಕಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಅದರದೇ ಆದ ಕಾರಣಗಳಿರಬಹುದು.
ಸಂಕ್ರಾಂತಿಯ ದಿನ, ಅವರವರ ಸಂಪ್ರದಾಯದಂತೆ ದೇವರಿಗೆ ಅಭಿಷೇಕ, ಪೂಜೆ ಮಾಡಿ, ಎಳ್ಳಿನ ಮಿಶ್ರಣವನ್ನು (ಹುರಿದ ಬಿಳಿಎಳ್ಳು, ಕಡೆಲೆಬೀಜದ ಪೊಪ್ಪು, ಕಡಲೆಪೊಪ್ಪು, ಬೆಲ್ಲ, ಒಣಕೊಬ್ಬರಿ), ಕಬ್ಬು ಮತ್ತು ಸಕ್ಕರೆಯಿಂದ ಮಾಡಿದ ವಿವಿಧ ಆಕೃತಿಯ ಅಚ್ಚುಗಳನ್ನು ಮಾಡಿ ನಿವೇದನ ಮಾಡುತ್ತಾರೆ. ಹಾಗೆ ಪೊಂಗಲ್ ಅನ್ನು ನಿವೇದನೆ ಮಾಡುತ್ತಾರೆ. ಹುರಿದ ಬೆಲ್ಲ, ತುಪ್ಪ, ದ್ರಾಕ್ಷಿ, ಗೋಡಂಬಿ. ಏಲಕ್ಕಿ, ಇತ್ಯಾದಿ). ಸಿಹಿ ಮತ್ತು ಖಾರಪೊಂಗಲ್ ಅನ್ನು ನಿವೇದಿಸುತ್ತಾರೆ.
ಉತ್ತರಾಯಣ ಪುಣ್ಯಕಾಲದಲ್ಲಿ, ನವಗ್ರಹ ಪೂಜೆ ಮತ್ತು ಕುಂಬಳಕಾಯಿಗೆ (ಕೂಷ್ಮಾಂಡ- ಮೃತ್ಯುಂಜಯ), ಪೂಜೆ ಸಲ್ಲಿಸಿ, ವಸ್ತ್ರ, ಎಳ್ಳು ಮಿಶ್ರಣ, ದಕ್ಷಿಣೆ ಸಹಿತ ಸತ್ಪಾತ್ರರಿಗೆ ದಾನವನ್ನು ಕೊಡುವ ಸಂಪ್ರದಾಯವು ಇದೆ. ಈ ಕಾಲದಲ್ಲಿ, ಗೋವುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಗೋವಿನ ದೇಹದಲ್ಲಿ ವಿವಿಧ ದೇವ, ದೇವತೆಯರು, ಋಷಿಗಳು ನೆಲಸಿದ್ದಾರೆ. ಅದರಿಂದಲೇ ಗೋಮಾತೆಗೆ ಅಕ್ಕಿ, ಬೆಲ್ಲ ತಿನ್ನಿಸುತ್ತಾರೆ. ಗೋವಿನ ಎರಡು ಕೊಂಬುಗಳು ಉತ್ತರ ಮತ್ತು ದಕ್ಷಿಣಾಯನದ ಸಂಕೇತವೆಂದು ಕೊಂಬುಗಳನ್ನು ಅಲಂಕರಿಸುತ್ತಾರೆ. ಗೋಮಯ, ಗೋಮೂತ್ರದ ಪಾವಿತ್ರ್ಯತೆ ಮತ್ತು ಅದರ ಉಪಯೋಗಗಳು ಎಲ್ಲರಿಗೂ ತಿಳಿದಿದೆ. ಗೋಕ್ಷೀರ, ಮತ್ತು ಗೋಕ್ಷೀರದಿಂದಾಗುವ, ಮೊಸರು, ತುಪ್ಪ, ಎಲ್ಲವು ಶ್ರೇಷ್ಠ. ಅದರಿಂದಲೇ ಗೋಮಾತೆಗೆ ನಿತ್ಯ ಪೂಜೆಯ ಜೊತೆಗೆ ಈ ಕಾಲದಲ್ಲಿ ಪೀಡಾ ಪರಿಹಾರಕ್ಕಾಗಿ ಸಂಜೆಯ ಸಮಯದಲ್ಲಿ ಅಲಂಕೃತವಾದ ಗೋವುಗಳನ್ನು ಬೆಂಕಿಯ ಕಿಚ್ಚಿನಲ್ಲಿ ಹಾರಿಸುವ ಸಂಪ್ರದಾಯ ಅನಾದಿಕಾಲದಿಂದಲು ಬಂದಿದೆ.
ಸಂಕ್ರಾಂತಿ ಹಬ್ಬದ ದಿನ ಮಕ್ಕಳಿಗೆ, ಕಬ್ಬಿನಚೂರು, ಎಲಚಿ (ಬೋರೆಹಣ್ಣು) ಹಣ್ಣು, ನಾಣ್ಯಗಳ ಧಾರೆಯನ್ನು ಹಾಕಿ, ಎಳ್ಳಿನ ಮಿಶ್ರಣವನ್ನು ನಿವಾಳಿಸಿ ಬಂಧುಗಳಿಗೆ ಮತ್ತು ಇತರರಿಗೆ ಹಂಚುತ್ತಾರೆ. ಈ ಮಿಶ್ರಣವನ್ನು ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂದು ಹೇಳುವುದು ವಾಡಿಕೆ. ಮನೆ ಮನೆಗೆ, ಹೆಣ್ಣು ಮಕ್ಕಳು ಎಳ್ಳು ಬೀರುವುದನ್ನು ನೋಡುವುದಕ್ಕೆ ಆನಂದವಾಗುತ್ತದೆ.
ಮಕರ ಸಂಕ್ರಮಣ ಕಾಲದಲ್ಲಿ ಮಕರ ಸಂಕ್ರಾಂತಿ ಫಲವನ್ನು ಪಂಡಿತರ ಮುಖಾಂತರ ಓದಿಸುವ ಪದ್ಧತಿಗಳನ್ನು ಕೆಲವುಕಡೆ ನಾವು ಕಾಣಬಹುದು. ಈ ಸಂಕ್ರಾಂತಿ ಪುರುಷನ ಆಕಾರ, ವಾಹನ, ನದಿಯ ಸ್ನಾನ ಮತ್ತು ಲಕ್ಷಣಗಳ ಮೇಲೆ ಫಲಗಳಿರುತ್ತದೆ. ಈ ವರ್ಷ ಸಂಕ್ರಾಂತಿ ಪುರುಷನು 14.1.2023ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಫಲವು ಒಂದುವರ್ಷದ ಕಾಲದವರೆಗೂ ಇರುತ್ತದೆ. ಈ ಸಂಕ್ರಾಂತಿ ಪುರುಷನ ಹೆಸರು ರಾಕ್ಷಸ, ಅವನ ವಾಹನ ಹುಲಿ ತುಂಗಾ ನದಿಯಲ್ಲಿ ಸ್ನಾನ ಇತ್ಯಾದಿ.
ವಿವಿಧ ಬದಲಾವಣೆ, ವಿಶೇಷತೆ:ಮಕರ ಸಂಕ್ರಮಣ ಕಾಲದಲ್ಲಿ ವಿವಿಧ ಬದಲಾವಣೆಗಳನ್ನು ನಾವು ಕಾಣಬಹುದು. ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಮಣ ಕಾಲದಲ್ಲಿ ಸೂರ್ಯನ ಕಿರಣಗಳು ಲಿಂಗದ ಮೇಲೆ ಬೀಳುತ್ತದೆ. ಹಾಗೆಯೇ ಶೃಂಗೇರಿಯಲ್ಲಿರುವ ವಿದ್ಯಾಶಂಕರ ದೇವಾಲಯದ ಒಳಗಿನ ಪ್ರಕಾರದಲ್ಲಿ 12 ಕಂಭಗಳಿವೆ. ಇವು 12 ರಾಶಿಗಳನ್ನು ಪ್ರತಿಬಿಂಬಿಸುತ್ತದೆ. ಆಯಾಯ ಮಾಸದಲ್ಲಿ, ಆ ಕಂಬಗಳ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ನಾವು ಕಾಣಬಹುದು. ಇದು ಶಿಲ್ಪಿಯ ಚತುರತೆಯನ್ನು ಸೂಚಿಸುತ್ತದೆ. ತುಮಕೂರಿನ ಸಮೀಪವಿರುವ ಶಿವಗಂಗೆ (ಗಂಗಾಧರೇಶ್ವರ ಮತ್ತು ಹೊನ್ನಾದೇವಿಯ ಸನ್ನಿಧಿ) ಬೆಟ್ಟದ ಮೇಲಿರುವ ತೀರ್ಥ ಕಂಬದ ಕೆಳಗೆ ಮಕರ ಸಂಕ್ರಮಣ ಕಾಲದಲ್ಲಿ ಗಂಗೋತ್ಪತ್ತಿ (ಗಂಗಾ) ಆಗುತ್ತದೆ. ಈ ಪವಿತ್ರ ಜಲವನ್ನು ಶುಭ್ರವಾದ ಬಟ್ಟೆಯಿಂದ ಶೇಖರಿಸಿ, ಕುಂಭದಲ್ಲಿ ತುಂಬುತ್ತಾರೆ. ಈ ಪವಿತ್ರ ಜಲದ ಸ್ವಲ್ಪ ಭಾಗವನ್ನು ಮೈಸೂರಿನ ಅರಮನೆಗೆ ಕೊಡುವ ಸಂಪ್ರದಾಯವಿದೆ ಎಂದು ತಿಳಿಯುತ್ತದೆ. ಹಾಗೆ, ಈ ಕಾಲದಲ್ಲಿ ಬೆಟ್ಟದ ಕೆಳಗಿರುವ ಗಂಗಾಧರೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣವಾಗುತ್ತದೆ. ಈ ಗಂಗೆಯನ್ನು ಧಾರೆಯ ಕಾಲದಲ್ಲಿ ಉಪಯೋಗಿಸುತ್ತಾರೆ ಎಂಬುದಾಗಿ ಹೇಳುತ್ತಾರೆ.
ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

ಪರಾರಿಯಾಗಲಿಕ್ಕೆ ಎರಡು ಹ್ಯುಂಡೈ ಕಾರು ಬಳಸಿದ್ದ ಸ್ಯಾಂಟ್ರೋ ರವಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nine =
Remember me
